
ಹಲವು ದೇಶಗಳ ಸಿನಿಮಾಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಪ್ರದರ್ಶನ ಮಾಡಲಾಗುತ್ತಿದೆ. ಸುಚಿತ್ರಾ ಫಿಲ್ಮ್ ಸೊಸೈಟಿ, ಲುಲು ಮಾಲ್ ಹಾಗೂ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ನಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಇದ್ದವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ..
1. ಡೆಡ್ ಡಾಗ್ – ಲೆಬನಾನ್/ ಫ್ರಾನ್ಸ್. (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1). ವಿವರ: ಸಾರಾ ಫ್ರಾನ್ಸಿಸ್ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಸಮಕಾಲೀನ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತದೆ. 92 ನಿಮಿಷಗಳ ಅವಧಿಯ ಈ ಸಿನಿಮಾ ಅಂತರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆದಿದೆ.
2. ದ ಪೋರ್ಚುಗೀಸ್ ಹೌಸ್ – ಸ್ಪೇನ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 2). ವಿವರ: ಅವೆಲಿನಾ ಪ್ರಾಟ್ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತದೆ. ಇದು 114 ನಿಮಿಷಗಳ ಭಾವನಾತ್ಮಕ ಪ್ರಯಾಣವಾಗಿದೆ.
3. ಆ್ಯಶಸ್ ಆ್ಯಂಡ್ ಡೈಮಂಡ್ಸ್ – ಪೋಲೆಂಡ್ (ಸಮಯ: ಬೆಳಗ್ಗೆ 9:50, ವಿಐಪಿ ಸ್ಕ್ರೀನ್ 3). ವಿವರ: ಆಂಡ್ರೆಜ್ ವಾಜ್ದಾ ನಿರ್ದೇಶನದ 1958ರ ಈ ಸಿನಿಮಾ ವಿಶ್ವ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದು. ಪೋಲಿಷ್ ಭಾಷೆಯ ಈ ಚಿತ್ರವು ಯುದ್ಧದ ನಂತರದ ಪರಿಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸುತ್ತದೆ.
4. ಮದರ್ ಟಂಗ್ – ಚೀನಾ (ಸಮಯ: ಮಧ್ಯಾಹ್ನ 12:00, ಸ್ಕ್ರೀನ್ 3). ವಿವರ: ಜಾಂಗ್ ಲು ನಿರ್ದೇಶನದ ಈ ಮ್ಯಾಂಡರಿನ್ ಭಾಷೆಯ ಚಿತ್ರವು ಭಾಷೆ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯನ್ನು ವಿವರಿಸುತ್ತದೆ. 122 ನಿಮಿಷಗಳ ಈ ಚಿತ್ರವು ಸಿನಿಮಾ ಪ್ರೇಮಿಗಳಿಗೆ ಉತ್ತಮ ಆಯ್ಕೆ.
5. ದ ನೇಚರ್ ಆಫ್ ಇನ್ವಿಸಿಬಲ್ ಥಿಂಗ್ಸ್- ಬ್ರೇಜಿಲ್ (ಸಮಯ: ಸಂಜೆ 6:00, ಸುಚಿತ್ರಾ ಫಿಲ್ಮ್ ಸೊಸೈಟಿ). ವಿವರ: ರಾಫೆಲಾ ಕ್ಯಾಮೆಲೊ ನಿರ್ದೇಶನದ ಈ 2025ರ ಪೋರ್ಚುಗೀಸ್ ಚಿತ್ರವು ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.
6. ಚಾಪಿನ್, ಎ ಸೋನಾಟಾ ಇನ್ ಪ್ಯಾರಿಸ್ – ಪೋಲೆಂಡ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 4). ವಿವರ: ಮೈಕಲ್ ಕ್ವಿನ್ಸಿನ್ಸ್ಕಿ ನಿರ್ದೇಶನದ ಈ ಪೋಲಿಷ್ ಸಿನಿಮಾ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ. 133 ನಿಮಿಷಗಳ ಸುದೀರ್ಘ ಕಥಾಹಂದರವನ್ನು ಇದು ಹೊಂದಿದೆ.
ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ
7. ಭವನಿ ಭವಾಯಿ – ಗುಜರಾತಿ (ಸಮಯ: ರಾತ್ರಿ 8:10, ವಿಐಪಿ ಸ್ಕ್ರೀನ್ 3). ವಿವರ: ಕೇತನ್ ಮೆಹ್ತಾ ನಿರ್ದೇಶನದ 1980ರ ಈ ಕ್ಲಾಸಿಕ್ ಚಿತ್ರವು ಜಾನಪದ ಶೈಲಿಯಲ್ಲಿದೆ. ಜಾತಿ ಪದ್ಧತಿಯ ವಿಡಂಬನೆ ಮಾಡುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.
8. ವಾಸ್ತುಹಾರ – ಮಲಯಾಳಂ (ಸಮಯ: ರಾತ್ರಿ 8:30, ವಿಐಪಿ ಸ್ಕ್ರೀನ್ 2). ವಿವರ: ಜಿ. ಅರವಿಂದನ್ ನಿರ್ದೇಶನದ ಈ 1991ರ ಸಿನಿಮಾ ಬಂಗಾಳದ ವಿಭಜನೆಯ ಸಂದರ್ಭದ ನಿರಾಶ್ರಿತರ ಕಥೆಯನ್ನು ಹೇಳುತ್ತದೆ. ಇದು ಬಹಳ ಗಂಭೀರವಾದ ಮತ್ತು ಅರ್ಥಪೂರ್ಣವಾದ ಸಿನಿಮಾ.
9. ಎ ಪೋಯೆಟ್ – ಕೊಲಂಬಿಯಾ/ ಸ್ಪೇನ್ (ಸಮಯ: ರಾತ್ರಿ 8:00, ಸ್ಕ್ರೀನ್ 5). ವಿವರ: ಸಿಮೋನ್ ಮೆಸಾ ಸೊಟೊ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಕವಿ ಮತ್ತು ಅವನ ಬದುಕಿನ ಸುತ್ತ ಸಾಗುತ್ತದೆ.
10. ಎ ಪ್ರೆಗ್ನೆಂಟ್ ವಿಡೋ – ಮಲಯಾಳಂ (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 2). ವಿವರ: ಉಣ್ಣಿ ಕೆ.ಆರ್. ನಿರ್ದೇಶನದ ಈ ಹೊಸ ಚಿತ್ರವು ಸಮಕಾಲೀನ ಕೇರಳದ ಸಾಮಾಜಿಕ ಚಿತ್ರಣವನ್ನು ನೀಡುತ್ತದೆ. 125 ನಿಮಿಷಗಳ ಈ ಸಿನಿಮಾ ಗಂಭೀರ ಚರ್ಚೆಗೆ ಹಾದಿ ಮಾಡಿಕೊಡುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.