ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಥೂಲಕಾಯತೆಯ ಕಾರಣದಿಂದಾಗಿ, ಅನೇಕ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿದರೆ ಮತ್ತು ದೈಹಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಿದರೆ, ಬೊಜ್ಜು ಅಥವಾ ಇನ್ನಿತರ ದೈಹಿಕ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ನಿಯಮಿತವಾದ ವ್ಯಾಯಾಮಕ್ಕೆ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಜನರಿಗೆ ವಾಕಿಂಗ್ (Walking) ಉತ್ತಮ ಆಯ್ಕೆಯಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೇವಲ 30 ನಿಮಿಷ ವಾಕಿಂಗ್ ಮಾಡುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ವಾಕಿಂಗ್ ಮಾಡುವುದರಿಂದ ನಿಮ್ಮ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಮೂಡ್ ಕೂಡ ಉತ್ತಮಗೊಳ್ಳುತ್ತದೆ.
ವಾಕಿಂಗ್ ಮಾಡುವುದರ ಹಿಂದಿದೆ ಅನೇಕ ಪ್ರಯೋಜನಗಳು
ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆಯಾಗಿದೆ
ಇತ್ತೀಚಿನ ದಿನಗಳಲ್ಲಿ 30 ವರ್ಷದೊಳಗಿನ ಯುವಕರಲ್ಲಿಯೂ ಆಸ್ಟಿಯೊಪೊರೋಸಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಳಪೆ ಆಹಾರದಿಂದ ಈ ಸಮಸ್ಯೆ ಉಂಟಾಗುತ್ತದೆ. ಮೂಳೆಗಳಲ್ಲಿ ಬಿಎಂಡಿ ಕಡಿಮೆಯಾಗುವುದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಭವಿಷ್ಯದಲ್ಲಿ ಮೊಣಕಾಲು ಮತ್ತು ಸೊಂಟದ ಸಮಸ್ಯೆಯೂ ಹೆಚ್ಚಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಆಸ್ಟಿಯೊಪೊರೋಸಿಸ್ ಅಪಾಯವು ತುಂಬಾ ಕಡಿಮೆಯಾಗಿದೆ.
ಅಧಿಕ ಬಿಪಿ ತಡೆಗಟ್ಟುವಿಕೆ
ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ನೀವು ಅಧಿಕ ಬಿಪಿ ಹೊಂದಿದ್ದರೆ ಅಥವಾ ನಿಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಿದ್ದರೆ, ವಾಕಿಂಗ್ ಮಾಡಿ. ಈ ರೀತಿಯ ಅಭ್ಯಾಸ ನಿಮ್ಮ ಬಿಪಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಮಧುಮೇಹಕ್ಕೆ ಪರಿಪೂರ್ಣ ಪರಿಹಾರ
ನೀವು ಮಧುಮೇಹ ರೋಗಿಗಳಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಈ ಸಮಸ್ಯೆಯು ಆನುವಂಶಿಕವಾಗಿದ್ದರೆ ವಾಕಿಂಗ್ ಮಾಡಿ. ಮಧುಮೇಹಕ್ಕೆ ವಾಕ್ ಖಚಿತವಾದ ಪರಿಹಾರವೆಂದು ಪರಿಗಣಿಸಲಾಗಿದೆ. ಇದರಿಂದ ಮಧುಮೇಹಿಗಳ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದರೊಂದಿಗೆ ಯಾವುದೇ ಕಾಯಿಲೆಯಿಂದ ಅಥವಾ ಆನುವಂಶಿಕತೆಯಿಂದ ಮಧುಮೇಹ ಬರುವ ಅಪಾಯ ಇದ್ದರೆ ರಕ್ಷಣೆ ದೊರೆಯುತ್ತದೆ.
ಒತ್ತಡ ನಿವಾರಣೆ
ಇತ್ತೀಚಿನ ದಿನಗಳಲ್ಲಿ ಒತ್ತಡ ಕೂಡ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡವು ಬೊಜ್ಜು, ಮೆದುಳು ಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ.
ಇದನ್ನೂ ಓದಿ:
ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ
Types of Walking: ವಾಕಿಂಗ್ನಲ್ಲಿ ಹಲವು ವಿಧಗಳಿವೆ; ನಿಮ್ಮ ಆರೋಗ್ಯಕ್ಕೆ ಯಾವ ನಡಿಗೆ ಸೂಕ್ತ ತಿಳಿಯಿರಿ