AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ash gouard -Superstition: ಬೂದು ಕುಂಬಳಕಾಯಿ -ಇದನ್ನು ಮೂಢನಂಬಿಕೆಗೇ ಸೀಮಿತಗೊಳಿಸಬೇಡಿ; ಧಾರಾಳವಾಗಿ ಬಳಸಿ, ಆರೋಗ್ಯ ಸುಧಾರಿಸುತ್ತದೆ!

ಇಂತಹ ಅತ್ಯುತ್ತಮ ಔಷದೀಯ ಗುಣಗಳಿರುವ ಕುಂಬಳಕಾಯಿಯನ್ನು ದಯವಿಟ್ಟು ಸುಮ್ಮನೆ ಬೇರೆ ಬೇರೆ ಕಾರಣಕ್ಕೆ ಉಪಯೋಗಿಸಿ ರಸ್ತೆಯಲ್ಲಿ ಬಿಸಾಡಬೇಡಿ.

Ash gouard -Superstition: ಬೂದು ಕುಂಬಳಕಾಯಿ -ಇದನ್ನು ಮೂಢನಂಬಿಕೆಗೇ ಸೀಮಿತಗೊಳಿಸಬೇಡಿ; ಧಾರಾಳವಾಗಿ ಬಳಸಿ, ಆರೋಗ್ಯ ಸುಧಾರಿಸುತ್ತದೆ!
ಬೂದು ಕುಂಬಳಕಾಯಿ: ಇದನ್ನು ಮೂಢನಂಬಿಕೆಗೇ ಸೀಮಿತಗೊಳಿಸಬೇಡಿ; ಧಾರಾಳವಾಗಿ ಬಳಸಿ, ಆರೋಗ್ಯ ಸುಧಾರಿಸುತ್ತದೆ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 02, 2022 | 6:06 AM

Share

ಉತ್ತಮವಾದ ಪೌಷ್ಟಿಕ ಅಂಶಗಳಿದ್ದರೂ ನಾವು ಬಹಳವಾಗಿ ನಿರ್ಲಕ್ಷಿಸಿರುವ, ಮಾಟ, ಮಂತ್ರ, ದೃಷ್ಟಿ ತಗೆಯುವಿಕೆ ಮುಂತಾದ ಮೂಢನಂಬಿಕೆಗೆ ಇದನ್ನು ಹೆಚ್ಚಾಗಿ ಸೀಮಿತಗೊಳಿಸಿರುವ ತರಕಾರಿಯೇ ಈ ಬೂದು ಕುಂಬಳಕಾಯಿ. Benincasa hispida ಇದರ ಸಸ್ಯ ಶಾಸ್ತ್ರೀಯ ಹೆಸರು. Cucurbitaceae ಕುಟುಂಬ. ಸಾಮಾನ್ಯವಾಗಿ ವರ್ಷವಿಡೀ ಕಾಯಿ ಬಿಡುವ, ಹೆಚ್ಚಿನ ಯಾವ ಆರೈಕೆಯನ್ನೂ ಕೇಳದ ಬಳ್ಳಿ ಸಸ್ಯ (Ash gourd  and superstition).

ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಹಲವಾರು ತಿಂಗಳುಗಳ ಕಾಲ ಕೆಡದೆ ಉಳಿಯುವಂತಹ ತರಕಾರಿ ಎಂದರೆ ಈ ಬೂದು ಕುಂಬಳಕಾಯಿ! ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಸಾಂಬಾರು, ಗೊಜ್ಜು, ಕುಂಬಳಕಾಯಿ ಹುಳಿ ಇತ್ಯಾದಿ ಬಗೆಬಗೆಯ ಖಾದ್ಯಗಳಾಗಿ ಕುಂಬಳಕಾಯಿಯನ್ನು ಸೇವಿಸಬಹುದು. ಇದರಿಂದ ತಯಾರಿಸುವ ಹಲ್ವ ಬಹಳ ರುಚಿಯಾಗಿರುತ್ತದೆ (health benefits).

ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ. ಬೂದು ಕುಂಬಳಕಾಯಿಯಲ್ಲಿ ಬಹಳಷ್ಟು ಔಷಧೀಯ ಸತ್ವಗಳಿವೆ. ಕಾರ್ಬೋಹೈಡ್ರೇಟ್‌, ಫೈಬರ್‌ (diatery fiber) , ಪ್ರೋಟೀನ್‌, ವಿಟಮಿನ್‌ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನೇಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ‌ಅಂಶಗಳನ್ನು, 0 % ಕೊಬ್ಬು ಹೊಂದಿರುವ ಕುಂಬಳಕಾಯಿಯನ್ನುಇಷ್ಟ ಪಡದವರೂ ಕೂಡ ಅದರೊಳಗಿರುವ ಆರೋಗ್ಯಕರ ಅಂಶಗಳಿಗಾದರೂ ಸೇವಿಸಲೇಬೇಕು.

ಇದರ ಸೇವನೆಯು ಶೀತಕಾರಕ ಮತ್ತು ಮೂತ್ರಕೋಶದ ಹಾಗೂ ಜೀರ್ಣಾಂಗದ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ. ಬೂದು ಕುಂಬಳಕಾಯಿಯಲ್ಲಿ ದೇಹದ ಶಕ್ತಿವರ್ಧನೆಯ ಗುಣಗಳೂ ಇವೆ.

