ಭಾರತದಲ್ಲಿ ಕೊರಿಯನ್ ಮ್ಯೂಸಿಕ್ ಧಮಾಕ; ಭಾರತಕ್ಕೆ ಕಾಲಿಡಲಿದೆ ಜಾಗತಿಕ ಕೆ-ಪಾಪ್ ಹಬ್ಬ ‘ವೀವರ್ಸ್ ಕಾನ್’

ಜಾಗತಿಕ ಕೆ-ಪಾಪ್ ದೈತ್ಯ ಸಂಸ್ಥೆ ಹೈಬ್, ತನ್ನ ಪ್ರಖ್ಯಾತ 'ವೀವರ್ಸ್ ಕಾನ್ ಫೆಸ್ಟಿವಲ್' ಸಂಗೀತ ಉತ್ಸವವನ್ನು 2027ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸುತ್ತಿದೆ. ದಕ್ಷಿಣ ಕೊರಿಯಾದ ಹೊರಗೆ ನಡೆಯುತ್ತಿರುವ ಮೊದಲ ಆವೃತ್ತಿ ಇದಾಗಿದ್ದು, ಭಾರತೀಯ ಹಾಗೂ ಕೊರಿಯನ್ ಕಲಾವಿದರ ಜಂಟಿ ಪ್ರದರ್ಶನಗಳು ಅಭಿಮಾನಿಗಳಿಗೆ ಪ್ರಮುಖ ಆಕರ್ಷಣೆಯಾಗಲಿವೆ.

ಭಾರತದಲ್ಲಿ ಕೊರಿಯನ್ ಮ್ಯೂಸಿಕ್ ಧಮಾಕ; ಭಾರತಕ್ಕೆ ಕಾಲಿಡಲಿದೆ ಜಾಗತಿಕ ಕೆ-ಪಾಪ್ ಹಬ್ಬ ವೀವರ್ಸ್ ಕಾನ್
ಬಿಟಿಎಸ್

Updated on: Oct 08, 2026 | 1:21 PM

ಮುಖ್ಯಾಂಶಗಳು

  • ಭಾರತಕ್ಕೆ ಕಾಲಿಡಲಿದೆ ಜಾಗತಿಕ ಕೆ-ಪಾಪ್ ಹಬ್ಬ
  • 2027ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ 'ವೀವರ್ಸ್ ಕಾನ್'
  • ಕೊರಿಯನ್ ಹಾಗೂ ಭಾರತೀಯ ಸಂಗೀತದ ಸಮ್ಮಿಲನ 

ಭಾರತದ ಕೆ-ಪಾಪ್ ಸಂಗೀತ ಪ್ರಿಯರಿಗೆ ಕೊರಿಯನ್ ಮ್ಯೂಸಿಕ್ ಸಂಸ್ಥೆ ಹೈಬ್ ಸಿಹಿ ಸುದ್ದಿ ನೀಡಿದೆ. ತನ್ನ ಅತ್ಯಂತ ಜನಪ್ರಿಯ ಜಾಗತಿಕ ಸಂಗೀತ ಉತ್ಸವ ‘ವೀವರ್ಸ್ ಕಾನ್ ಫೆಸ್ಟಿವಲ್’ ಅನ್ನು ಪ್ರಥಮ ಬಾರಿಗೆ ಭಾರತಕ್ಕೆ ತರಲು ಸಜ್ಜಾಗಿದೆ. ದಕ್ಷಿಣ ಕೊರಿಯಾದ ಹೊರಗೆ ನಡೆಯುತ್ತಿರುವ ಮೊದಲ ಆವೃತ್ತಿ ಇದಾಗಿದೆ. ಇದು ಭಾರತೀಯ ಕೆ-ಪಾಪ್ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ.

ಈ ಬೃಹತ್ ಸಂಗೀತ ಉತ್ಸವವು 2027ರ ಮಾರ್ಚ್ 27 ಮತ್ತು 28 ರಂದು ನವದೆಹಲಿಯಲ್ಲಿ ನಡೆಯಲಿದೆ. ಪ್ರಖ್ಯಾತ ಬಿಟಿಎಸ್, ಸೆವೆಂಟೀನ್, ಟಿಎಕ್ಸ್‌ಟಿ ಹಾಗೂ ಎನ್‌ಹೈಪನ್ ಸೇರಿದಂತೆ ಹಲವು ದೈತ್ಯ ಕೆ-ಪಾಪ್ ತಂಡಗಳನ್ನು ಹೊಂದಿರುವ ಹೈಬ್ ಸಂಸ್ಥೆ ಭಾರತದಲ್ಲಿ ಈ ಬೃಹತ್ ಆಯೋಜನೆ ಮಾಡುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ದೆಹಲಿ ನಗರ ಕಳೆಗಟ್ಟಲಿದೆ.

ಈ ಉತ್ಸವದಲ್ಲಿ ಕೇವಲ ಕೊರಿಯನ್ ಕಲಾವಿದರಷ್ಟೇ ಅಲ್ಲದೆ ಭಾರತೀಯ ಸಂಗೀತಗಾರರು ಸಹ ಭಾಗವಹಿಸುವ ನಿರೀಕ್ಷೆಯಿದೆ. ಕೆ-ಪಾಪ್ ಮತ್ತು ಭಾರತೀಯ ಸಂಗೀತ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೊರಿಯನ್ ಮತ್ತು ಭಾರತೀಯ ಕಲಾವಿದರ ಜಂಟಿ ಪ್ರದರ್ಶನಗಳು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.

ಸಂಗೀತ ಪ್ರದರ್ಶನಗಳ ಜೊತೆಗೆ ಅಭಿಮಾನಿಗಳಿಗಾಗಿ ವಿಶೇಷ ಸಂವಾದ ಹಾಗೂ ವಿಭಿನ್ನ ಅನುಭವಗಳ ವ್ಯವಸ್ಥೆ ಇರಲಿದೆ. ಭಾರತದ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ‘ಹೈಬ್ ಇಂಡಿಯಾ’ ಈಗಾಗಲೇ ದೇಶಾದ್ಯಂತ ಆಡಿಷನ್‌ಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಕೆ-ಪಾಪ್ ಕ್ರೇಜ್‌ನಿಂದ ಬಿಲಿಯನ್ ಡಾಲರ್ ಹೂಡಿಕೆ: ಕನ್ನಡಿಗರಿಗೆ ಕಾಯುತ್ತಿದೆ ಉದ್ಯೋಗಾವಕಾಶಗಳ ಸುರಿಮಳೆ!

ಹೈಬ್ ಸಂಸ್ಥೆಯ ಮುಖ್ಯಸ್ಥರು ಭಾರತವನ್ನು ತಮ್ಮ ಪ್ರಮುಖ ಜಾಗತಿಕ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದಾರೆ. ಈ ಮ್ಯೂಸಿಕ್ ಫೆಸ್ಟಿವಲ್ ಮೂಲಕ ಕೊರಿಯನ್ ಮತ್ತು ಭಾರತೀಯ ಅಭಿಮಾನಿಗಳನ್ನು ಒಂದೇ ಸೂರಿನಡಿ ತರುವ ಆಶಯ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರ ಸಂಪೂರ್ಣ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us