ಮಹಿಳೆಯರೇ… ಆಂಡ್ರೋಜೆನ್ ಹಾರ್ಮೋನ್ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಬೇಡ್ವೇ ಬೇಡ
ಮನುಷ್ಯನ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನುಗಳಿವೆ. ಅವುಗಳಲ್ಲಿ ಆಂಡ್ರೋಜನ್ ಕೂಡಾ ಒಂದು. ಪುರುಷ ಹಾರ್ಮೋನ್ ಆಗಿರುವ ಇದು ಸ್ತ್ರೀ-ಪುರುಷ ಇಬ್ಬರಲ್ಲೂ ಕಂಡು ಬರುತ್ತದೆ. ಆದರೆ ದೇಹದಲ್ಲಿ ಈ ಹಾರ್ಮೋನು ಹೆಚ್ಚಾದರೆ ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವುದು, ಮೊಡವೆಗಳ ಸಮಸ್ಯೆ ಕಾಣಿಸಿಕೊಳುತ್ತವೆ. ಆದ್ರೆ ಇದನ್ನು ಹೆಚ್ಚಿನವರು ಕಡೆಗಣಿಸುತ್ತಾರೆ. ಇದರ ಕಡೆಗಣನೆ ಒಳ್ಳೆಯದಲ್ಲ, ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.

ಪುರುಷರು ಮತ್ತು ಮಹಿಳೆಯರ ದೇಹದಲ್ಲಿ ಹಲವು ರೀತಿಯ ಹಾರ್ಮೋನುಗಳಿವೆ (hormones). ಈ ಹಾರ್ಮೋನುಗಳು ದೇಹದ ಸುಗಮ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಆಂಡ್ರೋಜೆನ್ (androgen) ಕೂಡ ಒಂದು. ಪುರುಷ ಹಾರ್ಮೋನು ಆಗಿರುವ ಇದು ದೇಹದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರು ಇಬ್ಬರ ದೇಹದಲ್ಲೂ ಆಂಡ್ರೋಜೆನ್ ಉತ್ಪತ್ತಿ ಆಗುತ್ತದೆ. ಈ ಹಾರ್ಮೋನು ಮಹಿಳೆಯರ (women) ದೇಹದಲ್ಲಿ ಹೆಚ್ಚು ಉತ್ಪತ್ತಿಯಾದರೆ ಮೊಡವೆ, ಅನಿಯಮಿತ ಮುಟ್ಟು, ಮುಖದಲ್ಲಿ ಕೂದಲು ಬೆಳೆಯುವುದು ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ, ಅನುವಂಶಿಕ ಇತ್ಯಾದಿ ಕಾರಣಗಳಿಂದ ಹಾರ್ಮೋನು ವ್ಯತ್ಯಯ ಆಗುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಇದೊಂದು ಸಾಮಾನ್ಯ ಸಮಸ್ಯೆ ಎಂದು ಹಾರ್ಮೋನು ವ್ಯತ್ಯಯವನ್ನು ಕಡೆಗಣಿಸುತ್ತಾರೆ. ಇದರ ಕಡೆಗಣನೆ ಒಳ್ಳೆಯದಲ್ಲ, ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ಆಂಡ್ರೋಜೆನ್ ಅಧಿಕತೆಯ ಸಮಸ್ಯೆಯನ್ನು ಹೆಚ್ಚಿನ ಜನ ನಿರ್ಲಕ್ಷಿಸುತ್ತಾರೆ:
ಮಹಿಳೆಯರ ದೇಹದಲ್ಲಿ ಆಂಡ್ರೋಜೆನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಆಗುವುದರಿಂದ ಪದೇ ಪದೇ ಮೊಡವೆಗಳು ಉಂಟಾಗುವುದು, ತಲೆ ಕೂದಲು ತೆಳುವಾಗುವುದು, ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುವುದು, ಅನಿಯಮಿತ ಮುಟ್ಟು, ಮಾನಸಿಕ ಕಿರಿಕಿರಿ, ದೇಹ ತೂಕ ಹೆಚ್ಚಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲಕ್ಷಾಂತರ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೂ, ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಮತ್ತು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಆಂಡ್ರೋಜೆನ್‌ಗಳನ್ನು ಸಾಮಾನ್ಯವಾಗಿ “ಪುರುಷ ಹಾರ್ಮೋನುಗಳು” ಎಂದು ಕರೆಯಲಾಗುತ್ತದೆ. ಎಲ್ಲಾ ಮಹಿಳೆಯರಲ್ಲೂ ಈ ಹಾರ್ಮೋನು ಇರುತ್ತವೆ. ಆದ್ರೆ ಈ ಹಾರ್ಮೋನ್ ಮಟ್ಟ ತುಂಬಾ ಹೆಚ್ಚಾದಾಗ ಸಮಸ್ಯೆ ಉದ್ಭವಿಸುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯವಿದೆ ಜೊತೆಗೆ ಈ ಹಾರ್ಮೋನು ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ಅಗತ್ಯ ಬೆಂಬಲ ಅಥವಾ ಚಿಕಿತ್ಸೆ ಸಿಗುತ್ತಿಲ್ಲ.
