Gobi Manchurian: ನೀವು ಗೋಬಿ ಮಂಚೂರಿ ಪ್ರಿಯರಾ?; ಇದನ್ನು ತಿನ್ನೋ ಮುಂಚೆ ಯೋಚಿಸಿ!
ಚೈನೀಸ್ ಖಾದ್ಯವಾದ ಗೋಬಿ ಮಂಚೂರಿಯನ್ ಎಂದರೆ ಎಲ್ಲರಿಗೂ ಇಷ್ಟ. ಬೀದಿ ಬದಿಯ ಗೂಡಂಗಡಿಯಿಂದ ಹಿಡಿದು ಪ್ರಸಿದ್ಧ ರೆಸ್ಟೋರೆಂಟ್ಗಳವರೆಗೆ ಎಲ್ಲ ಕಡೆಯೂ ಗೋಬಿ ಮಂಚೂರಿ ಸಿಗುತ್ತದೆ. ಅದರ ಬೆಲೆ, ಜಾಗಕ್ಕೆ ಅನುಗುಣವಾಗಿ ಬೆಲೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಆದರೆ, ಆರೋಗ್ಯದ ವಿಚಾರ ಬಂದಾಗ ಗೋಬಿ ಮಂಚೂರಿಯನ್ ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು? ಗೋಬಿ ಮಂಚೂರಿಯನ್ ಸೇವನೆಯಿಂದ ಆರೋಗ್ಯಕ್ಕೆ ಏನಾದರೂ ಕೆಟ್ಟ ಪರಿಣಾಮಗಳಾಗುತ್ತದೆಯೇ?
ಗೋಬಿ ಮಂಚೂರಿಯನ್ ಬಹುತೇಕ ಎಲ್ಲರ ಫೇವರೆಟ್ ತಿನಿಸು. ಸಂಜೆಯ ವೇಳೆಗೆ ಒಂದು ಪ್ಲೇಟ್ ಬಿಸಿಬಿಸಿಯಾದ ಗೋಬಿ ಮಂಚೂರಿಯನ್ (Gobi Manchurian) ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ನಿಮಗೂ ಗೋಬಿ ಮಂಚೂರಿಯನ್ ಇಷ್ಟವಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಗೋಬಿ ಮಂಚೂರಿಯನ್ ಬಹಳ ಕ್ಯಾಲೊರಿಗಳಿಂದ ತುಂಬಿರುತ್ತದೆ. ಇದನ್ನು ಹೂಕೋಸು, ಈರುಳ್ಳಿಗಳನ್ನು ಹಾಕಿ ತಯಾರಿಸಲ್ಪಟ್ಟಿದ್ದರೂ ಇದನ್ನು ಎಣ್ಣೆಯಲ್ಲಿ ಕರಿದು, ಸಾಸ್ ಮತ್ತು ಕಾರ್ನ್‌ಫ್ಲೋರ್, ಇತರೆ ಪದಾರ್ಥಗಳೊಂದಿಗೆ ಮತ್ತೆ ಹುರಿಯಲಾಗುತ್ತದೆ. ಹೀಗಾಗಿ, ಗೋಬಿ ಮಂಚೂರಿಯನ್ ನಮ್ಮ ಆರೋಗ್ಯಕ್ಕೆ ಹೆಚ್ಚು ಉತ್ತಮವಾದ ಆಹಾರವಲ್ಲ.
ಗೋಬಿ ಮಂಚೂರಿಯನ್ ಬಗ್ಗೆ ವಿವಾದ ಏಕೆ?:
ಉರಿಯುತ್ತಿರುವ ಬಾಣಲೆಯಲ್ಲಿ ಕೆಂಪು ಸಾಸ್, ಹಸಿರು ಸಾಸ್, ವಿನೇಗರ್ ಹಾಕಿ ಅದರಲ್ಲಿ ಎಣ್ಣೆಯಲ್ಲಿ ಕರಿದ ಹೂಕೋಸನ್ನು ಹಾಕಿ ಗೋಬಿ ಮಂಚೂರಿಯನ್ ಅನ್ನು ತಯಾರಿಸಲಾಗುತ್ತದೆ. ಇದು ಆಹಾರ ಪ್ರಿಯರಿಗೆ ಬಹಳ ಹಿಂದಿನಿಂದಲೂ ಅಚ್ಚುಮೆಚ್ಚಿನದ್ದಾಗಿದೆ. ಆದರೆ, ಇದರಲ್ಲಿರುವ ಕೃತಕ ಬಣ್ಣಗಳು ಮತ್ತು ನೈರ್ಮಲ್ಯದ ಕಾರಣದಿಂದ ಗೋವಾದ ನಗರವಾದ ಮಾಪುಸಾದ ಸ್ಟಾಲ್‌ಗಳು ಮತ್ತು ಹಬ್ಬಗಳಲ್ಲಿ ಗೋಬಿ ಮಂಚೂರಿಯನ್ ಅನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯಾ?; ಮೆದುಳಿನ ಆರೋಗ್ಯ ಹೆಚ್ಚಿಸುವ 5 ಆಹಾರಗಳಿವು
ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಮಾತ್ರವಲ್ಲ ಈ ಹಿಂದೆ 2022ರಲ್ಲಿ ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಜಾತ್ರೆಯ ಸಂದರ್ಭದಲ್ಲಿ ಕೂಡ ಗೋಬಿ ಮಂಚೂರಿಯನ್ ಮಾರಾಟ ಮಾಡದಂತೆ ಸ್ಟಾಲ್‌ಗಳನ್ನು ನಿರ್ಬಂಧಿಸಲು ಎಫ್‌ಡಿಎ ಮೊರ್ಮುಗಾವೊ ಮುನ್ಸಿಪಲ್ ಕೌನ್ಸಿಲ್‌ಗೆ ಸೂಚನೆಗಳನ್ನು ನೀಡಿತ್ತು.
