ಪವರ್ ಸ್ಟಾರ್ ಎಂದೇ ಜನಪ್ರಿಯತೆ ಪಡೆದುಕೊಂಡ ಪುನೀತ್ ರಾಜಕುಮಾರ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾಗೆ ಜನ ಕಾದು ಕುಳಿತಿದ್ದರು. ಇಂದು ಏಪ್ರಿಲ್ 1ನೇ ತಾರೀಕು ಚಿತ್ರ ಯುವರತ್ನ ಬಿಡುಗಡೆಗೊಂಡಿದ್ದು ಬಹು ನಿರೀಕ್ಷಿತ ಸಿನಿಮಾಕ್ಕೆ ಪ್ರೇಕ್ಷಕರು ಭಾರೀ ಸ್ವಾಗತ ಕೋರಿದ್ದಾರೆ. ಬಹು ದಿನಗಳ ನಂತರ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುನೀತ್ ಚಿತ್ರದ ಯುವರತ್ನದ ಮೊದಲಾರ್ಧದ ಕಥೆ ಹೀಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಅವರ ಸಿನಿಮಾದಲ್ಲಿ ಡ್ಯಾನ್ಸ್, ಸಕತ್ ಫೈಟ್ ಜೊತೆ ಖಡಕ್ ಆಗಿರುವ ಡೈಲಾಗ್ಗಳ ಜೊತೆ ಸುಂದರ ಲವ್ ಸ್ಟೋರಿಯನ್ನು ನಿರೀಕ್ಷಿಸುತ್ತಾರೆ. ಈ ಎಲ್ಲಾ ಅಂಶಗಳನ್ನು ಸಿನಿಮಾದ ಫಸ್ಟ್ ಹಾಫ್ನಲ್ಲಿ ನೀಡುವುದಕ್ಕೆ ನಿರ್ದೇಶಕ ಸಂತೋಷ್ ರಾಮ್ ಅವರು ಪ್ರಯತ್ನಪಟ್ಟಿದ್ದಾರೆ. ಒಂದು ಗಂಭೀರದ ವಿಷಯದ ಮೂಲಕ ಯುವರತ್ನ ಸಿನಿಮಾ ಆರಂಭಗೊಳುತ್ತದೆ. ಹಾಂಗತ ಇಡೀ ಚಿತ್ರವನ್ನೂ ನಿರ್ದೇಶಕರು ಗಂಭೀರವಾಗಿಯೇ ಕಟ್ಟಿಕೊಟ್ಟಿಲ್ಲ. ಕಾಮಿಡಿ ಮೂಲಕ ಜನರನ್ನು ನಗಿಸುತ್ತಾ, ಲವ್ ಸ್ಟೋರಿ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾ, ಕಥೆ ಮುಂದೇನಾಗತ್ತಪ್ಪಾ? ಎಂಬ ಸಸ್ಪೆನ್ಸ್ಅನ್ನು ಕಾಪಾಡಿಕೊಳ್ಳುತ್ತಾ ಸಿನಿಮಾ ಸಾಗುತ್ತದೆ.
ಸಕತ್ ಫೈಟ್ ಮೂಲಕ ಪ್ರೇಕ್ಷಕರ ಮನಗೆದ್ದ ಪುನೀತ್
ಪುನೀತ್ ಅವರ ಫ್ಯಾನ್ಸ್ಗೆ ಇಷ್ಟ ಆಗುವ ರೀತಿಯಲ್ಲಿಯೇ ಅಪ್ಪು ಅವರು ಆ್ಯಕ್ಷನ್ ಫೈಟಿಂಗ್ ದೃಶ್ಯದ ಮೂಲಕವೇ ಎಂಟ್ರಿ ಕೊಡ್ತಾರೆ. ಈಗಿನ ಕಾಲೇಜ್ ಹುಡುಗರ ಬಹು ಮುಖ್ಯ ಸಮಸ್ಯೆಗಳನ್ನು ಇಟ್ಟುಕೊಂಡಂತಹ ಕಥೆಯನ್ನು ಯುವರತ್ನ ಸಿನಿಮಾ ಹೊಂದಿದೆ. ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಪ್ರಸಿದ್ಧತೆ ಪಡೆದ ನಟರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಡಾಲಿ ಧನಂಜಯ್ ಅವರು ಫಸ್ಟ್ ಹಾಫ್ನಲ್ಲಿ ಹೈಲೈಟ್ ಆಗಿದ್ದಾರೆ. ಟಗರು ಸಿನಿಮಾದಲ್ಲಿ ಇದ್ದ ಧನಂಜಯ್ ಅವರ ಡಾಲಿ ಕ್ಯಾರೆಕ್ಟ್ರ್ನ ಮುಂದುವರೆದ ಭಾಗ ಅನ್ನೋ ರೀತಿಯಲ್ಲಿ ಅವರ ಪಾತ್ರ ಮೂಡಿಬಂದಿದೆ.