ಉರಿಮೂತ್ರ, ಮೂತ್ರ ಕೋಶದ ಕಲ್ಲು (kidney stones), ಅಸಿಡಿಟಿ, ಹುಳಿತೇಗು, ಹೊಟ್ಟೆಯ ಅಲ್ಸರ್‌ ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನುಇದು ಹೊಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಬೂದು ಕುಂಬಳಕಾಯಿಯ ಎಲೆ, ಹೂ, ಕಾಯಿಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತದೆ.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬೂದುಕುಂಬಳಕ್ಕೆ ಹೆಚ್ಚಿನ ಆದ್ಯತೆ ಇದೆ. ಇದರ ಬೀಜಗಳಲ್ಲಿ ಜಂತು ನಾಶಕ ಗುಣಗಳಿವೆ. ಬಲಿತ ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು. ಇದರಲ್ಲೂ ಸಹ ಪ್ರೊಟೀನ್‌,  zinc, Magnesium, Phosphorus ಅಂಶಗಳಿವೆ. ಇದರ ಸಿಪ್ಪೆ ಮತ್ತು ಬೀಜಗಳನ್ನು ತೆಗೆದುಹಾಕಿ, ಮೃದುವಾದ ಕಾಯಿಯಿಂದ ತೆಗೆದ ರಸವನ್ನು ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರಸ ರಕ್ತನಾಳ ಮತ್ತು ನರದೌರ್ಬಲ್ಯಗಳನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಫೈಬರ್‌ ಅಂಶಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ.

ಖಾಲಿ ಹೊಟ್ಟೆಗೆ ಇದರ ರಸ ಸೇವನೆ ಯಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ. ಬೂದು ಕುಂಬಳಕಾಯಿಯಲ್ಲಿ ನೀರಿನ ಅಂಶ ಹೆಚ್ಚು. ಇದರಿಂದ ಮೂತ್ರವಿಸರ್ಜನೆಯನ್ನು ಹೆಚ್ಚಿಸಿ ಮೂತ್ರಕೋಶವನ್ನು ಶುದ್ಧಿಗೊಳಿಸುತ್ತದೆ. ಕಲ್ಲು ಕರಗಿ ಹೊರಹೋಗುವುದು. ಅಲ್ಲದೆ ದೇಹದ ತೂಕ ಕಡಿಮೆ ಮಾಡಲು ಸಹಾಯಕ. ಬೊಜ್ಜು ಕರಗಿಸುತ್ತೆ.

ದೇಹದ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಕುಂಬಳ ಬಲು ಉಪಯೋಗಿ, ಅಲ್ಲದೆ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಹೃದಯ ಸಂಬಂಧಿ ತೊಂದರೆಗಳು ಬಾರದಂತೆ ತಡೆಯುತ್ತದೆ. ಇದರಲ್ಲಿರುವ Anti Oxidant ಗಳು ಕ್ಯಾನ್ಸರ್ ತಡೆಯುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ಬೂದುಕುಂಬಳ ಕಾಯಿಯ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತೆ. ಸಿಪ್ಪೆ ಮತ್ತು ಬೀಜಗಳನ್ನು ತೆಗೆದು, ರುಬ್ಬಿ ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆದುಕೊಂಡರೂ ಸಹ ಒಣ ಮತ್ತು ಒರಟು ತಲೆಕೂದಲಿಗೆ ಮೃದುತ್ವ ನೀಡುತ್ತದೆ. ಇದರ ತಿರುಳಿನಿಂದ ಆಯುರ್ವೇದ ಲೇಹ ಮತ್ತು ತೈಲವನ್ನು ತಯಾರಿಸುತ್ತಾರೆ.

ಎಲೆಗಳನ್ನು ಚೆನ್ನಾಗಿ ರುಬ್ಬಿ ಹಚ್ಚಿಕೊಂಡಲ್ಲಿ ಹಲವಾರು ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ. ಈ ಬೂದ ಕುಂಬಳಕಾಯಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ Arthritis ಹಾಗೂ ಥೈರಾಯ್ಡ್ ತೊಂದರೆ ನಿವಾರಣೆಯಾಗುತ್ತೆ.

ಇಂತಹ ಅತ್ಯುತ್ತಮ ಔಷದೀಯ ಗುಣಗಳಿರುವ ಕುಂಬಳಕಾಯಿಯನ್ನು ದಯವಿಟ್ಟು ಸುಮ್ಮನೆ ಬೇರೆ ಬೇರೆ ಕಾರಣಕ್ಕೆ ಉಪಯೋಗಿಸಿ ರಸ್ತೆಯಲ್ಲಿ ಬಿಸಾಡಬೇಡಿ.

ಎಳೆಯದಾದ ಕಾಯಿ ಮಾತ್ರ ಅತೀ ಸಣ್ಣದಾದ ಕೈಗೆ ಆಂಟಿಕೊಳ್ಳುವ ಕೂದಲುಗಳ ಸಹಿತ ಹಸಿರಾಗಿರುತ್ತೆ. ಆದರೆ ಬಲಿತ ಕಾಯಿಗಳು ಬೂದು ಬಣ್ಣದ್ದಾಗಿದ್ದು ಮೇಲ್ಭಾಗದಲ್ಲಿ ಒಂದು ಅಂಟಿನ ಪದರ ಇರುತ್ತೆ (ಅದಕ್ಕಾಗಿ wax gourd ಎಂಬ ಹೆಸರೂ ಇದೆ). ಅಡುಗೆಗೆ, ಔಷದಕ್ಕೆ ಯಾವಾಗಲೂ ಬಲಿತ ಕಾಯಿ ಉಪಯೋಗಿಸಬೇಕು. ಲೇಖನ -ಮಂಜುನಾಥ್ ಪ್ರಸಾದ್

ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್