ಉತ್ತಮ ಆರೋಗ್ಯಕ್ಕಾಗಿ ಈ 5 ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ಸೇವಿಸಿ
ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುವ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ.
ಹಣ್ಣುಗಳು ಮತ್ತು ತರಕಾರಿಗಳು (Fruits and Vegetables) ಆರೋಗ್ಯಕ್ಕೆ (health) ಉತ್ತಮವೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಆ ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳಿಗೆ (Peels) ನೀವು ಅದೇ ರೀತಿ ಹೇಳಬಹುದೇ? ಆ ಸಿಪ್ಪೆಗಳನ್ನು ತಿನ್ನಬೇಕೋ ಬೇಡವೋ ಎಂಬುದು ಸಾಮಾನ್ಯವಾಗಿ ಚರ್ಚೆಗೆ ಗ್ರಾಸವಾಗಿರುತ್ತದೆ. ಸಾಮಾನ್ಯವಾಗಿ, ಆಲೂಗಡ್ಡೆ ಉಪಯೋಗಿಸಿ ಅಡುಗೆ ಮಾಡುವಾಗ ಅಥವಾ ಸೌತೆಕಾಯಿಯನ್ನು ತಿನ್ನುವಾಗ ನಾವು ಮಾಡುವ ಮೊದಲ ಕೆಲಸವೆಂದರೆ ಸಿಪ್ಪೆ ತೆಗೆಯುವುದು. ಈ ಪ್ರಕ್ರಿಯೆಯಲ್ಲಿ, ನೀವು ಕೇವಲ ಸಿಪ್ಪೆಗಳನ್ನು ಎಸೆಯುತ್ತಿಲ್ಲ, ಆದರೆ ನಿಮ್ಮ ಆಹಾರದಿಂದ ಉತ್ತಮ ಪ್ರಮಾಣದ ಪೋಷಕಾಂಶಗಳನ್ನು ತೆಗೆದುಹಾಕುತ್ತೀರಿ. ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುವ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳ ಚರ್ಮವನ್ನು ತಿನ್ನುವ ಕೆಲವು ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ನೀವು ಚರ್ಮದೊಂದಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಏಕೆ ತಿನ್ನಬೇಕು ಎಂಬ 4 ಕಾರಣಗಳು ಇಲ್ಲಿವೆ. ಮೊದಲನೆಯದಾಗಿ ಸಿಪ್ಪೆಯು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಅಲ್ಲದೆ ಸಿಪ್ಪೆ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಾಕಾರ ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚು. ಕೊನೆಯದಾಗಿ ಸಿಪ್ಪೆಯನ್ನು ಸೇವಿಸುವುದರಿಂದ ಆಹಾರ ವ್ಯರ್ಥವನ್ನು ಕಡಿಮೆ ಮಾಡಬಹುದು.
ನೀವು ತಿನ್ನಬಹುದಾದ 5 ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ಇಲ್ಲಿದೆ:
1. ಆಲೂಗಡ್ಡೆ:
ಆಲೂಗಡ್ಡೆ ಪ್ರೀತಿಸಲು ನಾವು ನಿಮಗೆ ಹೆಚ್ಚಿನ ಕಾರಣಗಳನ್ನು ನೀಡುತ್ತಿದ್ದೇವೆ! ನಿಮ್ಮ ಅಡುಗೆ ಮನೆಯಲ್ಲಿ ಅತ್ಯಂತ ಜನಪ್ರಿಯ ತರಕಾರಿಗಳಲ್ಲಿ ಒಂದಾದ ಆಲೂಗಡ್ಡೆ ಬಹುಮುಖವಾಗಿದೆ ಮತ್ತು ನಿಮಗೆ ಬೇಕಾದ ಯಾವುದೇ ಭಕ್ಷ್ಯವನ್ನು ಇದರಿಂದ ತಯಾರಿಸಬಹುದು. ಆಲೂಗೆಡ್ಡೆಯ ಸಿಪ್ಪೆ ಉತ್ತಮ ಆಹಾರ ಪದಾರ್ಥವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದು ವಿಟಮಿನ್ ಬಿ ಮತ್ತು ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್‌ಗಳಿಂದ ತುಂಬಿರುತ್ತದೆ ಮತ್ತು ಇದನ್ನು ಹಲವಾರು ರೀತಿಯಲ್ಲಿ ಬೇಯಿಸಬಹುದು. ನಾವು ಸಿಪ್ಪೆಯನ್ನು ಸಣ್ಣ ಹೋಳುಗಳಾಗಿ ಕತ್ತರಿಸಿ ಸ್ವಲ್ಪ ಉಪ್ಪು ಸೇರಿಸಿ ಡೀಪ್ ಫ್ರೈ ಮಾಡಿ ಸೇವಿಸಬಹುದು.