ಗೋಬಿ ಮಂಚೂರಿಯನ್ ಅನ್ನು ಹೂಕೋಸು, ಕೆಲವೊಮ್ಮೆ ಎಲೆಕೋಸು, ಕ್ಯಾರೆಟ್, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ ತಯಾರಿಸಲಾಗುತ್ತದೆ. ಹೂಕೋಸುಗಳನ್ನು ಹಿಟ್ಟಿನಲ್ಲಿ ಕಲೆಸಿ, ಕರಿಯಲಾಗುತ್ತದೆ. ನಂತರ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಈರುಳ್ಳಿ ಎಲೆ, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಮಸಾಲೆಗಳಿಂದ ತಯಾರಿಸಿದ ಸಾಸ್‌ನಲ್ಲಿ ಅದನ್ನು ಹಾಕಿ ಬೇಯಿಸಲಾಗುತ್ತದೆ. ಈ ಗೋಬಿ ಮಂಚೂರಿಯನ್ 116 ಕ್ಯಾಲೊರಿಗಳನ್ನು ಹೊಂದಿದೆ.
ಇದನ್ನೂ ಓದಿ: ನೀವು ಕುಡಿಯುವ ಹಾಲನ್ನು ಇನ್ನಷ್ಟು ಆರೋಗ್ಯಕರವಾಗಿಸುವುದು ಹೇಗೆ?
ಹೂಕೋಸು – 40 ಕ್ಯಾಲೋರಿಗಳು
ಆಲಿವ್ ಎಣ್ಣೆ – 30 ಕ್ಯಾಲೋರಿಗಳು
ಗೋಧಿ ಹಿಟ್ಟು – 27 ಕ್ಯಾಲೋರಿಗಳು
ಹಿಟ್ಟು ಮತ್ತು ಕಾರ್ನ್ ಪಿಷ್ಟ – 24 ಕ್ಯಾಲೋರಿಗಳು
ಈರುಳ್ಳಿ – 19 ಕ್ಯಾಲೋರಿಗಳು
ವಿನೆಗರ್ ಮತ್ತು ಸೋಯಾ ಸಾಸ್ – 8 ಕ್ಯಾಲೋರಿಗಳು
ಬೆಳ್ಳುಳ್ಳಿ – 4 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹೀಗಾಗಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಗೋಬಿ ಮಂಚೂರಿಯನ್ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ?:
ಗೋಬಿ ಮಂಚೂರಿಯನ್ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ನಿಂದ ಕೂಡಿದೆ. ಇವು ಜೀರ್ಣಾಂಗವನ್ನು ಸ್ಪಷ್ಟವಾಗಿಡಲು ಸಹಾಯ ಮಾಡುವ ಪೋಷಕಾಂಶಗಳಾಗಿವೆ. ಆದರೂ ಇದರಲ್ಲಿರುವ ಮೈದಾ ಮತ್ತು ಚೈನೀಸ್ ಸಾಸ್‌ಗಳಂತಹ ಪದಾರ್ಥಗಳು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸಿ, ಅಧಿಕ ರಕ್ತದೊತ್ತಡ, ತೂಕ ಹೆಚ್ಚಾಗುವುದು ಮತ್ತು ನೀರಿನ ಧಾರಣಕ್ಕೆ ಕಾರಣವಾಗುತ್ತದೆ. ದೀರ್ಘಾವಧಿಯಲ್ಲಿ ಇದು ಮೂತ್ರಪಿಂಡದ ಸಮಸ್ಯೆಗಳು ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು. ಕೆಲವು ರೋಗಿಗಳು ಜಠರಗರುಳಿನ ಸಮಸ್ಯೆಗಳು, ಅಲರ್ಜಿಗಳು, ಉಬ್ಬುವುದು ಮತ್ತು ಮಲಬದ್ಧತೆಯನ್ನು ಸಹ ಅನುಭವಿಸಬಹುದು. ಹೀಗಾಗಿ, ಗೋಬಿ ಮಂಚೂರಿಯನ್ ಅನ್ನು ಸೇವಿಸುವುದನ್ನು ಅವಾಯ್ಡ್ ಮಾಡುವುದು ಉತ್ತಮ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