Health Tips: ಬೆಳಗ್ಗೆ ನಿಂಬೆ ನೀರು ಕುಡಿಯುವ ಅಭ್ಯಾಸ ನಿಮಗಿದೆಯಾ? ಈ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರವಿರಲಿ

ಅನೇಕ ಜನರು ತೂಕ ಇಳಿಸಿಕೊಳ್ಳಲು ಮತ್ತು ನಿರ್ವಿಶೀಕರಣಕ್ಕಾಗಿ ಬಿಸಿನೀರಿನೊಂದಿಗೆ ನಿಂಬೆ ರಸವನ್ನು ಕುಡಿಯುತ್ತಾರೆ. ಆದರೆ ಇದನ್ನು ಹೆಚ್ಚು ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಇದು ಅನೇಕ ರೀತಿಯಲ್ಲಿ ಪರಿಣಾಮ ಬೀರಬಹುದು.

Health Tips: ಬೆಳಗ್ಗೆ ನಿಂಬೆ ನೀರು ಕುಡಿಯುವ ಅಭ್ಯಾಸ ನಿಮಗಿದೆಯಾ? ಈ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರವಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 21, 2023 | 1:14 PM

ನಿಂಬೆ ನೀರು ಉಲ್ಲಾಸದಾಯಕ ಮತ್ತು ಬೇಸಿಗೆಯಲ್ಲಿ ಅತ್ಯಗತ್ಯವಾಗಿರುತ್ತದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಮತ್ತು ನಿರ್ವಿಶೀಕರಣಕ್ಕಾಗಿ ಬಿಸಿನೀರಿನೊಂದಿಗೆ ನಿಂಬೆ ರಸವನ್ನು ಕುಡಿಯುತ್ತಾರೆ. ಆದರೆ ಇದನ್ನು ಹೆಚ್ಚು ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಇದು ಅನೇಕ ರೀತಿಯಲ್ಲಿ ಪರಿಣಾಮ ಬೀರಬಹುದು. ನಿಂಬೆರಸದ ಅತಿಯಾದ ಸೇವನೆಯು ಹೊಟ್ಟೆಯ ಸಮಸ್ಯೆಗಳು, ಹಲ್ಲಿನ ಸಮಸ್ಯೆಗಳು, ನಿರ್ಜಲೀಕರಣ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬಹುತೇಕರು ಬೇಸಿಗೆಯಲ್ಲಿ ರಿಫ್ರೆಶ್ ಆಗಿರಲು ನಿಂಬೆ ನೀರನ್ನು ಸೇವನೆ ಮಾಡುತ್ತಾರೆ. ಇದರ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಅಂಶವು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಅನೆಕರು ಹೇಳುತ್ತಾರೆ. ಇದು ಮಾತ್ರವಲ್ಲದೆ ಆರೋಗ್ಯಕರ ಹೊಳೆಯುವ ಚರ್ಮ, ರೋಗನಿರೋಧಕ ಶಕ್ತಿ ಹಾಗೂ ತೂಕವನ್ನು ಕಳೆದುಕೊಳ್ಳಲು ನಿಂಬೆ ನೀರು ನಮಗೆ ಸಹಾಯ ಮಾಡುತ್ತದೆ. ನಿಂಬೆ ನೀರು ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದರ ಅತಿಯಾದ ಸೇವನೆಯೂ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು.

ಹೆಚ್ಚು ನಿಂಬೆರಸವನ್ನು ಸೇವನೆ ಮಾಡುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದೊಂದಿಗೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಸುಧಾರಣೆಯಾಗುತ್ತದೆ. ಆದರೆ ದಿನವಿಡೀ ಇದನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರದಲ್ಲಿ ಇದು ಕಿರಿಕಿರಿಗೆ ಕಾರಣವಾಗಬಹುದು. ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಎದೆಯುರಿ, ಹೊಟ್ಟೆನೋವು, ವಾಕರಿಕೆಗೆ ಕಾರಣವಾಗಬಹುದು.

