ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

Rajamouli's favourite movie: ರಾಜಮೌಳಿ ಭಾರತದ ನಂಬರ್ 1 ಸಿನಿಮಾ ನಿರ್ದೇಶಕ. ಅವರ ಸಿನಿಮಾಗಳನ್ನು ನೋಡಿ ಇಂದು ಹಲವಾರು ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಾಜಮೌಳಿಗೆ ಇಷ್ಟವಾದ ಸಿನಿಮಾಗಳು ಯಾವುವು? ಯಾವ ಸಿನಿಮಾಗಳನ್ನು ನೋಡಿ ಅವರು ಸಿನಿಮಾ ರಂಗಕ್ಕೆ ಬಂದರು? ಯಾವ ಶೋಗಳು ಅವರಿಗೆ ಬಹಳ ಇಷ್ಟ? ಮಾಹಿತಿ ಇಲ್ಲಿದೆ...

ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?
Ss Rajamouli

Updated on: Feb 12, 2026 | 1:34 PM

ಎಲ್ಲ ಸಿನಿಮಾ ಕರ್ಮಿಗಳು ಅವರಿಗೆ ಇಷ್ಟವಾದ ಸಿನಿಮಾಗಳು, ಅವರು ಸ್ಪೂರ್ತಿ ಪಡೆದ ಸಿನಿಮಾಗಳು, ಅವರು ಸಿನಿಮಾ ರಂಗಕ್ಕೆ ಕಾಲಿಡಲು ಸ್ಪೂರ್ತಿ ನೀಡಿದ ಸಿನಿಮಾಗಳು ಇದ್ದೇ ಇರುತ್ತವೆ. ರಾಜಮೌಳಿಯ (Rajamouli) ಸಿನಿಮಾಗಳನ್ನು ನೋಡಿ ಇಂದು ಹಲವಾರು ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಾಜಮೌಳಿಗೆ ಇಷ್ಟವಾದ ಸಿನಿಮಾಗಳು ಯಾವುವು? ಯಾವ ಸಿನಿಮಾಗಳನ್ನು ನೋಡಿ ಅವರು ಸಿನಿಮಾ ರಂಗಕ್ಕೆ ಬಂದರು? ಯಾವ ಶೋಗಳು ಅವರಿಗೆ ಬಹಳ ಇಷ್ಟ? ಮಾಹಿತಿ ಇಲ್ಲಿದೆ…

ರಾಜಮೌಳಿ ಅವರೇ ಹೇಳಿಕೊಂಡಿರುವಂತೆ ಅವರು ಬಹಳ ಸಿನಿಮಾಗಳನ್ನು ನೋಡುತ್ತಾರಂತೆ. ಒಳ್ಳೆಯ ಸಿನಿಮಾಗಳನ್ನು ಖಂಡಿತ ನೋಡುತ್ತೀನಿ ಎಂದು ಹಿಂದೆ ಅವರು ಹೇಳಿದ್ದರು. ರಾಜಮೌಳಿ ಅವರಿಗೆ ಹಲವು ಇಷ್ಟದ ಸಿನಿಮಾಗಳು ಇವೆಯಂತೆ. ಭಾರಧ್ವಜ ರಂಗನ್ ಅವರ ಸಂದರ್ಶನದಲ್ಲಿ ಅವರು ಹೇಳಿರುವಂತೆ, ‘ಬೆನ್ ಹರ್’ ಸಿನಿಮಾ ರಾಜಮೌಳಿಯ ಆಲ್​​ಟೈಮ್ ಫೆವರೇಟ್ ಸಿನಿಮಾಗಳಲ್ಲಿ ಒಂದಂತೆ.

‘ಬೆನ್ ಹರ್’ 1959 ರಲ್ಲಿ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ. ಈ ಸಿನಿಮಾದ ಆಕ್ಷನ್, ಸಿನಿಮಾನಲ್ಲಿರುವ ರಾಜಕೀಯ ರಾಜಮೌಳಿಗೆ ಬಹಳ ಇಷ್ಟವಂತೆ. ಹಲವು ಬಾರಿ ಅವರು ಅವರು ‘ಬೆನ್ ಹರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅದರ ಬಳಿಕ ತೆಲುಗಿನ ಹಳೆಯ ಸಿನಿಮಾ ‘ಮಾಯಾಬಜಾರ್’ ಸಹ ರಾಜಮೌಳಿಯ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ 1957 ರಲ್ಲಿ ಬಿಡುಗಡೆ ಆಗಿದ್ದು ಕೆವಿ ರೆಡ್ಡಿ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿದೆ.