ಇನ್ನು, ಧನಂಜಯ್ ಮತ್ತು ಪುನೀತ್ ರಾಜ್ಕುಮಾರ್ ಅವರ ನಡುವಿನ ಮುಖಾಮುಖಿ ಫ್ಯಾನ್ಸ್ಗೆ ಥ್ರಿಲ್ ಕೊಡುತ್ತದೆ. ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚೆ ಪವರ್ ಆಫ್ ಯೂತ್ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಪುನೀತ್ ಎಂಟ್ರಿ ನಂತರವೇ ಫವರ್ಆಫ್ ಯೂತ್ ಹಾಡು ಪ್ರೇಕ್ಷಕರ ಗಮನ ಸೆಳೆದಿದ್ದು, ಈ ಹಾಡಿಗೆ ಶಿಳ್ಳೆಗಳ ಸೌಂಡ್ ಸಿನಿಮಾದ ಮೆರುಗು ಹೆಚ್ಚಿಸಿದೆ.
ಪ್ರೇಕ್ಷಕರ ಮನ ಗೆದ್ದ ‘ನೀನಾದೆ ನಾ’
ನಟಿ ಸಾಯೇಷಾ ಮೆಡಿಕಲ್ ಕಾಲೇಜ್ ಶಿಕ್ಷಕರಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈಗಾಗಲೇ ಇಷ್ಟಪಟ್ಟ ‘ನೀನಾದೆ ನಾ’ ಹಾಡು ಸಿನಿಮಾದ ಫಸ್ಟ್ ಹಾಫ್ನಲ್ಲಿಯೇ ಇದೆ. ಮೂರು ಜಬರ್ದಸ್ತ್ ಆದ ಫೈಟ್ಗಳು ಅಭಿಮಾನಿಗಳಿಗ ಸಕತ್ ಥ್ರಿಲ್ ತಂದು ಕೊಡುತ್ತದೆ.ಇದಲ್ಲದೇ ಧಮ್ ಹೊಡಿತೀಯಾ? ಓಂ ಪಿಕ್ಚರ್ ನೊಡೀದೀಯಾ? ಈ ತರಹದ ಪಂಚಿಂಗ್ ಡೈಲಾಗ್ಗಳು ಫಸ್ಟ್ ಹಾಫ್ನಲ್ಲೇ ಹೈಲೈಟ್ ಆಗಿದೆ. ಇನ್ನಿತರ ಮುಖ್ಯ ಪಾತ್ರಗಳಾದ ನಟ ದಿಗಂತ್, ಸಾಯಿ ಕುಮಾರ್, ಪ್ರಕಾಶ್ ರಾಜ್ ಹಾಗೂ ಸೋನು ಗೌಡ ಪಾತ್ರಗಳು ಕುತೂಹಲವನ್ನು ಕಾಪಾಡಿಕೊಂಡಿದೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಯುವರತ್ನ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಗೂ ಸಂತೋಷ್ ಆನಂದರಾಮ್ ಈ ಚಿತ್ರದ ನಿರ್ದೇಶಕರು. ಜೊತೆಗೆ ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪ್ರೊಮೊದಲ್ಲೇ ಸಕತ್ ಕಿಕ್ ಕೊಟ್ಟ ಈ ಚಿತ್ರಕ್ಕೆ ಎಸ್.ಥಮನ್ ಸಂಗೀತ ನೀಡಿದ್ದಾರೆ. ಚಿತ್ರದ ನಟಿಯಾಗಿ ಸಾಯೀಷಾ ಅಭಿನಯಿಸಿದ್ದು. ಸಾಯೀಷಾ ಮತ್ತು ಪುನೀತ್ ಜೋಡಿಯ ಅಭಿನಯದಲ್ಲಿ ಮೂಡಿಬಂದ ಚಿತ್ರ ಸಕತ್ ಮಿಂಚಿದೆ. ಥಿಯೇಟರ್ನಲ್ಲಿ ಪ್ರೇಕ್ಷಕರ ಸಿಳ್ಳೆಯ ಹವಾ ಚಿತ್ರದ ಮೆರುಗೆ ಹೆಚ್ಚಿಸಿದೆ.
ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ಕುಮಾರ್ ಹವಾ?
Published On - 8:52 am, Thu, 1 April 21