ಪ್ರತಿದಿನ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದು ಅತ್ಯಗತ್ಯ. ಮನುಷ್ಯನ ದೇಹದಲ್ಲಿ ಸುಮಾರು 60ರಿಂದ 70ರಷ್ಟು ಭಾಗ ನೀರಿನಿಂದ ಆವರಿಸಿರುತ್ತದೆ. ಆರೋಗ್ಯವಂತ ಜೀವಿಗಳಿಗೆ ನೀರು ಕುಡಿಯುವುದು ಅಷ್ಟೇ ಮುಖ್ಯ. 8 ರಿಂದ 10 ಗ್ಲಾಸ್ ನೀರು ದೇಹದ ಚಯಾಪಚಯ ಮತ್ತು ಆರೋಗ್ಯವನ್ನು ಉತ್ತವಾಗಿರಿಸಲು ಅತ್ಯಗತ್ಯವಾಗಿದೆ. ಆದರೆ ನಮ್ಮ ದೈನಂದಿನ ನೀರಿನ ಬಳಕೆಯಲ್ಲಿ ಬಿಸಿನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದಿದಿಯೆ. ಆ ಕುರಿತು ಒಂದು ವರದಿ ಇಲ್ಲಿದೆ ಓದಿ.
ಆಯುರ್ವೇದ ವೈದ್ಯರಾದ ಡಾ. ನಿತಿಕಾ ಅವರು ಬಿಸಿನೀರಿನ ಸೇವನೆಯ ಅನೇಕ ಪ್ರಯೋಜನಗಳನ್ನು ತಮ್ಮ ಇನ್ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ ಎಂದು ನಮಗೆಲ್ಲರಿಗೂ ತಿಳಿದಿದೆ! ಆದರೆ ಬಿಸಿನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಆಗುವ ಪ್ರಯೋಜನೆಗಳ ಕುರಿತು ತಿಳಿಯಿರಿ ಎಂದು ಬರೆದುಕೊಂಡಿದ್ದಾರೆ.
ಬಿಸಿನೀರಿ ಕುಡಿಯುವುದರಿಂದಾಗು ಪ್ರಯೋಜನಗಳು:
ದಟ್ಟಣೆ ಪರಿಹಾರ
ಶೀತದ ಕಾರಣ ಉಸಿರುಕಟ್ಟಿಕೊಳ್ಳುವ ಮೂಗು ತುಂಬಾ ಅಹಿತಕರವಾಗಿರುತ್ತದೆ. ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ದಟ್ಟಣೆ ನಿವಾರಣೆಯಾಗುತ್ತದೆ.
ಮಲಬದ್ಧತೆ ಪರಿಹಾರ
“ನಿರ್ಜಲೀಕರಣವು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಯಾವುದೇ ತಾಪಮಾನದಲ್ಲಿ ಬಿಸಿನೀರನ್ನು ಕುಡಿಯುವುದರಿಂದ ನಿಮ್ಮ ಕರುಳು ಉತ್ತಮ ಕಾರ್ಯನಿರ್ವಹಿಸಲು ಮಾರ್ಗವಾಗಿದೆ, ”ಎಂದು ಡಾ. ನಿತಿಕಾ ಹೇಳುತ್ತಾರೆ.
ಕೂದಲಿನ ಆರೋಗ್ಯ ಸುಧಾರಣೆ
ಡಾ. ನಿತಿಕಾ ಅವರ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ಒಣ ನೆತ್ತಿಯನ್ನು ತಡೆಯುತ್ತದೆ ಮತ್ತು ಇದು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ನೋವಿನ ಪರಿಹಾರವನ್ನು ಒದಗಿಸುತ್ತದೆ
“ಹೊಟ್ಟೆಯಲ್ಲಿ ಬೆಚ್ಚಗಿನ ಸಂಕೋಚನವನ್ನು ಬಳಸುವುದರ ಮೂಲಕ ಮತ್ತು ನಿಯಮಿತ ಮಧ್ಯಂತರದಲ್ಲಿ ಬಿಸಿನೀರನ್ನು ಕುಡಿಯುವುದು ಮುಟ್ಟಿನ ಸೆಳೆತದ ಸಮಯದಲ್ಲಿ ಪರಿಹಾರವನ್ನು ನೀಡುತ್ತದೆ” ಎಂದು ಡಾ. ನಿತಿಕಾ ಹೇಳುತ್ತಾರೆ.
ಚರ್ಮದ ಆರೈಕೆ
ಡಾ.ನಿತಿಕಾ ಪ್ರಕಾರ, ಬಿಸಿನೀರು ಕುಡಿಯುವುದರಿಂದ ಚರ್ಮದ ವಯಸ್ಸನ್ನು ನಿಧಾನಗೊಳಿಸುತ್ತದೆ. ಮೊಡವೆ ಮತ್ತು ಕಲೆಗಳನ್ನು ನಿವಾರಿಸಲು ಸಹಾಯವಾಗಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಎನ್ನುತ್ತಾರೆ ಡಾ.ನಿತಿಕಾ. ಇದು ಹೊಟ್ಟೆ ಉಬ್ಬು, ಅಸಿಡಿಟಿ ಮತ್ತು ಗ್ಯಾಸ್ ಗಳನ್ನೂ ಸಹ ಗುಣಪಡಿಸುತ್ತದೆ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ
“ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಟಾಕ್ಸಿನ್ಗಳನ್ನು ಹೊರಹಾಕಿ ದೇಹದ ವ್ಯವಸ್ಥೆಯನ್ನು ಸರಾಗವಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ ಎಂದು ಡಾ. ನಿತಿಕಾ ಹೇಳುತ್ತಾರೆ.
ಇದನ್ನೂ ಓದಿ;
ಬಾಗಲಕೋಟೆ: ಬ್ಲ್ಯಾಕ್ ಫಂಗಸ್ನಿಂದ ಮುಖದ ಅಂದಕ್ಕೆ ಧಕ್ಕೆ ಆದವರಿಗೆ ಸೌಂದರ್ಯ ಶಸ್ತ್ರಚಿಕಿತ್ಸೆ; ವಿಶೇಷ ವರದಿ ಇಲ್ಲಿದೆ
ಸಕ್ಕರೆ ಕಾಯಿಲೆ ಲಕ್ಷಣಗಳೇನು? ಆರೋಗ್ಯ ಕಾಪಾಡುವುದು ಹೇಗೆ? ಡಯಾಬಿಟೀಸ್ ಇರುವವರಿಗೆ ವೈದ್ಯರ ಸಲಹೆಗಳು