Indigestion
Image Credit source: Pinterest
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಜನರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತಿವೆ. ಅತೀ ಹೆಚ್ಚು ಜನರನ್ನು ಕಾಡುವ ಸಮಸ್ಯೆಯೆಂದರೆ ಅಜೀರ್ಣ. ಈ ಸಮಸ್ಯೆಯಿದ್ದಾಗ ಸೇವಿಸಿದ ಆಹಾರವು ಜೀರ್ಣವಾಗದೇ ವಾಕರಿಕೆ, ಎದೆಯುರಿ, ವಾಂತಿ ಸೇರಿದಂತೆ ಇನ್ನಿತ್ತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಏನು ಬೇಡವೇ ಬೇಡ ಎಂದೆನಿಸುವುದು ಸಹಜ. ಹೀಗಾದಾಗ ಆಹಾರಕ್ರಮದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಗಳನ್ನು ಮಾಡಿಕೊಂಡರೆ ಉತ್ತಮ. ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಅಜೀರ್ಣ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಅಜೀರ್ಣ ಸಮಸ್ಯೆಯ ನಿವಾರಣೆಗೆ ಮನೆ ಮದ್ದುಗಳು:
- ಪ್ರತಿದಿನ ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದರೆ ಅಜೀರ್ಣ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಊಟದ ಬಳಿಕ ಶುಂಠಿ ಜಗಿದು ತಿನ್ನುವುದರಿಂದ ಅಜೀರ್ಣಯೂ ಗುಣಮುಖವಾಗುತ್ತದೆ.
- ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗೆ ಪರಿಣಾಮಕಾರಿಯಾಗಿದೆ.
- ಕರಿಮೆಣಸು, ಬೆಳ್ಳುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಬೆರೆಸಿ, ಚಟ್ಟಿ ಮಾಡಿ ಊಟದಲ್ಲಿ ಸೇವಿಸುತ್ತಿದ್ದರೆ, ಜೀರ್ಣ ಶಕ್ತಿಯೂ ಸುಧಾರಿಸಿ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.
- ಊಟ ಮಾಡುವ ಮೊದಲು ಒಂದಿಷ್ಟು ಜೀರಿಗೆ ಕಾಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯುತ್ತಿದ್ದರೆ ಜೀರ್ಣಶಕ್ತಿ ಸುಧಾರಿಸುತ್ತದೆ.
- ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆಹಣ್ಣಿನ ರಸ ಮಿಶ್ರ ಮಾಡಿ, ದಿನವೂ ಮೂರು ಬಾರಿ ಸೇವಿಸುತ್ತಿದ್ದರೆ ಅಜೀರ್ಣವು ಕಡಿಮೆಯಾಗುತ್ತದೆ.
- ನಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಅಜೀರ್ಣದಿಂದ ಬರುವ ಹುಳಿತೇಗು ನಿವಾರಣೆಯಾಗುತ್ತದೆ.
- ಸೇಬನ್ನು ದಿನವೂ ಸೇವಿಸುವುದರಿಂದ ಜೀರ್ಣಶಕ್ತಿಯೂ ಸುಧಾರಿಸುತ್ತದೆ.
- ಅಡುಗೆಯಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯೂ ಕಾಡುವುದಿಲ್ಲ.
- ಊಟದ ಬಳಿಕ ಏಲಕ್ಕಿಯನ್ನು ಚೆನ್ನಾಗಿ ಜಗಿದು ತಿಂದರೆ ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.
- ದಿನಾಲೂ ಪುದಿನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಆಹಾರವು ಜೀರ್ಣವಾಗುತ್ತದೆ, ಅರ್ಜಿರ್ಣ ಸಮಸ್ಯೆಯು ಬರುವುದಿಲ್ಲ.
- ದಿನನಿತ್ಯ ತುಳಸಿ ರಸವನ್ನು ಸೇವಿಸುತ್ತಿದ್ದರೆ ಜೀರ್ಣ ಕ್ರಿಯೆಯು ಸರಿಯಾಗಿ ಆಗುತ್ತದೆ.
- ಅಜೀರ್ಣ ಸಮಸ್ಯೆಯು ಕಾಡಿದಾಗ ಲವಂಗದ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ.
- ಊಟದ ಬಳಿಕ ಸಿಪ್ಪೆ ತೆಗೆದ ಖರ್ಜೂರವನ್ನು ತಿಂದರೆ ಜೀರ್ಣ ಶಕ್ತಿಯು ಸುಧಾರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