ನಿರ್ಜಲೀಕರಣಕ್ಕೆ ಕಾರಣವಾಗಬಹುದು: ಆರೋಗ್ಯ ತಜ್ಞರ ಪ್ರಕಾರ, ನಿಂಬೆ ರಸವು ದೇಹದಿಂದ ವಿಷವನ್ನು ತೆಗೆದುಹಾಕುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಆದರೆ ಇದರ ಅತಿಯಾದ ಸೇವನೆಯಿಂದ ಇದು ಮೂತ್ರವರ್ಧಕವಾಗಿರುವುದರಿಂದ, ಮೂತ್ರಪಿಂಡದಲ್ಲಿ ಹೆಚ್ಚು ಮೂತ್ರ ಉತ್ಪಾದನೆಗೆ ಕಾರಣವಾಗಬಹುದು. ಹೀಗಾಗಿ ನೀರಿನ ಜೊತೆಗೆ ಮೂತ್ರವಿಸರ್ಜನೆಯು ದೇಹಿಂದ ಎಲೆಕ್ಟೊಲೈಟ್‌ಗಳನ್ನು ಹೊರಹಾಕುತ್ತದೆ. ಇದು ನಿರ್ಜಲೀಕರಣ, ಸುಸ್ತು, ಒಣತುಟಿ ಹಾಗೂ ಅತಿಯಾದ ಬಾಯಾರಿಕೆಗೆ ಕಾರಣವಾಗಬಹುದು.

ಮೈಗ್ರೇನ್ ತಲೆನೋವನ್ನು ಪ್ರಚೋದಿಸುತ್ತದೆ: ಪ್ರತಿದಿನ ಹೆಚ್ಚು ನಿಂಬೆ ನೀರನ್ನು ಕುಡಿಯುವುದರಿಂದ ತೀವ್ರವಾದ ತಲೆನೋವು ಮತ್ತು ಮೈಗ್ರೇನ್ ಉಂಟಾಗುತ್ತದೆ.

ಇದನ್ನೂ ಓದಿ: Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?

ದಂತಕ್ಷಯ: ನಿಂಬೆರಸ ಆಮ್ಲೀಯವಾಗಿರುವುದರಿಂದ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹಲ್ಲುಗಳಿಗೆ ಜುಮ್ಮೆನಿಸುವ ಸಂವೇದನೆಯನ್ನು ನೀಡುತ್ತದೆ ಮತ್ತು ಹಲ್ಲಿನ ದಂತಕವಚದ ಕೊಳೆಯುವುಕೆಗೆ ಕಾರಣವಾಗಬಹುದು.

ಕೂದಲಿಗೆ ಹಾನಿ: ಅತಿಯಾದ ನಿಂಬೆರಸದ ಸೇವನೆಯು ಕೂದಲು ಉದುರುವಿಕೆಗೆ ಕಾರಣವಾಗುವ ಕೂದಲಿನ ಕಿರುಚೀಲವನ್ನು ಒಣಗಿಸುವ ಮೂಲಕ ಕೂದಲಿಗೆ ಹಾನಿಯನ್ನು ಉಂಟುಮಾಡುತ್ತದೆ.

ಬಾಯಿ ಹುಣ್ಣು: ಆಮ್ಲೀಯ ಅಥವಾ ಮಸಾಲೆಯುಕ್ತ ಆಹಾರಗಳನ್ನು ಅತಿಯಾಗಿ ಸೇವಿಸುವವರು, ವಿಟಮಿನ್ ಕೊರತೆಯಿಂದ ಬಾಯಿಹುಣ್ಣಿಗೆ ತುತ್ತಾಗುತ್ತಾರೆ. ನಿಂಬೆ ರಸದ ಅತಿಯಾದ ಸೇವನೆಯಿಂದ ಬಾಯಿಯಲ್ಲಿ ಹುಣ್ಣುಗಳು ಉಂಟಾಗುತ್ತದೆ.

Published On - 1:11 pm, Tue, 21 March 23