2. ಸೋರೆಕಾಯಿ:
ವಿಶೇಷವಾಗಿ ಬೇಸಿಗೆ ಕಾಲದಲ್ಲಿ. ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಮಾತನಾಡಲಾಗಿದೆಯಾದರೂ, ಅದರ ಸಿಪ್ಪೆಗಳ ಪ್ರಯೋಜನಗಳ ಕುರಿತು ಯಾರಿಗೂ ಹೆಚ್ಚಿನ ಮಾಹಿತಿಯಿಲ್ಲ. ಇದು ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೋರೆಕಾಯಿ ಸಿಪ್ಪೆಯನ್ನು ಹುರಿಯಲು ಮತ್ತು ಅನ್ನದೊಂದಿಗೆ ಆನಂದಿಸಬಹುದು. ಆಲೂಗೆಡ್ಡೆ ಸಿಪ್ಪೆಯನ್ನು ಹುರಿಯುವ ಅದೇ ಪ್ರಕ್ರಿಯೆಯನ್ನು ನೀವು ಅನುಸರಿಸಬೇಕು. ನೀವು ಸೋರೆಕಾಯಿ ಸಿಪ್ಪೆಯಿಂದ ತಾಜಾ ಚಟ್ನಿಯನ್ನು ಮಾಡಲು ಪ್ರಯತ್ನಿಸಬಹುದು ಮತ್ತು ಅದನ್ನು ರೊಟ್ಟಿ ಅಥವಾ ಪರಾಠದೊಂದಿಗೆ ಆನಂದಿಸಬಹುದು.
3. ಕಲ್ಲಂಗಡಿ:
ಕಲ್ಲಂಗಡಿ ಹಣ್ಣಿನ ಒಳ್ಳೆಯತನಕ್ಕೆ ಪ್ರತ್ಯೇಕ ಪರಿಚಯ ಅಗತ್ಯವಿಲ್ಲ. ಆದರೆ ನೀವು ಎಂದಾದರೂ ಸಿಪ್ಪೆಯನ್ನು ತಿನ್ನುವ ಬಗ್ಗೆ ಯೋಚಿಸಿದ್ದೀರಾ? ಮನೆಯಲ್ಲಿ ರುಚಿಕರವಾದ ಗೊಜ್ಜು ಅಥವಾ ಗಸಿಗಳನ್ನು ತಯಾರಿಸಲು ನೀವು ಕಲ್ಲಂಗಡಿ ಸಿಪ್ಪೆಯ ಬಿಳಿ ಭಾಗವನ್ನು ಬಳಸಬಹುದು.
ಇದನ್ನೂ ಓದಿ: ಈ ಕಾರಣಗಳಿಗಾಗಿಯೇ ದಿನದಲ್ಲಿ ಒಂದು ಬಾರಿಯಾದರೂ ಚಪಾತಿ ತಿನ್ನಬೇಕು ಎಂದು ಹೇಳುವುದು!
4. ಕಿತ್ತಳೆ:
ನಾವೆಲ್ಲರೂ ಕಿತ್ತಳೆಯನ್ನು ಸೇವಿಸುವ ಮೊದಲು ಸಿಪ್ಪೆ ತೆಗೆಯುತ್ತೇವೆ. ಈಗ, ಸಿಪ್ಪೆಗಳನ್ನು ಎಸೆಯಬೇಡಿ. ಬದಲಾಗಿ, ಅವುಗಳನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ಮತ್ತು ಚಹಾಕ್ಕೆ ಸೇರಿಸಿ ಅಥವಾ ನಿಮ್ಮ ಸಲಾಡ್ ಬೌಲ್‌ಗೆ ಅಲಂಕರಿಸುವ ಅಂಶವಾಗಿ ಬಳಸಿ. ಕಿತ್ತಳೆ ಸಿಪ್ಪೆಗಳು ನಿಮ್ಮ ಆಹಾರಕ್ಕೆ ಪರಿಮಳವನ್ನು ಸೇರಿಸುವುದು ಮಾತ್ರವಲ್ಲದೆ ನಿಮ್ಮ ಆಹಾರದಲ್ಲಿ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.
5. ಸೌತೆಕಾಯಿ:
ಸೌತೆಕಾಯಿಯ ಚರ್ಮವು ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್‌ನಿಂದ ತುಂಬಿರುತ್ತದೆ. ಕೇವಲ ಮೇಣದ ಪದರವನ್ನು ಕತ್ತರಿಸಿ ಮತ್ತು ಆನಂದಿಸಿ.