Septic Shock: ಹೆರಿಗೆಯ ನಂತರ ಸೆಪ್ಟಿಕ್ ಶಾಕ್‌ಗೆ ಒಳಗಾಗಿ ಕೈ ಕಾಲುಗಳನ್ನು ಕಳೆದುಕೊಂಡ ಮಹಿಳೆ

|

Updated on: Feb 28, 2023 | 5:39 PM

ಮಹಿಳೆಯೊಬ್ಬರು ಸಿಸೇರಿಯನ್ ಮೂಲಕ ಎರಡನೇ ಮಗುವನ್ನು ಪಡೆದ ಕೆಲವೇ ದಿನಗಳಲ್ಲಿ ಸೆಪ್ಟಿಕ್ ಶಾಕ್‌ಗೆ ಒಳಗಾಗಿ ದೇಹದ ಅಂಗಾಂಗವನ್ನು ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

Septic Shock: ಹೆರಿಗೆಯ ನಂತರ ಸೆಪ್ಟಿಕ್ ಶಾಕ್‌ಗೆ ಒಳಗಾಗಿ ಕೈ ಕಾಲುಗಳನ್ನು ಕಳೆದುಕೊಂಡ ಮಹಿಳೆ
ಕ್ರಿಸ್ಟಿನಾ ಪ್ಯಾಚೆಕೊ(29)
Follow us on

ಮಹಿಳೆಯೊಬ್ಬರು ಸಿಸೇರಿಯನ್ ಮೂಲಕ ಎರಡನೇ ಮಗುವನ್ನು ಪಡೆದ ಕೆಲವೇ ದಿನಗಳಲ್ಲಿ ಸೆಪ್ಟಿಕ್ ಶಾಕ್‌(Septic Shock)ಗೆ ಒಳಗಾಗಿ ದೇಹದ ಅಂಗಾಂಗವನ್ನು ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಕ್ರಿಸ್ಟಿನಾ ಪ್ಯಾಚೆಕೊ(29) ಸಿಸೇರಿಯನ್ ಮೂಲಕ ಎರಡನೇ ಮಗುವನ್ನು ಪಡೆದ ಕೆಲವೇ ದಿನಗಳಲ್ಲಿ ಸೆಪ್ಟಿಕ್ ಶಾಕ್‌ಗೆ ಒಳಗಾಗಿ ತನ್ನ ಎರಡೂ ಕೈಗಳು ಮತ್ತು ಪಾದಗಳನ್ನು ಕಳೆದುಕೊಂಡಿದ್ದಾರೆ. ಹೆರಿಗೆಯ ನಂತರ ಮನೆಗೆ ಹಿಂದಿರುಗಿದ ಕೆಲವೇ ದಿನಗಳಲ್ಲಿ ಆಕೆಯಲ್ಲಿ ಜ್ವರ ಉಸಿರಾಟದ ತೊಂದರೆ ಮತ್ತು ವಾಂತಿ ಮುಂತಾದ ಲಕ್ಷಣ ಕಂಡುಬಂದಿದೆ.

ಪ್ರಾರಂಭದಲ್ಲಿ ಸಿಸೇರಿಯನ್​ನಿಂದಾಗಿ ಈ ರೀತಿಯ ಲಕ್ಷಣಗಳು ಕಂಡು ಬಂದಿರಬಹುದು ಎಂದು ಪ್ಯಾಚೆಕೊ ಅಂದುಕೊಂಡಿದ್ದರು. ಆದರೆ ಸಮಸ್ಯೆ ಹೆಚ್ಚಾಗುವುದಿರುವ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಎರಡು ವಾರಗಳ ವರಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.  ಆದರೂ ಕೂಡ ಆಕೆಯ ಕೈ ಕಾಲುಗಳಲ್ಲಿ ಕಳಪೆ ರಕ್ತ ಪರಿಚಲನೆಯಿಂದಾಗಿ ರಕ್ತ ಹೆಪ್ಪುಗಟ್ಟಿದ್ದು, ಕೈ ಕಾಲುಗಳು ಕಪ್ಪು ಬಣ್ಣಕ್ಕೆ ತಿರುಗಿದೆ. ಇದು ಆಕೆಯ ಪ್ರಾಣಕ್ಕೆ ಹಾನಿಯುಂಟು ಮಾಡಬಹುದು ಎಂದು ವೈದ್ಯರು ಆಕೆಯ ಕೈ ಕಾಲುಗಳನ್ನು ಕತ್ತರಿಸಿ ತೆಗೆದಿದ್ದಾರೆ ಎಂದು ಎಬಿಸಿ ವರದಿ ಮಾಡಿದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಕಂಡುಬರುವ ಮೂತ್ರನಾಳದ ಸೋಂಕಿಗೆ ಕಾರಣ ಮತ್ತು ಚಿಕಿತ್ಸೆ

ಸೆಪ್ಟಿಕ್ ಶಾಕ್‌ ಎಂದರೇನು?

ಈಕೆಗೆ ಸಿಸೇರಿಯನ್​​ನಿಂದಾಗಿ ಸೆಪ್ಟಿಕ್ ಶಾಕ್‌ಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ತುಂಬಾ ಗಂಭೀರವಾದ ಕಾಯಿಲೆಯಿಂದ ಇಂತಹ ಸಮಸ್ಯೆ ಕಂಡು ಬರಬಹುದು. ಈ ಸಂದರ್ಭದಲ್ಲಿ ರೋಗ – ನಿರೋಧಕ ವ್ಯವಸ್ಥೆ ಕೂಡ ಅತಿ ಹೆಚ್ಚಾಗಿ ಪ್ರತಿಕ್ರಿಯೆ ನೀಡಿ ಬಹು ಅಂಗಾಂಗಗಳ ವೈಫಲ್ಯ ಉಂಟು ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ. ಇದರ ಲಕ್ಷಣಗಳು ಪ್ರಾರಂಭದಲ್ಲಿ ಉಸಿರಾಟದ ಸಮಸ್ಯೆಯಿಂದ ಪ್ರಾರಂಭವಾಗಿ ಅತಿಸಾರ , ವಾಕರಿಕೆ , ವಾಂತಿ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:39 pm, Tue, 28 February 23