ಪತಿ ನಿರ್ದೇಶಿಸಿದ್ದ ‘ಧುರಂಧರ್ 2’ನಲ್ಲಿ ನಟಿಸಲು ನಟಿ ಯಾಮಿ ಪಡೆದ ಸಂಭಾವನೆ ಎಷ್ಟು?
ಯಾಮಿ ನಟಿಸಿರುವ ‘ನಯೀ ನವೇಲಿ’ ಹೆಸರಿನ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಾಮಿ ಗೌತಮ್ ನಾಯಕಿ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಇದೇ ಕಾರಣಕ್ಕೆ ಮರಾಠಿಯ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಯಾಮಿ ಗೌತಮ್ ಭಾಗಿ ಆಗಿದ್ದರು. ಆ ಶೋ ಅನ್ನು ಮಾಧುರಿ ದೀಕ್ಷಿತ್ ನಡೆಸಿಕೊಡುತ್ತಿದ್ದು, ಅಲ್ಲಿ ಯಾಮಿ ಅವರಿಗೆ ‘ಧುರಂಧರ್ 2’ ಸಿನಿಮಾಕ್ಕೆ ಪಡೆದ ಸಂಭಾವನೆ ಕುರಿತ ಪ್ರಶ್ನೆ ಎದುರಾಯ್ತು.

ಮುಖ್ಯಾಂಶಗಳು
- ಧುರಂಧರ್ 2ನಲ್ಲಿ ನಟಿಸಿರುವ ಯಾಮಿ ಗೌತಮ್
- ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್
- ಯಾಮಿ ಪಡೆದ ಸಂಭಾವನೆ ಎಷ್ಟು?
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ. ಅದರಲ್ಲೂ ‘ಧುರಂಧರ್ 2’ ಭಾರಿ ದೊಡ್ಡ ಯಶಸ್ಸು ಗಳಿಸಿ ಬಾಕ್ಸ್ ಆಫೀಸ್ನಲ್ಲಿ 1500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಾಯಕ, ಸಾರಾ ಅರ್ಜುನ್ ನಾಯಕಿ. ಸಿನಿಮಾನಲ್ಲಿ ಆರ್ ಮಾಧವನ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಇನ್ನೂ ಕೆಲ ನಟರುಗಳಿದ್ದರು. ಅಂದಹಾಗೆ ಈ ಸಿನಿಮಾನಲ್ಲಿ ನಟಿ ಯಾಮಿ ಗೌತಮ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಹೀಗೆ ಬಂದು ಹಾಗೆ ಹೋಗುವ ಸಣ್ಣ ಪಾತ್ರ ಅದು. ಯಾಮಿ ನಟಿಸಿದ್ದ ಆ ಅತಿಥಿ ಪಾತ್ರಕ್ಕೆ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ?
ಯಾಮಿ ನಟಿಸಿರುವ ‘ನಯೀ ನವೇಲಿ’ ಹೆಸರಿನ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಾಮಿ ಗೌತಮ್ ನಾಯಕಿ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಇದೇ ಕಾರಣಕ್ಕೆ ಮರಾಠಿಯ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಯಾಮಿ ಗೌತಮ್ ಭಾಗಿ ಆಗಿದ್ದರು. ಆ ಶೋ ಅನ್ನು ಮಾಧುರಿ ದೀಕ್ಷಿತ್ ನಡೆಸಿಕೊಡುತ್ತಿದ್ದು, ಅಲ್ಲಿ ಯಾಮಿ ಅವರಿಗೆ ‘ಧುರಂಧರ್ 2’ ಸಿನಿಮಾಕ್ಕೆ ಪಡೆದ ಸಂಭಾವನೆ ಕುರಿತ ಪ್ರಶ್ನೆ ಎದುರಾಯ್ತು.
‘ನಿಮ್ಮ ಪತಿ ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾದ ಸಣ್ಣ ಪಾತ್ರದಲ್ಲಿ ನೀವು ನಟಿಸಿದ್ದೀರಿ. ಆ ಪಾತ್ರ ನೋಡಿದಾಗ ಬಹಳ ಥ್ರಿಲ್ ಆಗುತ್ತದೆ. ಆದರೆ ಆ ಪಾತ್ರದಲ್ಲಿ ನಟಿಸಲು ನಿಮಗೆ ಸಂಭಾವನೆ ಸಿಕ್ಕಿತೆ?’ ಎಂದು ಮಾಧುರಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಯಾಮಿ ಗೌತಮ್, ‘ನಾನು ಎಲ್ಲೋ ಓದಿದೆ, ಆ ಪಾತ್ರದಲ್ಲಿ ನಟಿಸಲು ನನಗೆ ಬಹಳ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ ಎಂದು. ಅಸಲಿಗೆ ಅದೆಲ್ಲ ಸುಳ್ಳು’ ಎಂದಿದ್ದಾರೆ ನಟಿ.
ಇದನ್ನೂ ಓದಿ:‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಯಶ್ ಹೆಮ್ಮೆಯ ಮಾತು: ನಟ ಹೇಳಿದ್ದೇನು?
‘ನೀನು ಆ ಸಿನಿಮಾನಲ್ಲಿ ನಟಿಸಬೇಕು, ನೀನು ನಟಿಸಿದರೆ ನನಗೆ ಅದು ಅದೃಷ್ಟ ಇದ್ದಂತೆ ಹಾಗಾಗಿ ನೀನು ನಟಿಸಲೇ ಬೇಕು ಎಂದು ಪ್ರೀತಿಯಿಂದ ಕೇಳಿದರು. ಹಾಗಾಗಿ ನಾನು ನಟಿಸಲು ಒಪ್ಪಿಕೊಂಡೆ. ಅವರು ಅಷ್ಟು ಪ್ರೀತಿಯಿಂದ ಕೇಳುವಾಗ ಅದಕ್ಕೆ ಬೆಲೆ ನಿಗದಿಪಡಿಸಲು ಆಗುವುದಿಲ್ಲ. ಅಲ್ಲದೆ ದೇಶದ ಅತ್ಯುತ್ತಮ ನಿರ್ದೇಶಕರಿಂದ ನಿರ್ದೇಶನಕ್ಕೆ ಒಳಗಾಗುವುದೇ ನನ್ನ ಪಾಲಿಗೆ ದೊಡ್ಡ ಸಂಭಾವನೆ’ ಎಂದು ಯಾಮಿ ಗೌತಮ್ ಹೇಳಿದ್ದಾರೆ.
‘ಧುರಂಧರ್’ ಸಿನಿಮಾಗಳನ್ನು ನಿರ್ದೇಶಿಸಿರುವ ಆದಿತ್ಯ ಧರ್, ಯಾಮಿ ಗೌತಮ್ ಅವರ ಪತಿಯೇ ಆಗಿದ್ದಾರೆ. ಆದಿತ್ಯ ನಿರ್ದೇಶನ ಮಾಡಿರುವ ‘ಉರಿ’ ಸಿನಿಮಾನಲ್ಲೂ ಯಾಮಿ ನಟಿಸಿದ್ದರು. ಈಗ ‘ಧುರಂಧರ್ 2’ನಲ್ಲೂ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