AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಯಶ್​​ ಹೆಮ್ಮೆಯ ಮಾತು: ನಟ ಹೇಳಿದ್ದೇನು?

ಸಿನಿಮಾ ಹಿಟ್ ಆದ ಬಳಿಕ ಹಲವಾರು ಸ್ಟಾರ್ ನಟ, ನಟಿಯರು ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದು, ಸಿನಿಮಾ ಬಗ್ಗೆ ಕೊಂಡಾಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಸಹ ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ವಿಶೇಷವಾಗಿ ಮಾತನಾಡಿದರು. ಸಿನಿಮಾ ಅನ್ನು ಕೊಂಡಾಡಿದರು. ಯಶ್ ಹೇಳಿದ್ದೇನು? ಇಲ್ಲಿದೆ ಮಾಹಿತಿ....

‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಯಶ್​​ ಹೆಮ್ಮೆಯ ಮಾತು: ನಟ ಹೇಳಿದ್ದೇನು?
Premada Oorali Yash
ಮಂಜುನಾಥ ಸಿ.
|

Updated on: Oct 16, 2026 | 7:15 AM

Share

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಬಗ್ಗೆ ಯಶ್ ಮಾತು
  • ಪ್ರೇಮದ ಊರಲಿ ಸಿನಿಮಾ ಕೊಂಡಾಡಿದ ಯಶ್
  • ಕನ್ನಡಿಗರಿಗೆ ಧನ್ಯವಾದ ಹೇಳಿದ ನಟ ಯಶ್

ಕನ್ನಡ ಸಿನಿಮಾ ‘ಪ್ರೇಮದ ಊರಲಿ’ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದ ಬೇರೆ ಬೇರೆ ಚಿತ್ರರಂಗದ ಭಾರಿ ದೊಡ್ಡ ಬಜೆಟ್ ಸಿನಿಮಾಗಳನ್ನು ಸಹ ಈ ಸಿನಿಮಾ ಹಿಂದಿಕ್ಕಿದ್ದು, ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಮಾಡಿದೆ. ಸಿನಿಮಾ ಹಿಟ್ ಆದ ಬಳಿಕ ಹಲವಾರು ಸ್ಟಾರ್ ನಟ, ನಟಿಯರು ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದು, ಸಿನಿಮಾ ಬಗ್ಗೆ ಕೊಂಡಾಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಸಹ ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ವಿಶೇಷವಾಗಿ ಮಾತನಾಡಿದರು. ಸಿನಿಮಾ ಅನ್ನು ಕೊಂಡಾಡಿದರು. ಯಶ್ ಹೇಳಿದ್ದೇನು? ಇಲ್ಲಿದೆ ಮಾಹಿತಿ….

‘ಕನ್ನಡ ಚಿತ್ರರಂಗದ ಬಗ್ಗೆ ನನಗೆ ಬಹಳ ಖುಷಿ ಇದೆ. ‘ಪ್ರೇಮದ ಊರಲಿ’ ಅನ್ನೋ ಸಿನಿಮಾ ಬಹಳ ಯಶಸ್ಸು ಕಂಡಿದೆ. ನಾನು ಇತ್ತೀಚೆಗಷ್ಟೆ ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿ ಮಾಡಿದೆ. ಅವರಿಗೆ ಅಭಿನಂದನೆ ಸಲ್ಲಿಸಿದೆ. ಅವರ ಕಣ್ಣಿನಲ್ಲಿ ಯಶಸ್ಸಿನ ಖುಷಿ ನೋಡಿದೆ’ ಎಂದರು. ಆ ಮೂಲಕ ತಾವು ಖುದ್ದಾಗಿ ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾಗಿ ಯಶ್ ಹೇಳಿದರು.

ಮುಂದುವರೆದು ಮಾತನಾಡಿದ ನಟ ಯಶ್, ‘ಪ್ರೇಮದ ಊರಲಿ’ ಸಿನಿಮಾ ಅನ್ನೇ ಉದಾಹರಣೆಯಾಗಿ ತೆಗೆದುಕೊಂಡು, ‘ಕನ್ನಡ ಚಿತ್ರರಂಗಕ್ಕೆ ಎರಡೂ ಬೇಕು, ಸಣ್ಣ ಬಜೆಟ್​​​ ಸಿನಿಮಾಗಳು ಸಹ ಬೇಕು ಅದರ ಜೊತೆಗೆ ಹೊರಗೆ ಹೋಗಿ ಗಡಿಗಳನ್ನು ಒಡೆದುಹಾಕುವ ಸಿನಿಮಾಗಳು ಸಹ ಬೇಕು. ಅದರ ಜೊತೆಗೆ ನಮ್ಮಲ್ಲಿ ಅಡಿಪಾಯವನ್ನು ಸಹ ಗಟ್ಟಿ ಮಾಡಿಕೊಳ್ಳುವ ಕೆಲಸ ಸಹ ಆಗಬೇಕು. ಹೊಸ-ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರಬೇಕು, ಹೊಸ ಹೊಸ ನಾಯಕ, ನಿರ್ದೇಶಕರುಗಳು ಚಿತ್ರರಂಗಕ್ಕೆ ಬರಬೇಕು’ ಎಂದರು ನಟ ಯಶ್.

ಇದನ್ನೂ ಓದಿ:ಕನ್ನಡದಲ್ಲೇ ಪ್ರೇಮದ ಊರಲಿ ನೋಡ್ತೀನಿ; ತಪಸ್ವಿನಿಗೆ ಹೇಳಿದ ವಿಜಯ್

‘ನನಗೆ ಬಹಳ ಖುಷಿಯಾಗಿದೆ. ಕನ್ನಡಿಗರು ಈ ಮಟ್ಟಿನ ಯಶಸ್ಸನ್ನು ಒಂದು ಸಿನಿಮಾಕ್ಕೆ ಕೊಟ್ಟಿದ್ದೀರ. ಇದು ನಮಗೆ ಇನ್ನಷ್ಟು ಧೈರ್ಯ, ಉತ್ಸಾಹ ಕೊಡುತ್ತದೆ. ಮುಂದೆ ಹೋಗಿ ಸಾಧಿಸಲು ಛಲ ನೀಡುತ್ತದೆ’ ಎಂದರು ನಟ ಯಶ್.

‘ಪ್ರೇಮದ ಊರಲಿ’ ಸಿನಿಮಾ ಅನ್ನು ಕನ್ನಡದ ಹಲವು ಸ್ಟಾರ್ ನಟ, ನಟಿಯರು ನೋಡಿ ಮೆಚ್ಚಿಕೊಂಡಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ರಚಿತಾ ರಾಮ್ ಇನ್ನೂ ಹಲವರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಸಣ್ಣ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಯಶಸ್ಸನ್ನು ಗಳಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More