Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಬಹುದು, ಇಲ್ಲಿವೆ ಟಿಪ್ಸ್​

ನೀವು ಮಾನಸಿಕವಾಗಿ ನೊಂದಿದ್ದೀರಾ?, ನಿಮ್ಮ ಮನಸ್ಸಿನ ಗೊಂದಲಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮನಸ್ಸಿಲ್ಲವೇ, ಒಳಗೊಳಗೇ ನೋವು ಅನುಭವಿಸುತ್ತಿದ್ದೀರಾ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕೀ ನಿಮ್ಮ ಬಳಿಯೇ ಇದೆ.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಬಹುದು, ಇಲ್ಲಿವೆ ಟಿಪ್ಸ್​
Mental Health
Follow us
TV9 Web
| Updated By: ನಯನಾ ರಾಜೀವ್

Updated on: Jun 27, 2022 | 9:59 AM

ನೀವು ಮಾನಸಿಕವಾಗಿ ನೊಂದಿದ್ದೀರಾ?, ನಿಮ್ಮ ಮನಸ್ಸಿನ ಗೊಂದಲಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮನಸ್ಸಿಲ್ಲವೇ, ಒಳಗೊಳಗೇ ನೋವು ಅನುಭವಿಸುತ್ತಿದ್ದೀರಾ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕೀ ನಿಮ್ಮ ಬಳಿಯೇ ಇದೆ. ಹೌದು, ಮಾನಸಿಕ ಆರೋಗ್ಯ ಎಂಬುದು ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಾಗಿದ್ದು, ಮನಸ್ಸೊಂದು ಸರಿ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸಬಲ್ಲ, ಎಷ್ಟೇ ತೊಂದರೆಗಳನ್ನು ಬೇಕಾದರೂ ಎದುರಿಸಬಲ್ಲ.

ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ವೈದ್ಯರ ಬಳಿಯೇ ಹೋಗಬೇಕೆಂದೇನಿಲ್ಲ, ಆರಂಭದಲ್ಲಿ ನೀವೇ ಸರಿಪಡಿಸಿಕೊಳ್ಳಬಹುದು.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು

ವ್ಯಾಯಾಮ ಮಾಡಿ: ನಿತ್ಯ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ಪ್ರತಿ ನಿತ್ಯವೂ ನೀವು ಮಾಡುವ ವ್ಯಾಯಾಮವು ಅಷ್ಟಷ್ಟಾಗಿ ನಿಮ್ಮ ಖಿನ್ನತೆಯನ್ನು ದೂರ ಮಾಡುತ್ತದೆ. ಮೊದಲು ಕೆಲವೇ ನಿಮಿಷಗಳಿಂದ ಶುರುಮಾಡಿ ಕ್ರಮೇಣವಾಗಿ ದೀರ್ಘಕಾಲದವರೆಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪಾರ್ಕ್​ನಲ್ಲಿ ವಾಕಿಂಗ್ ಮಾಡಿ ಅಥವಾ ಇನ್ಯಾವುದೇ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಇದನ್ನೂ ಓದಿ

ಎಂಜಾಯ್ ಮಾಡಿ

ದಿನದ 24 ಗಂಟೆಯೂ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ, ಮನಸ್ಸನ್ನು ಸ್ವಲ್ಪ ಶಾಂತವಾಗಿರಲು ಬಿಡಬೇಕು, ಮನಸ್ಸನ್ನು ಖುಷಿಪಡಿಸುವ ಕೆಲಸವನ್ನು ನೀವು ಮಾಡಬೇಕು. ಇಡೀ ದಿನ ಬಿಜಿ ಇದ್ದರೆ ಎಂಜಾಯ್ ಮಾಡುವುದು ಯಾವಾಗ?, ನಿಮಗೆ ಯಾವ ರೀತಿಯ ಚಟುವಟಿಕೆಗಳು ಇಷ್ಟ ಅದನ್ನೇ ಮಾಡಿ ಒಟ್ಟಿನಲ್ಲಿ ಕೆಲಸವನ್ನು ಬದಿಗಿರಿಸಿ ನಿಮಗಾಗಿ ನೀವು ಬದುಕಿ.

