Autistic Pride Day 2023: ಆಟಿಸ್ಟಿಕ್ ಪ್ರೈಡ್ ಡೇ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಸ್ವಲೀನತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಟಿಸ್ಟಿಕ್ ಪ್ರೈಡ್ ಡೇಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Autistic Pride Day 2023: ಆಟಿಸ್ಟಿಕ್ ಪ್ರೈಡ್ ಡೇ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2023 | 6:36 PM

ಸ್ವಲೀನತೆ (ಆಟಿಸಂ) ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಮಿದುಳಿನಲ್ಲಿನ ಸಾಮಾನ್ಯ ಬೆಳವಣಿಗೆಯನ್ನು ಕಡಿಮೆ ಮಾಡಿ ವ್ಯಕ್ತಿಯ ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಹಾಗೂ ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಸಾವಿರ ಜನರಲ್ಲಿ ಒಬ್ಬರೊ ಇಬ್ಬರಿಗೆ ಈ ಕಾಯಿಲೆ ಕಂಡು ಬರುತ್ತದೆ. ಆಟಿಸಂನಲ್ಲಿ ಒಂದೇ ರೀತಿಯ ಲಕ್ಷಣವಿರುವುದಿಲ್ಲ. ಇದೆಲ್ಲದರ ಬಗ್ಗೆ ಜನರಿಗೆ ತಿಳಿಸಲು ಪ್ರತಿ ವರ್ಷ ಜಗತ್ತಿನಾದ್ಯಂತದ ಜೂನ್ 18 ರಂದು ಆಟಿಸ್ಟಿಕ್ ಪ್ರೈಡ್ ದಿನವನ್ನು ಆಚರಿಸಲಾಗುತ್ತದೆ. ಸ್ವಲೀನತೆಯಿಲ್ಲದವರಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ವಲೀನತೆ ಇರುವ ಜನರೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಮತ್ತು ಅವರನ್ನು ಆರೈಕೆ ಮಾಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಲವು ಕಡೆಗಳಲ್ಲಿ ಈ ದಿನದಂದು ದತ್ತಿಗಳಿಂದ ಆಯೋಜಿಸುವ ಬದಲು, ಆಟಿಸ್ಟಿಕ್ ಹೆಮ್ಮೆಯ ದಿನದ ವಾರ್ಷಿಕ ಘಟನೆಯನ್ನು ಸ್ವಲೀನತೆಯ ಅಸ್ವಸ್ಥತೆಯ ಜನರು ನಿರ್ವಹಿಸುತ್ತಾರೆ.

ಆಟಿಸ್ಟಿಕ್ ಪ್ರೈಡ್ ದಿನದ ಇತಿಹಾಸ:

ವರದಿಗಳ ಪ್ರಕಾರ, ಮೊದಲ ಆಟಿಸ್ಟಿಕ್ ಪ್ರೈಡ್ ದಿನ 2005ರಲ್ಲಿ ಬ್ರೆಜಿಲ್​​​ನಲ್ಲಿ ನಡೆಯಿತು. ಗರೆಥ್ ಮತ್ತು ಆಮಿ ನೆಲ್ಸನ್ ಎಂಬುವವರು ವಿವಿಧ ದಾಖಲೆಗಳ ಪ್ರಕಾರ, ಈ ದಿನವನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಲಾಗುತ್ತದೆ. ಸ್ವಲೀನತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜನರಲ್ಲಿ ಹೋಲಿಕೆ, ವ್ಯತ್ಯಾಸಗಳನ್ನು ಎತ್ತಿ ಹಿಡಿಯಲು 2005 ರಲ್ಲಿ ಆಸ್ಪಿಸ್ ಫಾರ್ ಫ್ರೀಡಮ್ ಎಂಬ ಬ್ರೆಜಿಲಿಯನ್ ಸಂಘಟನೆಯಿಂದ ಈ ದಿನವನ್ನು ರಚಿಸಲಾಗಿದೆ. ಇದು ಪ್ರಪಂಚದಾದ್ಯಂತ ಪ್ರಸ್ತುತತೆಯನ್ನು ಪಡೆಯಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ಜಾಗತಿಕ ಕಾರ್ಯಕ್ರಮವಾಯಿತು.

ಇದನ್ನೂ ಓದಿ: World Day To Combat Desertification and Drought 2023: ಅವಳ ಭೂಮಿ ಅವಳ ಹಕ್ಕು! ಈ ಬಗ್ಗೆ ನಿಮಗೆಷ್ಟು ಗೊತ್ತು?

ಆಟಿಸ್ಟಿಕ್ ಪ್ರೈಡ್ ದಿನದ ಮಹತ್ವ:

ಸ್ವಲೀನತೆ ಹೊಂದಿರುವ ಜನರ ಮೇಲೆ ಪರಿಣಾಮ ಬೀರುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ಬಹಳ ಮಹತ್ವದ ದಿನವಾಗಿದೆ. ಸ್ವಲೀನತೆಯ ಜನರು ಅಂಗವಿಕಲರಲ್ಲ ಆದರೆ ಅವರು ವಿಶೇಷರು ಎಂದು ಸಾಮಾನ್ಯ ಜನರಿಗೆ ತೋರಿಸಿ ಕೊಡುವುದರ ಜೊತೆಗೆ ಗೌರವ ಮತ್ತು ಸಹಾನುಭೂತಿ ನೀಡಬೇಕು ಎನ್ನುವುದು ಈ ದಿನದ ಉದ್ದೇಶ. ನೀವು ಅರ್ಥ ಮಾಡಿಕೊಳ್ಳಬೇಕಾದದ್ದು ಇಷ್ಟೆ. ನಮಗೆ ಸಾಮಾನ್ಯವಾದದ್ದು ಇತರರಿಗೆ ಸಾಮಾನ್ಯವಲ್ಲ. ‘ನಾರ್ಮಲ್ಸಿ’ ನ ಕಲ್ಪನೆಯು ಬಹಳ ವ್ಯಕ್ತಿ ನಿಷ್ಠವಾಗಿದೆ, ಆದ್ದರಿಂದ ನಿಮ್ಮ ಸಾಮಾನ್ಯ ಆಲೋಚನೆಯಿಂದ ನಿಮ್ಮ ಸ್ವಲೀನತೆಯ ಸ್ನೇಹಿತನನ್ನು ನಿರ್ಣಯಿಸಬೇಡಿ. ಅವನು / ಅವಳು ನೀವು ಎಷ್ಟು ಸಾಮಾನ್ಯರು ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು ನಿಮ್ಮ ಸ್ವಂತ ಪೂರ್ವಭಾವಿ ಕಲ್ಪನೆಗಳನ್ನು ನಿವಾರಿಸಿ ಮತ್ತು ಕುತೂಹಲ, ಪ್ರೀತಿ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ಸ್ವಲೀನತೆಯ ವ್ಯಕ್ತಿಯನ್ನು ಭೇಟಿ ಮಾಡಿ, ಪ್ರತಿಯಾಗಿ ನೀವು ತುಂಬಾ ಪ್ರಾಮಾಣಿಕ ಮತ್ತು ಪ್ರೀತಿಯ ಸ್ನೇಹಿತನನ್ನು ಕಾಣುತ್ತೀರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?