Amla for diabetes: ಮಧುಮೇಹಿಗಳ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಲು ಇಲ್ಲಿವೆ 6 ಮಾರ್ಗಗಳು

ಆಮ್ಲಾ ಅಥವಾ ನೆಲ್ಲಿಕಾಯಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮಧುಮೇಹಿಗಳು ತಮ್ಮ ಆಹಾರದಲ್ಲಿ ಸೇವನೆ ಮಾಡಲೇಬೇಕಾದ ಆಹಾರಗಳಲ್ಲಿ ಆಮ್ಲಾ ಕೂಡ ಒಂದಾಗಿದೆ. ಇದರ ಪ್ರಯೋಜನಗಳು ಮತ್ತು ನಿಮ್ಮ ಆಹಾರದಲ್ಲಿ ಇದನ್ನು ಹೇಗೆ ಸೇರಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Amla for diabetes: ಮಧುಮೇಹಿಗಳ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಲು ಇಲ್ಲಿವೆ 6 ಮಾರ್ಗಗಳು
Amla for diabetesImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 30, 2023 | 8:32 PM

ಮಧುಮೇಹ ಜಾಗತಿಕವಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವುದರೊಂದಿಗೆ ಜಗತ್ತು ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. 2050ರ ವೇಳೆಗೆ ವಿಶ್ವಾದ್ಯಂತ 1.13 ಶತಕೋಟಿ ಜನರನ್ನು ಮಧುಮೇಹ ಆವರಿಸಿಕೊಳ್ಳಬಹುದು ಎಂದು ದಿ ಲ್ಯಾನ್ಸೆಟ್ನಲ್ಲಿ ನಡೆದ ಅಧ್ಯಯನವೊಂದು ಭವಿಷ್ಯ ನುಡಿದಿದೆ. ಮಧುಮೇಹವು ದೇಹದ ಅನೇಕ ಭಾಗಗಳಿಗೆ ಮತ್ತು ದೇಹವು ಕಾರ್ಯನಿರ್ವಹಿಸುವ ವಿಧಾನಕ್ಕೆ ಹಾನಿ ಮಾಡುತ್ತದೆ. ಈ ಕಾಯಿಲೆ ಇರುವ ಜನರು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡದ ಸಮಸ್ಯೆಗಳು, ಒಸಡು ಕಾಯಿಲೆಗಳು, ನರ ಹಾನಿ ಮತ್ತು ಕಣ್ಣಿನ ಸಮಸ್ಯೆಗಳಂತಹ ಇತರ ಪ್ರಮುಖ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿರುತ್ತಾರೆ. ಆದರೆ ಪ್ರತಿದಿನ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ತಮ್ಮ ಆಹಾರದಲ್ಲಿ ಸೇವನೆ ಮಾಡಲೇಬೇಕಾದ ಆಹಾರಗಳಲ್ಲಿ ಆಮ್ಲಾ ಕೂಡ ಒಂದಾಗಿದೆ. ಇದರ ಪ್ರಯೋಜನಗಳು ಮತ್ತು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮಧುಮೇಹಿಗಳು ಆಮ್ಲಾವನ್ನು ಹೇಗೆ ಬಳಸಬೇಕು ಎಂಬುದರ ಕುರಿತು, ಹೆಲ್ತ್ ಶಾಟ್ಸ್ ಪೌಷ್ಟಿಕತಜ್ಞ ಅವನಿ ಕೌಲ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ನೆಲ್ಲಿಕಾಯಿ ಮಧುಮೇಹಕ್ಕೆ ಒಳ್ಳೆಯದೇ?

ಆಮ್ಲಾ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡುತ್ತದೆ, ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಇಂಡಿಯನ್ ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ನೆಲ್ಲಿಕಾಯಿ ಅಥವಾ ಆಮ್ಲಾ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಅಲ್ಲದೆ ಇದು ದೇಹದಲ್ಲಿ ಹೆಚ್ಚುವರಿ ಸಕ್ಕರೆ ಸಂಗ್ರಹವಾಗದಂತೆ ತಡೆಯುತ್ತದೆ.

ಮಧುಮೇಹಕ್ಕೆ ಆಮ್ಲಾವನ್ನು ಹೇಗೆ ಬಳಸುವುದು?

ಆಮ್ಲಾ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ ಮತ್ತು ಮಧುಮೇಹವನ್ನು ನಿರ್ವಹಿಸುವಲ್ಲಿ ಅದರ ಸಂಭಾವ್ಯ ಪಾತ್ರ ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಆಯುರ್ವೇದದಲ್ಲಿ ಸಾಂಪ್ರದಾಯಿಕವಾಗಿ ಇದನ್ನು ಬಳಸಲಾಗುತ್ತದೆ. ಮಧುಮೇಹಕ್ಕೆ ಆಮ್ಲಾವನ್ನು ಹೇಗೆ ಬಳಸುವುದು ಎಂಬುದರ ಕುರಿತಾದ ಸಂಕ್ಷಿಪ್ತ ಮಾರ್ಗದರ್ಶಿ ಇಲ್ಲಿದೆ:

1. ನೆಲ್ಲಿಕಾಯಿ ರಸ:

ತಾಜಾ ಆಮ್ಲಾ ರಸದ ಸೇವನೆಯು ನಿಮ್ಮ ಮಧುಮೇಹ ನಿರ್ವಹಣಾ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ಸಾಮಾನ್ಯ ಮಾರ್ಗವಾಗಿದೆ. “ಸ್ವಲ್ಪ ಪ್ರಮಾಣದ ಆಮ್ಲಾ ರಸವನ್ನು ನೀರಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಆಮ್ಲಾದಲ್ಲಿನ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ” ಎಂದು ತಜ್ಞರು ತಿಳಿಸಿದ್ದಾರೆ.

