‘ಬನಾರಸ್’ ಸಿನಿಮಾ (Banaras Movie) ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡರು ಝೈದ್ ಖಾನ್. ಮೊದಲ ಚಿತ್ರದಲ್ಲೇ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ. ಈಗ ಅವರ ಎರಡನೇ ಚಿತ್ರದ ಟೈಟಲ್ ಘೋಷಣೆ ಆಗಿದೆ. ಯುಗಾದಿ ಹಾಗೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದ್ದು, ‘ಕಲ್ಟ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ‘ಉಪಾಧ್ಯಕ್ಷ’ ಚಿತ್ರದ ಮೂಲಕ ಮೆಚ್ಚುಗೆ ಪಡೆದ ನಿರ್ದೇಶಕ ಅನಿಲ್ ಕುಮಾರ್ ಅವರು ‘ಕಲ್ಟ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇತ್ತೀಚೆಗಷ್ಟೇ ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಸಿನಿಮಾ ಮಾಡುತ್ತಾರೆ ಎನ್ನುವ ವಿಚಾರ ರಿವೀಲ್ ಆಯಿತು. ಈ ಚಿತ್ರದ ಟೈಟಲ್ನ ಶೀಘ್ರವೇ ರಿವೀಲ್ ಮಾಡುವುದಾಗಿ ತಿಳಿಸಲಾಗಿತ್ತು. ಈಗ ಚಿತ್ರದ ಟೈಟಲ್ ರಿಲೀಸ್ ಆಗಿದೆ. ಪೋಸ್ಟರ್ ಕೂಡ ಸಖತ್ ರಗಡ್ ಆಗಿ ಮೂಡಿ ಬಂದಿದೆ. ಈ ಚಿತ್ರಕ್ಕೆ ‘ಬ್ಲಡಿ ಲವ್’ ಎನ್ನೋ ಟ್ಯಾಗ್ ಲೈನ್ ಇದ್ದು, ಸಿನಿಮಾದಲ್ಲಿ ಲವ್ ಸ್ಟೋರಿ, ಬ್ರೇಕಪ್ ಕಥೆ ಇರಲಿದೆ ಅನ್ನೋದು ಪಕ್ಕಾ ಆಗಿದೆ.
ಸಖತ್ ರಾ ಲುಕ್ನಲ್ಲಿ ಝೈದ್ ಖಾನ್ ಕಾಣಿಸಿಕೊಂಡಿದ್ದಾರೆ. ಅವರ ಮುಖದ ಮೇಲೆ ಗಾಯಗಳಿವೆ. ಯಾವುದೋ ಹುಡುಗಿ ಕಾಲಿನ ಬೆರಳಿನ ಮಧ್ಯೆ ಸಿಗರೇಟ್ ಹಿಡಿಸಿ ಅದನ್ನು ಸೇದುತ್ತಿದ್ದಾರೆ ಝೈದ್. ಇದರಿಂದ ನಿರೀಕ್ಷೆ ಹೆಚ್ಚುವಂತೆ ಆಗಿದೆ. ಈ ಚಿತ್ರಕ್ಕೆ ‘ಕಲ್ಟ್ ಶಬ್ದ ಇಡೋಕೆ ಕಾರಣ ಏನು ಎಂಬುದನ್ನು ಕೂಡ ನಿರ್ದೇಶಕರು ವಿವರಿಸಿದ್ದಾರೆ.
Check out the first look poster of the upcoming movie #Cult starring @ZaidKhan. Interesting to see what’s in store! #Cult #ZaidKhan Dir @AnilKumar #AshrithProductions #ZK02 #StormStudios @SMaheshDirector #AllOk @bhuvangowda84 pic.twitter.com/lZvsGlufuN
— A Sharadhaa (@sharadasrinidhi) April 9, 2024
‘ಕಲ್ಟಿಸಂ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಬಳಕೆ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪದ ಹೆಚ್ಚು ಪ್ರಚಲಿತವಾಗಿದೆ. ಚಿತ್ರ ಕೂಡ ಯುವಜನತೆಗೆ ಹತ್ತಿರವಾಗಿರಲಿದೆ. ಈ ಕಾರಣಕ್ಕೆ ಚಿತ್ರಕ್ಕೆ ಈ ಶೀರ್ಷಿಕೆ ಫೈನಲ್ ಮಾಡಿದ್ದೇವೆ’ ಎಂದಿದ್ದಾರೆ ಅವರು. ‘ಬನಾರಸ್’ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಈ ಚಿತ್ರದಲ್ಲಿ ಮಾಸ್ ಅವತಾರ ತಾಳಲಿದ್ದಾರೆ. ಶೀಘ್ರದಲ್ಲೆ ‘ಕಲ್ಟ್’ ಸಿನಿಮಾ ಸೆಟ್ಟೇರಲಿದೆ. ಮುಹೂರ್ತದ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಯನ್ನು ತಂಡ ಬಿಟ್ಟುಕೊಡಲಿದೆ.
ಇದನ್ನೂ ಓದಿ: ಎರಡನೇ ಚಿತ್ರಕ್ಕೆ ರೆಡಿ ಆದ ಝೈದ್ ಖಾನ್; ಮತ್ತೊಂದು ವಿಭಿನ್ನ ಪ್ರಯತ್ನ
‘ಆಶ್ರಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಜೆ.ಎಸ್ ವಾಲಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಝೈದ್ ಖಾನ್ ಲ್ಲಿ ಕ್ಲಿಕ್ ಮಾಡಿ