ನೀವು ನಿದ್ರೆಯಲ್ಲಿ ಮಾತನಾಡುವುದನ್ನು ನಿಮ್ಮ ರೂಮ್ ಮೇಟ್ ಅಥವಾ ನಿಮ್ಮ ಸಂಗಾತಿ ಪದೇ ಪದೇ ಹೇಳಿಕೊಂಡು ನಕ್ಕಿರಬೇಕಲ್ಲವೇ. ಅಥವಾ ನಿಮ್ಮ ಮಗುವು ರಾತ್ರಿ ಮಲಗಿದಾಗ ಮಾತನಾಡುತ್ತದೆಯೇ, ಇದೆಲ್ಲವೂ ಸಹಜವೆನಿಸಿದರೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ.
ಅನೇಕ ಜನರು ರಾತ್ರಿಯಲ್ಲಿ ಮಲಗುವಾಗ ಕಿರುಚುವ ಕಾಯಿಲೆಯನ್ನು ಹೊಂದಿರುವುದು ನಾವು ನೋಡುತ್ತೇವೆ, ಇವರು ರಾತ್ರಿಯಲ್ಲಿ ನಿದ್ರೆಯಲ್ಲಿ ಏನನ್ನಾದರೂ ಗೊಣಗಲು ಪ್ರಾರಂಭಿಸುತ್ತಾರೆ ಅಥವಾ ದಿನವಿಡೀ ಸಂಭವಿಸಿದ ಘಟನೆಗಳನ್ನು ರಾತ್ರಿ ಹೇಳುತ್ತಾರೆ.
ನಿದ್ರೆಯ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ಅಂತಹ ಸಮಯದಲ್ಲಿ ಈ ಅಸ್ವಸ್ಥತೆಯನ್ನು ಕೆಲವು ಕ್ರಮಗಳ ಮೂಲಕ ತೆಗೆದುಹಾಕಬಹುದು.
ಅನೇಕರು ಮಾತನಾಡುವ ಅಭ್ಯಾಸವನ್ನು ಹೊಂದಿದ್ದಾರೆ, ದೈನಂದಿನ ಜೀವನದಲ್ಲಿ ಮನುಷ್ಯ ತನ್ನ ಮನಸ್ಸಿನ ಮೇಲೆ ಹೆಚ್ಚಿನ ಹೊರೆಯನ್ನು ಹಾಕುವ ಮೂಲಕ, ಈ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ದೇಹಕ್ಕೆ ಹೆಚ್ಚು ವಿಶ್ರಾಂತಿ ಪಡೆಯದಿರುವುದು ನಿದ್ರೆಯಲ್ಲಿ ಮಾತನಾಡಲು ಪ್ರಮುಖ ಕಾರಣವೆಂದು ಹೇಳಬಹುದು.
ನಿದ್ರೆಯಲ್ಲಿ ಮಾತನಾಡುವುದು, ಆ ವ್ಯಕ್ತಿಯೊಬ್ಬರನ್ನು ಬಿಟ್ಟರೆ ಇನ್ಯಾರ ಮೇಲೂ ಪರಿಣಾಮವನ್ನು ಬೀರುವುದಿಲ್ಲ, ಜತೆಗೆ ಬೇರೆಯವ ನಿದ್ರೆ ಹಾಳಾಗುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಈ ಲಕ್ಷಣಗಳನ್ನು ಹೊಂದಿರುತ್ತಾರೆ. ಇದರಿಂದ ವ್ಯಕ್ತಿಯು ಮತ್ತಷ್ಟು ಒತ್ತಡ ಅನುಭವಿಸುವ ಸಾಧ್ಯತೆ ಇರುತ್ತದೆ.
ಜನರು ನಿದ್ರೆಯಲ್ಲಿ ಕೂಗಲು ಕಾರಣ ಏನು ಗೊತ್ತಾ?
ನಿದ್ರೆಯಲ್ಲಿ ತಮ್ಮೊಂದಿಗೆ ತಾವು ಮಾತನಾಡಲು ಪ್ರಾರಂಭಿಸುತ್ತಾರೆ. ಈ ರೀತಿಯ ರೋಗಲಕ್ಷಣವು ಮಕ್ಕಳು ಮತ್ತು ವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಇದನ್ನು ಪ್ಯಾರಾಸೋಮ್ನಿಯಾ ಎಂದೂ ಕರೆಯಲಾಗುತ್ತದೆ.
ರಾತ್ರಿ ಮಲಗಿದಾಗ ಕಿರುಚುವುದು ಯಾಕೆ?
ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಬದುಕಿನಲ್ಲಿ, ನಿಮಗೆ ನೀವು ಸರಿಯಾದ ಸಮಯವನ್ನು ನೀಡದಿರುವುದು, ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು 6-8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಒಂದು ಕಾರಣವಾಗಿದೆ.