2. ನೆಲ್ಲಿಕಾಯಿ ಪುಡಿ:

ನೆಲ್ಲಿಕಾಯಿ ಅಥವಾ ಆಮ್ಲಾ ನಿಮಗೆ, ಪುಡಿ ರೂಪದಲ್ಲಿ ಲಭ್ಯವಿದೆ ಮತ್ತು ಇದನ್ನು ನಿಮ್ಮ ಆಹಾರದಲ್ಲಿ ವಿವಿಧ ರೀತಿಯಲ್ಲಿ ಸೇರಿಸಬಹುದು. ಆಮ್ಲಾ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಅಥವಾ ಸಲಾಡ್, ಮೊಸರು ಅಥವಾ ಇತರ ಭಕ್ಷ್ಯಗಳ ಮೇಲೆ ಸಿಂಪಡಿಸಬಹುದು. ನೆಲ್ಲಿಕಾಯಿ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಉತ್ತಮ ಕೊಡುಗೆ ನೀಡಬಹುದು.

3. ಆಮ್ಲಾ ಪೂರಕಗಳು:

“ಕ್ಯಾಪ್ಸೂಲ್ಗಳು ಅಥವಾ ಮಾತ್ರೆಗಳಂತಹ ಆಮ್ಲಾ ಪೂರಕಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ನಿಮ್ಮ ದಿನಚರಿಯಲ್ಲಿ ಯಾವುದೇ ಪೂರಕವನ್ನು ಸೇರಿಸುವ ಮೊದಲು, ತಜ್ಞರನ್ನು ಸಂಪರ್ಕಿಸಿ ನಿಮ್ಮ ಇತರ ಔಷಧಿಗಳಿಗೆ ಅದು ಅಡ್ಡಿಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಇದನ್ನು ಸೇವನೆ ಮಾಡಿ” ಎಂದು ತಜ್ಞರು ಸಲಹೆ ನೀಡುತ್ತಾರೆ.

4. ಆಮ್ಲಾದ ಚಹಾ:

ಒಣಗಿಸಿದ ಆಮ್ಲಾ ತುಂಡುಗಳನ್ನು ನೀರಿನಲ್ಲಿ ಕುದಿಸುವ ಮೂಲಕ ಆಮ್ಲಾ ಚಹಾವನ್ನು ತಯಾರಿಸಿಕೊಳ್ಳಬಹುದು. ನಿಮ್ಮ ದೈನಂದಿನ ದಿನಚರಿಯಲ್ಲಿ ಆಮ್ಲಾವನ್ನು ಸೇರಿಸಲು ಇದು ಆಹ್ಲಾದಕರ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಹೆಚ್ಚುವರಿ ಪ್ರಯೋಜನಗಳಿಗಾಗಿ ದಾಲ್ಚಿನ್ನಿಯಂತಹ ಇತರ ಮಧುಮೇಹ ಸ್ನೇಹಿ ಗಿಡಮೂಲಿಕೆಗಳನ್ನು ಕೂಡ ನೀವು ಸೇರಿಸಿಕೊಳ್ಳಬಹುದು.

5. ಆಮ್ಲಾ ಮತ್ತು ಮೆಂತ್ಯ ಬೀಜದ ಮಿಶ್ರಣ:

ಮೆಂತ್ಯ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಆಮ್ಲಾ ಪುಡಿ ಮತ್ತು ಮೆಂತ್ಯ ಬೀಜದ ಪುಡಿಯ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಅದನ್ನು ಕುಡಿಯಬಹುದು ಅಥವಾ ಊಟದ ಜೊತೆ ಬಳಸಿಕೊಳ್ಳಬಹುದು. ಈ ಸಂಯೋಜನೆಯು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

6. ಆಮ್ಲಾ ಉಪ್ಪಿನಕಾಯಿ:

“ಆಮ್ಲಾ ಉಪ್ಪಿನಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ರುಚಿಕರವಾದ ಮಾರ್ಗವಾಗಿದೆ. ಮನೆಯಲ್ಲಿ ತಯಾರಿಸಿದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಮ್ಲಾ ಉಪ್ಪಿನಕಾಯಿಯನ್ನು ಊಟದ ಜೊತೆ ಸೇವನೆ ಮಾಡಬಹುದು. ಆಮ್ಲಾ ಮತ್ತು ಮಸಾಲೆಗಳ ಸಂಯೋಜನೆಯು ನಿಮ್ಮ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅತಿಯಾಗಿ ಇದನ್ನು ಸೇವನೆ ಮಾಡಬೇಡಿ”ಎಂದು ಪೌಷ್ಟಿಕತಜ್ಞ ಅವನಿ ಕೌಲ್ ಸಲಹೆ ನೀಡುತ್ತಾರೆ.

ಆಮ್ಲಾವನ್ನು ಹೆಚ್ಚಿನ ಜನರಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಮಧುಮೇಹ ಹೊಂದಿದ್ದರೆ ಅಥವಾ ಬೇರೆ ಬೇರೆ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ನಿಮ್ಮ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಸಲಹೆಯನ್ನು ನೀಡಬಹುದು. ಇದರ ಜೊತೆಯಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆರೋಗ್ಯ ವೃತ್ತಿಪರರು ಮತ್ತು ಅರ್ಹ ಆಹಾರ ತಜ್ಞರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?