ಇವುಗಳ ಹೊರತಾಗಿ ರಾಜಮೌಳಿ ಅವರಿಗೆ ಸ್ಟಿಫನ್ ಸ್ಪೀಲ್​​ಬರ್ಗ್ ಅವರ ಇಂಡಿಯಾನಾ ಜೋನ್ಸ್ ಸರಣಿ ಇಷ್ಟವಂತೆ. ಬಹಳ ವರ್ಷಗಳ ಹಿಂದೆ ಬಂದಿದ್ದ ಸ್ಪೈಡರ್​ಮ್ಯಾನ್ ಸಿನಿಮಾ ಸಹ ಇಷ್ಟವಾಗಿತ್ತಂತೆ. ಇವೆಲ್ಲವೂ ಅವರು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದವಂತೆ. ಇನ್ನು ರಾಜಮೌಳಿ ವೆಬ್ ಸರಣಿಗಳನ್ನು ಸಹ ಇಷ್ಟಪಟ್ಟು ನೋಡುತ್ತಾರಂತೆ.

ಇದನ್ನೂ ಓದಿ:ಜಪನೀಸ್​ ಸ್ಟುಡಿಯೋಗಳ ಜೊತೆ ದೊಡ್ಡ ಡೀಲ್​​​ಗೆ ಮುಂದಾದ ರಾಜಮೌಳಿ

ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, ತಾವು ‘ಗೇಮ್ ಆಫ್ ಥ್ರೋನ್ಸ್’ ಮತ್ತು ‘ಬ್ರೇಕಿಂಗ್ ಬ್ಯಾಡ್’ ಎರಡೂ ಸರಣಿಗಳನ್ನು ವೀಕ್ಷಿಸಿದ್ದು, ಈ ಎರಡೂ ಸರಣಿಗಳ ಕೊನೆಯ ಸೀಸನ್ ತಮಗೆ ಇಷ್ಟವಾಗಲಿಲ್ಲವೆಂದು ಹೇಳಿದ್ದಾರೆ. ಅದರ ಜೊತೆಗೆ ಈ ಎರಡರಲ್ಲಿ ತಮಗೆ ‘ಗೇಮ್ ಆಫ್ ಥ್ರೋನ್ಸ್’ ಸರಣಿಯೇ ಹೆಚ್ಚು ಇಷ್ಟ ಎಂದಿದ್ದರು. ಇವುಗಳ ಜೊತೆಗೆ ಅವರಿಗೆ ‘ನಾರ್ಕೊಸ್’ ವೆಬ್ ಸರಣಿ ಸಹ ಬಹಳ ಇಷ್ಟವಾಗಿತ್ತಂತೆ.

ಅಸಲಿಗೆ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ‘ಬ್ಯಾಟಲ್ ಆಫ್ ದಿ ಬಾರ್ಸರ್ಡ್ಸ್’ ಎಪಿಸೋಡ್ ಅನ್ನು ಆಧರಿಸಿ ‘ಬಾಹುಬಲಿ 2’ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಬರೆಯುವ ಪ್ರಯತ್ನ ಮಾಡಿದ್ದರಂತೆ. ಅದರಲ್ಲೂ ಎರಡನೇ ಬಾಹುಬಲಿ ಮತ್ತು ಬಲ್ಲಾಳ ದೇವನ ನಡುವಿನ ಕ್ಲೈಮ್ಯಾಕ್ಸ್ ದೃಶ್ಯವನ್ನು ‘ಬ್ಯಾಟಲ್ ಆಫ್ ದಿ ಬಾರ್ಸರ್ಡ್ಸ್’ ರೀತಿ ಮಾಡುವ ಆಸೆ ರಾಜಮೌಳಿಗೆ ಇತ್ತಂತೆ. ಅದನ್ನೇ ಆಧರಿಸಿ ಬರವಣಿಗೆ ಸಹ ಶುರು ಮಾಡಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ, ಕತೆ ನಮ್ಮನ್ನು ಬೇರೆ ಕಡೆಗೆ ಕೊಂಡೊಯ್ಯಿತು ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆ ನೀಡಿದ್ದ ಸಂದರ್ಶನದಲ್ಲಿ, ತಾವು ‘ಇಂಡಿಯಾನಾ ಜೋನ್ಸ್’ ಸಿನಿಮಾದಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಕಾಲಾಂತರದಲ್ಲಿ ಸಿನಿಮಾದ ಚಿತ್ರಕತೆಯನ್ನು ಭಾರತೀಯ ಪುರಾಣಗಳಿಗೆ ಹೊಂದಿಕೆ ಆಗುವಂತೆ ಬದಲಾಯಿಸಿದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