ಆಂಡ್ರೊಜೆನ್ ಹಾರ್ಮೋನು ಹೆಚ್ಚಾಗಲು ಮುಖ್ಯ ಕಾರಣವೆಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS). ಇದು ಜಾಗತಿಕವಾಗಿ 13% ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಆದರೂ ಆಂಡ್ರೊಜೆನ್ ಹೆಚ್ಚಾಗಲು ಇದು ಒಂದೇ ಕಾರಣವಲ್ಲ. ಕೆಲವೊಮ್ಮೆ ಗಂಭೀರ ಅಸ್ವಸ್ಥತೆಗಳು, ಜನ್ಮಜಾತ ಅಡ್ರಿನಲ್ ಹೈಪರ್ಪ್ಲಾಸಿಯಾ, ಕುಶಿಂಗ್ ಸಿಂಡ್ರೋಮ್ ಮತ್ತು ಇನ್ಸುಲಿನ್ ಪ್ರತಿರೋಧದಂತಹ ಅಂಶಗಳು ಕೂಡಾ ಹಾರ್ಮೋನ್ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. ಆದಾಗ್ಯೂ, ಆಂಡ್ರೊಜೆನ್ ಹೆಚ್ಚಾಗಲು ಪಿಸಿಓಎಸ್ ಮುಖ್ಯ ಕಾರಣ ಎಂಬ ಊಹೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಗಂಭೀರ ಪರಿಸ್ಥಿತಿಗೆ ಚಿಕಿತ್ಸೆ ಪಡೆಯುವ ಗೋಜಿಗೆ ಹೋಗುತ್ತಿಲ್ಲ.
ಇದನ್ನೂ ಓದಿ: ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
ನಿರ್ಲಕ್ಷ್ಯದಿಂದ ಕಾಯಿಲೆ ಬರಬಹುದು:
ಹೆಚ್ಚಿನ ಮಹಿಳೆಯರು ಮುಖದ ಮೇಲೆ ಕೇವಲ ಕೂದಲು ಮಾತ್ರ ಬೆಳೆಯೋದಲ್ವಾ ಅಂತ ಹೇಳಿ ಆಂಡ್ರೋಜನ್ ಹಾರ್ಮೋನು ಹೆಚ್ಚಾಗುವ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಅದಕ್ಕಿಂತಲೂ ಗಂಭೀರವಾದದ್ದು. ಇದು ಚಯಾಪಚಯ ಕ್ರಿಯೆಯಲ್ಲಿ ಸಮಸ್ಯೆ, ಟೈಪ್ 2 ಮಧುಮೇಹ, ದೇಹ ತೂಕ ಹೆಚ್ಚಳ, ಅಧಿಕ ರಕ್ತದೊತ್ತಡ, ಯಕೃತ್ತಿನ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಇದಲ್ಲದೆ ಇದರಿಂದ ಗರ್ಭಾಧಾರಣೆಯ ತೊಂದರೆ, ಆತಂಕ ಖಿನ್ನತೆಯು ಕಾಣಿಸಿಕೊಳ್ಳುತ್ತದೆ. ಗರ್ಭಾಧಾರಣೆಯ ಸಂದರ್ಭದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ ಮಾತ್ರ ಹೆಚ್ಚಿನ ಮಹಿಳೆಯರು ವೈದ್ಯರನ್ನು ಸಂಪರ್ಕಿಸುತ್ತಾರೆ. ಮತ್ತು ಸುಮಾರು ಅರ್ಧದಷ್ಟು ಜನರು ಆರಂಭದಲ್ಲಿ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ಇದರ ಬಗ್ಗೆ ಜಾಗೃತಿ ಮೂಡಿಸಬಹುದು ಮತ್ತು ರೋಗನಿರ್ಣಯ ಮತ್ತು ಚಿಕಿತ್ಸೆ ನೀಡುವ ವಿಧಾನವನ್ನು ಸುಧಾರಿಸುವುದು ತುಂಬಾನೇ ಮುಖ್ಯವಾಗಿದೆ.
