Sunflower Seeds: ಕೊಬ್ಬು ಕರಗಿಸುವ ಶಕ್ತಿ ಇರುವ ಸೂರ್ಯಕಾಂತಿ ಬೀಜದ ಇತರೆ ಪ್ರಯೋಜನಗಳ ಬಗ್ಗೆ ತಿಳಿಯಿರಿ
ನಿತ್ಯ ನೀವು ಸೇವಿಸುವ ಆಹಾರದಲ್ಲಿ ಸೂರ್ಯಕಾಂತಿಯನ್ನು ಬಳಕೆ ಮಾಡಿದರೆ, ನೀವು ತೂಕ ಕಡಿಮೆ ಮಾಡಿಕೊಳ್ಳುವುದರ ಜತೆಗೆ ಅನೇಕ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು.
ನಿತ್ಯ ನೀವು ಸೇವಿಸುವ ಆಹಾರದಲ್ಲಿ ಸೂರ್ಯಕಾಂತಿಯನ್ನು ಬಳಕೆ ಮಾಡಿದರೆ, ನೀವು ತೂಕ ಕಡಿಮೆ ಮಾಡಿಕೊಳ್ಳುವುದರ ಜತೆಗೆ ಅನೇಕ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು. ಸೂರ್ಯಕಾಂತಿ ಬೀಜದಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ಫೈಬರ್ ಮತ್ತು ಜೀವಸತ್ವಗಳು ಮತ್ತು ಖನಿಜಗಳಿವೆ. ಕೊಬ್ಬಿನಾಂಶ ಹೆಚ್ಚಿರುವಾಗ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ನೀವು ಈಗ ಯೋಚಿಸುತ್ತಿರಬೇಕು, ಆದರೆ ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಕೊಬ್ಬನ್ನು ಅದು ಒಳಗೊಂಡಿದೆ .
ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ನಿಮ್ಮ ರಕ್ತದಲ್ಲಿನ LDL (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ನಿಮ್ಮ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಆರೋಗ್ಯಕರ ಕೊಬ್ಬಾಗಿ ಬದಲಾಯಿಸಬೇಕು. ಈ ಸೂರ್ಯಕಾಂತಿ ಬೀಜದಲ್ಲಿ ಆ ಉತ್ತಮ ಕೊಬ್ಬು ಅಡಗಿದೆ.
ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದೆ ಹೀಗಾಗಿ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ.
ಒಂದು ಸೂರ್ಯಕಾಂತಿ ಹೂವಿನಲ್ಲಿ 2000 ಬೀಜಗಳಿರುತ್ತವೆ ಒಂದು ಸೂರ್ಯಕಾಂತಿ ಹೂವಿನಲ್ಲಿ 2 ಸಾವಿರ ಬೀಜಗಳಿರುತ್ತವೆ, ಇದಲ್ಲದೆ ಎರಡು ವಿಧದ ತಳಿಗಳನ್ನು ಬೆಳೆಯಲಾಗುತ್ತದೆ, ಒಂದು ಬೀಜಗಳನ್ನು ತಿನ್ನಲಾಗುತ್ತದೆ ಮತ್ತು ಇನ್ನೊಂದರಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ತುಂಬುವ ಸತ್ವಗಳನ್ನು ಒಳಗೊಂಡಿದೆ. ಈ ಮೂರು ಅಂಶಗಳು ಈ ಬೀಜದಲ್ಲಿ ಸಮೃದ್ಧವಾಗಿರುವ ಕಾರಣ, ಇದು ಆರೋಗ್ಯಕ್ಕೆ ಉತ್ತಮ.
ಅಲರ್ಜಿಯಿಂದ ನಿಮ್ಮನ್ನು ರಕ್ಷಿಸುತ್ತದೆ ಸೂರ್ಯಕಾಂತಿ ಬೀಜಗಳು ವಿಟಮಿನ್-ಇ, ಸತು ಮತ್ತು ಸೆಲೆನಿಯಮ್ ಇರುವಿಕೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಟಮಿನ್-ಇ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ. ನಮ್ಮ ದೇಹದಲ್ಲಿನ ಆರೋಗ್ಯಕರ ಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಸತು ಮತ್ತು ಸೆಲೆನಿಯಮ್ ನಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಅಲರ್ಜಿಯಿಂದ ರಕ್ಷಿಸುತ್ತದೆ.
ಸ್ನಾಯುಗಳಿಗೆ ಉತ್ತಮ ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಬಿ 1 ಇರಲಿದೆ. ಇದು ನಮ್ಮ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬನ್ನು ಶಕ್ತಿಯನ್ನಾಗಿ ವಿಭಜಿಸಲು ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಬಲ ನೀಡುತ್ತದೆ. ಸೂರ್ಯಕಾಂತಿ ಬೀಜಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆದರೆ ಒಂದು ಅಂಶವನ್ನು ನೆನಪಿನಲ್ಲಿಡಿ, ಅವುಗಳಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ನಿತ್ಯ ಕಾಲು ಕಪ್ ತಿನ್ನುವುದು ನಿಮಗೆ ಪ್ರಯೋಜನಕಾರಿಯಾಗಿದೆ.
-ನೀವು ಸೂರ್ಯಕಾಂತಿ ಬೀಜವನ್ನು ಸಲಾಡ್‌ಗಳ ಜತೆ ಸೇವಿಸಬಹುದು -ಓಟ್ಸ್ ಜತೆ ತಿನ್ನಿರಿ -ತರಕಾರಿಗಳೊಂದಿಗೆ ಸೇವಿಸಬಹುದು