AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jr NTR: ಜೂ ಎನ್​ಟಿಆರ್ ತೊಟ್ಟಿರುವ ಟಿ-ಶರ್ಟ್ ಬೆಲೆಗೆ 150 ಲೀಟರ್ ಪೆಟ್ರೊಲ್ ಬರುತ್ತೆ!

ದುಬಾರಿ ಸಂಭಾವನೆ ಪಡೆವ ನಟ ಜೂ ಎನ್​ಟಿಆರ್, ಅದಕ್ಕೆ ತಕ್ಕಂತೆ ಐಶಾರಾಮಿ ಜೀವನ ಶೈಲಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಜೂ ಎನ್​ಟಿಆರ್ ಭಾಗವಹಿಸಿದ್ದ ಇವೆಂಟ್​ ಒಂದರಲ್ಲಿ ಅವರು ಧರಿಸಿದ್ದ ಟಿ-ಶರ್ಟ್ ಗಮನ ಸೆಳೆದಿದ್ದು, ಟಿ-ಶರ್ಟ್ ಬೆಲೆ ಎಷ್ಟು ಗೊತ್ತೆ?

Jr NTR: ಜೂ ಎನ್​ಟಿಆರ್ ತೊಟ್ಟಿರುವ ಟಿ-ಶರ್ಟ್ ಬೆಲೆಗೆ 150 ಲೀಟರ್ ಪೆಟ್ರೊಲ್ ಬರುತ್ತೆ!
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on:Mar 18, 2023 | 10:19 PM

Share

ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆವ ಸ್ಟಾರ್ ನಟರು ತಮ್ಮ ಸಂಭಾವನೆಯ (Remuneration) ಸೈಜಿಗೆ ಹೊಂದುವಂತೆಯೇ ಐಶಾರಾಮಿ ಜೀವನಶೈಲಿ ರೂಢಿಸಿಕೊಂಡಿರುತ್ತಾರೆ. ವಿದೇಶಿ ಕಾರುಗಳು, ದೊಡ್ಡ-ದೊಡ್ಡ ಮನೆಗಳು ಸಾಮಾನ್ಯ. ಇವರು ತೊಡುವ ಬಟ್ಟೆಗಳು ಸಹ ತುಸು ತುಟ್ಟಿಯಲ್ಲ. ಸಾಮಾನ್ಯವಾಗಿರುವಂತೆ ಕಾಣುವ ಬಟ್ಟೆಗಳು ಸಹ ಭಾರಿ ಬೆಲೆಯ ಟ್ಯಾಗ್ ಹೊಂದಿರುತ್ತವೆ. ಇತ್ತೀಚೆಗಷ್ಟೆ ಆಸ್ಕರ್​ ಇವೆಂಟ್ ಅಟೆಂಡ್​ಮಾಡಿ ವಾಪಸ್ಸಾಗಿರುವ ನಟ ಜೂ ಎನ್​ಟಿಆರ್ (Jr NTR) ತೆಲುಗು ಸಿನಿಮಾವೊಂದರ ಪ್ರೀ ರಿಲೀಸ್ ಇವೆಂಟ್​ನಲ್ಲಿ ಭಾಗವಹಿಸಿದ್ದರು. ಇವೆಂಟ್​ನಲ್ಲಿ ಜೂ ಎನ್​ಟಿಆರ್ ತೊಟ್ಟಿದ್ದ ಟಿ-ಶರ್ಟ್ ತೀರ ಅದ್ಭುತ ಎಂಬಂತಿರಲಿಲ್ಲವಾದರೂ ಬೆಲೆ ಮಾತ್ರ ಅಬ್ಬಬ್ಬ!

ತೆಲುಗು ಚಿತ್ರರಂಗದ ಯುವನಟ ವಿಶ್ವಕ್​ ಸೇನ್ ನಟಿಸಿರುವ ‘ದಾಸ್ ಕ ಧಮ್ಕಿ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಿನ್ನೆ ಮಾರ್ಚ್ 17 ರಂದು ಜೂ ಎನ್​ಟಿಆರ್ ಭಾಗವಹಿಸಿದ್ದರು. ಇವೆಂಟ್​ನಲ್ಲಿ ಅವರ ಭಾಷಣದ ಜೊತೆಗೆ ಅವರು ಧರಿಸಿದ್ದ ಟಿ-ಶರ್ಟ್ ಸಹ ಗಮನ ಸೆಳೆಯಿತು. ಕಪ್ಪು ಬಿಳಿಪು ಬಣ್ಣದ ಪುಲ್​ಓವರ್ ಅಥವಾ ಹುಡಿ ಮಾದರಿಯ ಟಿ-ಶರ್ಟ್ ಅನ್ನು ಜೂ ಎನ್​ಟಿಆರ್ ಧರಿಸಿದ್ದರು. ಬಟ್ಟೆ ಅಂಗಡಿಗಳಲ್ಲಿ ಸುಮಾರು 1000-1500 ರುಪಾಯಿಗಳಿಗೆ ದೊರಕಿಬಿಡಬಹುದಾದ ಟಿ-ಶರ್ಟ್ ಅದು ಎನಿಸುವಂತಿತ್ತು. ಆದರೆ ಅದರ ನಿಜವಾದ ಬೆಲೆ ಮಾತ್ರ ಬಲು ದುಬಾರಿ.