ಜೂನ್ 2024 ರಲ್ಲಿ, ಇಂಗ್ಲೆಂಡ್‌ನಲ್ಲಿರುವ ಸೊಸೈಟಿ ಫಾರ್ ಎಂಡೋಕ್ರೈನಾಲಜಿ ಸಂಸ್ಥೆಯ ವೈದ್ಯರು ಆಂಡ್ರೋಜೆನ್ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಗುರುತಿಸಲು ಮತ್ತು ಅದರ ಪರಿಣಾಮಕಾರಿ ಚಿಕಿತ್ಸೆಗಾಗಿ ರೋಗನಿರ್ಣಯದ ಹೊಸ ಕ್ಲಿನಿಕಲ್ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರು. ಈ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾದ ರೋಗನಿರ್ಣಯ ಮಾರ್ಗಗಳು, ರಕ್ತ ಪರೀಕ್ಷೆಗಳು, ಸ್ಕ್ಯಾನ್‌ಗಳನ್ನು ಯಾವಾಗ ನಡೆಸಬೇಕು ಎಂಬುದರ ಕುರಿತು ಶಿಫಾರಸುಗಳು, ಮಾರ್ಗದರ್ಶನಗಳನ್ನು ನೀಡಲಾಗಿತ್ತು.
ಪ್ರಕಟಣೆ, ಮಾರ್ಗಸೂಚಿಗಳು ಕೇವಲ ಮೊದಲ ಹೆಜ್ಜೆ. ಮಹಿಳೆಯರ ಜೀವನದಲ್ಲಿ ನಿಜವಾದ ಬದಲಾವಣೆ ತರಲು, ಹಲವಾರು ವಿಷಯಗಳು ಆಗಬೇಕಾಗಿದೆ. ಮೊದಲನೆಯದಾಗಿ, ಈ ಕಾಯಿಲೆಯ ಸಂಶೋಧನೆಗೆ ಹೆಚ್ಚಿನ ಹೂಡಿಕೆ ಬೇಕು ಎಂದು ಸಂಶೋಧನಾ ವೈದ್ಯರು ಹೇಳಿದ್ದಾರೆ. ಕೆಲವು ಮಹಿಳೆಯರ ದೇಹದಲ್ಲಿ ಏಕೆ ಹೆಚ್ಚು ಆಂಡ್ರೋಜೆನ್ ಉತ್ಪತ್ತಿಯಾಗುತ್ತವೆ ಮತ್ತು ಇದರ ಲಕ್ಷಣಗಳು ವ್ಯಕ್ತಿಗಳಿಗಿಂತ ವ್ಯಕ್ತಿಗಳಿಗೆ ಹೇಗೆ ಎಂಬುದನ್ನು ನಾವು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಮಹಿಳೆಯರ ಆರೋಗ್ಯದಲ್ಲಿನ ಸಂಶೋಧನೆಯು ಬಹಳ ಹಿಂದಿನಿಂದಲೂ ಹಣದ ಕೊರತೆಯನ್ನು ಎದುರಿಸುತ್ತಿದೆ ಮತ್ತು ಆಂಡ್ರೋಜೆನ್-ಸಂಬಂಧಿತ ಸಂಶೋಧನೆ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಈ ಸಮಸ್ಯೆಗೆ ಉತ್ತಮ ಚಿಕಿತ್ಸೆಯ ಅಗತ್ಯವಿದೆ. ಸಾಮಾನ್ಯ ವೈದ್ಯರು, ಸ್ತ್ರೀರೋಗತಜ್ಞರು, ಚರ್ಮರೋಗ ತಜ್ಞರು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರು ಸಹ ಆಂಡ್ರೋಜೆನ್ ಅಧಿಕತೆಯ ಚಿಹ್ನೆಗಳನ್ನು ಗುರುತಿಸುವಲ್ಲಿ ಪಾತ್ರವಹಿಸುತ್ತಾರೆ. ಇವರು ರೋಗ ಲಕ್ಷಣಗಳು, ಸರಿಯಾದ ಚಿಕಿತ್ಸೆ ಏನು ಎಂಬುದರ ಬಗ್ಗೆ ಸ್ಪರ್ಷವಾಗಿ ಹೇಳಿ ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಬೇಕು. ಆಂಡ್ರೊಜೆನ್ ಅಧಿಕತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸಾಮಾನ್ಯ ಸಮಸ್ಯೆಯಂತೆ ಕಾಣಬಹುದು. ಆದರೆ ಇದರ ಪರಿಣಾಮ ಬಹಳ ಆಳವಾಗಿದೆ. ಆದ್ದರಿಂದ ಇದರ ಬಗ್ಗೆ ಉತ್ತಮ ತಿಳುವಳಿಕೆ, ಉತ್ತಮ ಆರೈಕೆ ಮತ್ತು ಉತ್ತಮ ಚಿಕಿತ್ಸೆಯ ಅಗತ್ಯವಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








