Ambani’s favourite food: ಅಂಬಾನಿಗೆ ಇಷ್ಟವಾದ ಈ ತಿಂಡಿಯಲ್ಲಿದೆ ಹಲವಾರು ಆರೋಗ್ಯ ಪ್ರಯೋಜನ
ವರದಿಗಳು ಹೇಳುವ ಪ್ರಕಾರ ನೀತಾ ಅಂಬಾನಿ ಅವರು ತಮ್ಮ ಪತಿ ಮುಖೇಶ್ ಅಂಬಾನಿ ಅವರ ಆಹಾರದ ಬಗ್ಗೆ ತಾನು ತುಂಬಾ ಕಟ್ಟುನಿಟ್ಟಾಗಿ ಇರುತ್ತೇನೆ ಎಂದಿದ್ದರು. ಇದರ ಜೊತೆಗೆ ಮುಖೇಶ್ ಅಂಬಾನಿ ಅವರಿಗೆ ತುಂಬಾ ಇಷ್ಟವಾದ ಪಂಜಾಬಿ ತಿಂಡಿಯ ಬಗ್ಗೆ ಹೇಳಿದ್ದರು. ಸಾಮಾನ್ಯವಾಗಿ ಇದು ಪಂಜಾಬಿನಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ತಿಂಡಿಯ ಹೆಸರು ಪಂಕಿ. ಇದು ಅಂಬಾನಿ ಅವರಿಗೆ ಅಚ್ಚುಮೆಚ್ಚಿನ ತಿಂಡಿ ಎಂದು ನೀತಾ ಅಂಬಾನಿ ಅವರು ಹೇಳಿದ್ದರು. ಹಾಗಾದರೆ ಈ ತಿಂಡಿ ಸೇವನೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಲಾಗುತ್ತದೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸರಳ ವ್ಯಕ್ತಿತ್ವಕ್ಕೆ ಅಂಬಾನಿ ಅವರು ಉತ್ತಮ ಉದಾಹರಣೆ. ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ, ಅವರ ಜೀವನಶೈಲಿ ಮತ್ತು ದೇಸಿ ಆಹಾರ ಪದ್ಧತಿ ಎಲ್ಲರನ್ನೂ ಆಶ್ಚರ್ಯಗೊಳಿಸುವಂತಿದೆ. ಅಂಬಾನಿ ಗುಜರಾತ್ ನಿವಾಸಿಯಾಗಿರುವುದರಿಂದ ಅವರು ಗುಜರಾತಿನ ಆಹಾರವನ್ನು ಸೇವನೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ತಮ್ಮ ಮನೆಯವರ ನೆಚ್ಚಿನ ತಿಂಡಿಗಳ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅದೇ ರೀತಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ವರದಿ ಆಗಿರುವ ಪ್ರಕಾರ ನೀತಾ ಅಂಬಾನಿ ಅವರು ತಮ್ಮ ಪತಿ ಮುಖೇಶ್ ಅಂಬಾನಿ ಅವರ ಆಹಾರದ ಬಗ್ಗೆ ತಾನು ತುಂಬಾ ಕಟ್ಟುನಿಟ್ಟಾಗಿ ಇರುತ್ತೇನೆ ಎಂದಿದ್ದರು. ಇದರ ಜೊತೆಗೆ ಮುಖೇಶ್ ಅಂಬಾನಿ ಅವರಿಗೆ ತುಂಬಾ ಇಷ್ಟವಾದ ಪಂಜಾಬಿ ತಿಂಡಿಯ ಬಗ್ಗೆ ಹೇಳಿದ್ದರು. ಸಾಮಾನ್ಯವಾಗಿ ಇದು ಪಂಜಾಬಿನಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ತಿಂಡಿಯ ಹೆಸರು ಪಂಕಿ. ಇದು ಅಂಬಾನಿ ಅವರಿಗೆ ಅಚ್ಚುಮೆಚ್ಚಿನ ತಿಂಡಿ ಎಂದು ನೀತಾ ಅಂಬಾನಿ ಅವರು ಹೇಳಿದ್ದರು. ಹಾಗಾದರೆ ಈ ತಿಂಡಿ ಸೇವನೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಲಾಗುತ್ತದೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಈ ಗುಜರಾತಿ ತಿಂಡಿ ಪಂಕಿಯನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಬಾಳೆ ಎಲೆಗಳನ್ನು ಸಹ ಬಳಸಲಾಗುತ್ತದೆ. ಇದು ಕರ್ನಾಟಕದಲ್ಲಿ ಮಾಡುವ ಕಡುಬಿನ ರುಚಿಯನ್ನೇ ಹೊಲುವ ತಿಂಡಿಯಾಗಿದೆ. ಇದನ್ನು ಅಕ್ಕಿ ಹಿಟ್ಟಿಗೆ ಅರಿಶಿನ ಸೇರಿಸಿ ಅದನ್ನು ಕಲಸಿ ಬಾಳೆ ಎಲೆಗೆ ಎಣ್ಣೆ ಹಾಕಿ ಈ ಮಿಶ್ರಣವನ್ನು ಹಚ್ಚಿ ಅದನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಬಳಿಕ ಅದನ್ನು ತುಪ್ಪದೊಂದಿಗೆ ಸವಿಯಲಾಗುತ್ತದೆ. ಗುಜರಾತ್ ಹೋಟೆಲ್ ಗಳಲ್ಲಿ ಇದನ್ನು 230 ರೂ. ಗೆ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯ ತಪ್ಪಿಸಬಹುದು
ಆರೋಗ್ಯ ಪ್ರಯೋಜನಗಳೇನು?
ಸಾಮಾನ್ಯವಾಗಿ ಬಾಳೆ ಎಲೆಗಳಲ್ಲಿ ಬೇಯಿಸಿದಂತಹ ಭಕ್ಷ್ಯಗಳು ನೈಸರ್ಗಿಕ ಪರಿಮಳವನ್ನು ಹೊಂದಿರುತ್ತವೆ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಅಲ್ಲದೆ ಬಾಳೆ ಎಲೆಗಳು ಆಹಾರದಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಪಂಕಿ ತಿಂಡಿಯನ್ನು ಬಾಳೆ ಎಲೆಗಳಲ್ಲಿ ಬೇಯಿಸಲಾಗುತ್ತದೆ. ಇದಲ್ಲದೆ, ಈ ತಿಂಡಿ ಗ್ಲುಟೆನ್ ಮುಕ್ತ ಎಂದು ಹೇಳಲಾಗುತ್ತದೆ. ಹಾಗಾಗಿ ಪಂಕಿ ತಿನ್ನಲು ಹೆದರುವ ಅಗತ್ಯವಿಲ್ಲ. ಅಲ್ಲದೆ ತುಪ್ಪ ಸೇರಿಸಿಕೊಂಡು ತಿನ್ನುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜೊತೆಗೆ ಅಕ್ಕಿ ಹಿಟ್ಟು ಗ್ಲುಟೆನ್ ಮುಕ್ತವಾಗಿದೆ. ಇದರಲ್ಲಿ ಫೈಬರ್ ಕಡಿಮೆ ಇದ್ದರೂ, ಇದನ್ನು ತಯಾರಿಸಲು ಬಳಸುವ ಪದಾರ್ಥಗಳು ಹೆಚ್ಚಿನ ಫೈಬರ್ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತದೆ. ಇದು ಕಡಿಮೆ ಕೊಬ್ಬು, ಕಡಿಮೆ ಕ್ಯಾಲೊರಿ, ಗ್ಲುಟೆನ್ ಮುಕ್ತವಾಗಿರುವುದರಿಂದ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