ಪ್ರೀ ರಿಲೀಸ್ ಇವೆಂಟ್​ನಲ್ಲಿ ಜೂ ಎನ್​ಟಿಆರ್ ಧರಿಸಿದ್ದಿದ್ದು ಒನಿಟ್ಸುಕಾ ಟೈಗರ್ ಬ್ರ್ಯಾಂಡ್​ನ ಹುಡಿ. ಆ ಹುಡಿಯ ಬೆಲೆ 15,200 ರುಪಾಯಿಗಳು! ಇಷ್ಟು ಹಣಕ್ಕೆ 150 ಲೀಟರ್ ಪೆಟ್ರೊಲ್ ಖರೀದಿ ಮಾಡಬಹುದು. ಇವೆಂಟ್​ನಲ್ಲಿ ಜೂ ಎನ್​ಟಿಆರ್ ಧರಿಸಿದ್ದ ಶೂ ಸಹ ಅದೇ ಬ್ರ್ಯಾಂಡ್​ನದ್ದು ಎನ್ನಲಾಗುತ್ತಿದ್ದು, ಶೂನ ನಿಖರ ಬೆಲೆಯ ಮಾಹಿತಿ ಇಲ್ಲ. ಆದರೆ ಒನಿಟ್ಸುಕಾ ಟೈಗರ್ ಬ್ರ್ಯಾಂಡ್​ನ ಶೂಗಳು, ಅವರ ಟೀ-ಶರ್ಟ್​ಗಳಷ್ಟೆ ದುಬಾರಿ.

ಒನಿಟ್ಸುಕಾ ಟೈಗರ್​ ಬ್ರ್ಯಾಂಡ್​ನ ಕೇವಲ ಎಂಟು ಶಾಪ್​ಗಳಷ್ಟೆ ಭಾರತದಲ್ಲಿದೆ. ದೆಹಲಿಯಲ್ಲಿ ಮೂರು, ಮುಂಬೈನಲ್ಲಿ ಎರಡು, ಪಂಜಾಬ್​ನ ಚಂಡೀಘಡ್​ನಲ್ಲಿ ಒಂದು, ಪುಣೆಯಲ್ಲಿ ಒಂದು ಹಾಗೂ ಹೈದರಾಬಾದ್​ನಲ್ಲಿ ಒಂದು ಶಾಪ್​ ಇದೆ. ಟಿ-ಶರ್ಟ್, ಶೂಗಳನ್ನಷ್ಟೆ ಈ ಬ್ರ್ಯಾಂಡ್​ನವರು ಮಾರಾಟ ಮಾಡುತ್ತಾರೆ.

ಜೂ ಎನ್​ಟಿಆರ್ ತಮ್ಮ ನಟನೆಯಿಂದ ಮಾತ್ರವಲ್ಲದೆ ಲಕ್ಸುರಿ ಜೀವನ ಶೈಲಿಯಿಂದಲೂ ಜನಪ್ರಿಯರು. ಸುಮಾರು 3.50 ಕೋಟಿಗೂ ಹೆಚ್ಚು ಬೆಲೆಯ ಲ್ಯಾಂಬರ್ಗಿನಿ ಉರುಸ್ ಕಾರು ಹೊಂದಿರುವ ಜೂ ಎನ್​ಟಿಆರ್ ದೊಡ್ಡ ಮೊತ್ತದ ಬೆಲೆ ತೆತ್ತು 9999 ನಂಬರ್ ಸಹ ಹಾಕಿಸಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಮಾತ್ರವೇ ಅಲ್ಲದೆ ಇನ್ನೂ ಹಲವು ಐಶಾರಾಮಿ ಕಾರುಗಳನ್ನು ಜೂ ಎನ್​ಟಿಆರ್ ಹೊಂದಿದ್ದಾರೆ. ಹೈದರಾಬಾದ್​ನಲ್ಲಿ ಇಂಟೀರಿಯರ್ ಜಿಮ್, ಥಿಯೇಟರ್ ಇನ್ನಿತರೆ ಸವಲತ್ತುಗಳನ್ನು ಒಳಗೊಂಡಿರುವ ಐಶಾರಾಂಇ ಸಹ ಮನೆಯ ಒಡೆಯರೂ ಹೌದು.

ಆರ್​ಆರ್​ಆರ್​ ಸಿನಿಮಾದ ಮೂಲಕ ದೊಡ್ಡ ಗೆಲುವು ಪಡೆದಿರುವ ನಟ ಜೂ ಎನ್​ಟಿಆರ್ ಇದೀಗ ಕೊರಟಾಲ ಶಿವ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿ. ಸೈಫ್ ಅಲಿ ಖಾನ್ ವಿಲನ್ ಎನ್ನಲಾಗುತ್ತಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಜೂ ಎನ್​ಟಿಆರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Sat, 18 March 23

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