Women Health: 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತೂಕ ಕಡಿಮೆ ಮಾಡಲು ಹೀಗೆ ಮಾಡಿ
ಸಾಮಾನ್ಯವಾಗಿ ಹದಿಹರೆಯದವರು ತೂಕವನ್ನು ಕಳೆದುಕೊಳ್ಳಲು ಹಲವು ಕಸರತ್ತುಗಳನ್ನು ಮಾಡುತ್ತಾರೆ. ನಿತ್ಯ ಯೋಗ, ವ್ಯಾಯಾಮ, ಧ್ಯಾನದ ಜತೆಗೆ ಆಹಾರದ ಮೇಲೂ ಕಡಿವಾಣಹಾಕುತ್ತಾರೆ.
ಸಾಮಾನ್ಯವಾಗಿ ಹದಿಹರೆಯದವರು ತೂಕವನ್ನು ಕಳೆದುಕೊಳ್ಳಲು ಹಲವು ಕಸರತ್ತುಗಳನ್ನು ಮಾಡುತ್ತಾರೆ. ನಿತ್ಯ ಯೋಗ, ವ್ಯಾಯಾಮ, ಧ್ಯಾನದ ಜತೆಗೆ ಆಹಾರದ ಮೇಲೂ ಕಡಿವಾಣಹಾಕುತ್ತಾರೆ. ಆದರೆ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ತೂಕವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ, ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ ಋತುಬಂಧ ಸೇರಿದಂತೆ ಹಲವು ಹಾರ್ಮೋನ್ಗಳ ಅಸಮತೋಲನ ಉಂಟಾಗುತ್ತದೆ.
ಹೌದು, ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ತೂಕವನ್ನು ಹೆಚ್ಚಿಸುವುದು ಸುಲಭ ಮತ್ತು ಅದನ್ನು ಕಳೆದುಕೊಳ್ಳುವುದು ಮೊದಲಿಗಿಂತ ಕಷ್ಟ ಎಂಬುದು ನಿಮಗೆ ತಿಳಿದಿದೆ. ನಿಮ್ಮ ಚಟುವಟಿಕೆಯ ಮಟ್ಟ, ಆಹಾರ ಪದ್ಧತಿ ಮತ್ತು ಹಾರ್ಮೋನುಗಳ ಬದಲಾವಣೆಗಳು ಮತ್ತು ನಿಮ್ಮ ದೇಹವು ಕೊಬ್ಬನ್ನು ಹೇಗೆ ಸಂಗ್ರಹಿಸುತ್ತದೆ ಎಂಬುದನ್ನು ಗಮನಿಸಬೇಕು.
ಆದರೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ವ್ಯಾಯಾಮದ ಜೊತೆಗೆ ನಿಮ್ಮ ಆಹಾರದಲ್ಲಿ ಜೀರಿಗೆಯನ್ನು ಸೇರಿಸುವುದರಿಂದ ನೀವು ಸುಲಭವಾಗಿ ಸ್ಲಿಮ್ ಆಗಬಹುದು.
ಕೇವಲ ನೀರಿನ ರೂಪದಲ್ಲಿ ಸೇವಿಸಿದಾಗ ಮಾತ್ರ ಪ್ರಯೋಜನಕಾರಿ ಎಂಬುದು ಸುಳ್ಳು ಜೀರಿಗೆ ಪ್ರಪಂಚದಾದ್ಯಂತ ಬಳಸುವ ಅತ್ಯಂತ ಜನಪ್ರಿಯ ಮಸಾಲೆಯಾಗಿದೆ. ಆದರೆ ಇತ್ತೀಚೆಗೆ, ಸಾಮಾಜಿಕ ಮಾಧ್ಯಮವು ಈ ಅದ್ಭುತವಾದ ಮಸಾಲೆಯನ್ನು ಡಿಟಾಕ್ಸ್ ನೀರು ಅಥವಾ ಡಿಕಾಕ್ಷನ್ ರೂಪದಲ್ಲಿ ಸೇವಿಸಿದಾಗ ಮಾತ್ರ ಪ್ರಯೋಜನಕಾರಿ ಎಂದು ಪರಿಗಣಿಸಿದೆ.
ಕಾಲಾನಂತರದಲ್ಲಿ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಜೊತೆಗೆ ಜೀರಿಗೆಯ ಸೇವಿಸುವುದರಿಂದ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಮತ್ತು ನಿಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಉಬ್ಬಸ ಕಡಿಮೆಯಾಗುತ್ತದೆ
ಕೆಲಸ ಮಾಡುವಾಗ ಜೀರಿಗೆಯನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬಸ, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲಿದೆ.
ಜೀರಿಗೆಯನ್ನು ನೀರಿನಲ್ಲಿ ನೆನೆಸಿ ಸೇವಿಸಬೇಡಿ ಸಾಕಷ್ಟು ಮಂದಿ ಮಹಿಳೆಯರು ಜೀರಿಗೆಯನ್ನು ನೀರಿನಲ್ಲಿ ನೆನೆಸಿ ಬಳಿಕ ಸೇವಿಸುತ್ತಾರೆ. ಆದರೆ ಇದು ಸಂಪೂರ್ಣ ತಪ್ಪು, ಗರಿಷ್ಠ ಬಳಕೆಗಾಗಿ ನಿಮ್ಮ ಊಟ ಮತ್ತು ಮಜ್ಜಿಗೆ, ನಿಂಬೆ ಪಾನಕ, ಮಾಕ್‌ಟೇಲ್‌ಗಳಂತಹ ಪಾನೀಯಗಳಿಗೆ ಸೇರಿಸಿ.
ಮಸಾಲೆ ಪದಾರ್ಥಗಳ ಸೇವನೆಯಿಂದ ತೊಂದರೆ ಭಾರತೀಯರು ಈಗಾಗಲೇ ನಮ್ಮ ಆಹಾರದಲ್ಲಿ ಸಾಕಷ್ಟು ಮಸಾಲೆಗಳನ್ನು ಸೇವಿಸುತ್ತೇವೆ. ಆದ್ದರಿಂದ ಈ ಮಸಾಲೆಗಳ ನೀರನ್ನು ಸೇವಿಸುವುದರಿಂದ ದೀರ್ಘಾವಧಿಯಲ್ಲಿ ವಿಷತ್ವಕ್ಕೆ ಕಾರಣವಾಗಬಹುದು.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ , ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.