ಸಣ್ಣ ಗುರಿಗಳಿರಲಿ ನೀವು ಸುಲಭವಾಗಿ ಸಾಧಿಸಬಲ್ಲ ಸಣ್ಣ ಗುರಿಗಳನ್ನು ಹಾಕಿಕೊಳ್ಳಿ, ಅದನ್ನು ಅಚೀವ್​ ಮಾಡಲು ಏನು ಮಾಡಬೇಕು ಅದರ ಬಗ್ಗೆ ಆಲೋಚಿಸಿ, ನೀವು ಗುರಿ ಸಾಧಿಸಿ ಬಳಿಕ ಅದನ್ನು ಸೆಲೆಬ್ರೇಟ್ ಮಾಡಿ.

ಸರಿಯಾಗಿ ನಿದ್ರೆ ಮಾಡಿ ನೀವು ಎಷ್ಟು ಚೆನ್ನಾಗಿ ನಿದ್ರೆ ಮಾಡುತ್ತೀರ, ನಿಮ್ಮ ದಿನ ಅಷ್ಟು ಚೆನ್ನಾಗಿರಲಿದೆ, ಹಾಗೆಯೇ ಮಲಗಿದ ತಕ್ಷಣವೇ ನಿದ್ರೆ ಬಂದು ಬೆಳಗ್ಗೆಯವರೆಗೂ ಎಚ್ಚರವಾಗದೆ ಮಾಡುವ ನಿದ್ರೆ ದೇಹಕ್ಕೆ ಹಿತವೆನಿಸುತ್ತದೆ. ಮಲಗುವುದೇ ತಡ, ಅದರಲ್ಲೂ ಮಧ್ಯ ಹತ್ತಾರು ಬಾರಿ ಎಚ್ಚರವಾದರೆ ಅದು ಒಳ್ಳೆಯ ನಿದ್ರೆ ಆಗಿರುವುದಿಲ್ಲ. ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಲು ನಿದ್ರೆ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಹಾರ ಸೇವನೆ ಮಾನಸಿಕ ಆರೋಗ್ಯ ಎನ್ನುವ ಮಾತು ಬಂದರೆ ಮೊದಲು ಕಣ್ಣೆದುರು ಬರುವುದೇ ನಿದ್ರೆ, ನಿಮ್ಮ ಮನಸ್ಥಿತಿ ಹಾಗೂ ಹಸಿವು, ಇವುಗಳ ಬಗ್ಗೆ ಹೆಚ್ಚು ಗಮನವಹಿಸದರೆ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸಲಿದೆ. ನಿಮ್ಮ ಆಹಾರ ಪದ್ಧತಿ ಉತ್ತಮವಾಗಿರಬೇಕು, ಸಮತೋಲಿತ ಡಯೆಟ್ ಇರಬೇಕು, ಫ್ಯಾಟಿ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು, ಸದಾ ದೇಹವನ್ನು ಹೈಡ್ರೇಟ್​ ಆಗಿರಿಸಬೇಕು.

ವಿಶ್ರಾಂತಿ ಪಡೆಯಿರಿ ನಿಮ್ಮ ಕೆಲಸವನ್ನು ಕೆಲವು ನಿಮಿಷಗಳ ಕಾಲ ಬದಿಗಿಟ್ಟು ಸ್ವಲ್ಪ ವಿಶ್ರಾಂತಿ ಪಡೆಯಿರಿ, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ, ಬೇಡದ ಯೋಚನೆ ಮಾಡಬೇಡಿ. ಪ್ರಾಣಾಯಾಮ ಮಾಡಿ, ಧ್ಯಾನ ಮಾಡಿ ಮನಸ್ಸನ್ನು ಆಹ್ಲಾದಕರವಾಗಿಟ್ಟುಕೊಳ್ಳಿ.

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