Weight Loss: ಆರೋಗ್ಯಕರ ತೂಕ ನಷ್ಟಕ್ಕೆ ತಜ್ಞರ ಸಲಹೆಗಳೇನು? ಇಲ್ಲಿದೆ ಮಾಹಿತಿ

ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೆ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕೆಲವು ವಿಷಯಗಳು ನಿಮ್ಮ ಆರೋಗ್ಯಕರ ತೂಕ ಇಳಿಕೆಗೆ ಸಹಾಯ ಮಾಡುತ್ತವೆ.

Weight Loss: ಆರೋಗ್ಯಕರ ತೂಕ ನಷ್ಟಕ್ಕೆ ತಜ್ಞರ ಸಲಹೆಗಳೇನು? ಇಲ್ಲಿದೆ ಮಾಹಿತಿ
ತೂಕ ಇಳಿಕೆ
Follow us
TV9 Web
| Updated By: shruti hegde

Updated on: Nov 26, 2021 | 8:21 AM

ಹೆಚ್ಚುವರಿ ತೂಕದಿಂದ ಫಿಟ್ ಆಗಿಲ್ಲ ಎಂಬುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ. ಹೀಗಿರುವಾಗ ಒಂದಲ್ಲಾ ಒಂದು ರೀತಿಯಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಹೀಗಿರುವಾಗ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ನೀವು ದೇಹದ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಜೀವಶೈಲಿಯಲ್ಲಿ ಅಳವಡಿಕೊಳ್ಳಬೇಕಾದ ಈ ಕೆಲವು ವಿಷಯಗಳ ಬಗ್ಗೆ ಗಮನವಹಿಸಬೇಕು. ತಜ್ಞರು ಸೂಚಿಸಿರುವ ಕೆಲವು ವಿಷಯಗಳು ಈ ಕೆಳಗಿನಂತಿವೆ;

ಬೆಲ್ಲ- ಸಕ್ಕರೆ ಸಕ್ಕರೆಯು ಕೇವಲ ಖಾಲಿ ಕ್ಯಾಲೊರಿಗಳಿಂದ ತುಂಬಿದ್ದರೆ, ಬೆಲ್ಲ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ.

ಬೆಚ್ಚಗಿನ ನೀರು- ತಣ್ಣೀರು ಬೆಚ್ಚಗಿನ ನೀರು ಕುಡಿಯುವುದು ನಿಮ್ಮ ಹೆಚ್ಚುವರಿ ಕ್ಯಾಲೊರಿ ಸುಡಲು ಸಹಾಯಕವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಜೊತೆಗೆ ಚಯಾಪಚಯವನ್ನು ಸುಧಾರಿಸುತ್ತದೆ.

ನಡೆಯುವ ಅಭ್ಯಾಸ ದಿನವಿಡಿ ಸಕ್ರಿಯರಾಗಿರುವುದು ನಿಮ್ಮ ದೇಹವು ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ ನಡೆಯುವ ಅಭ್ಯಾಸ ಮಾಡಿ.

ಹಣ್ಣು ಮತ್ತು ಹಣ್ಣಿನ ರಸ ಹಣ್ಣಿನ ರಸ ಸೇವನೆಯಿಂದ ನೀವು ಫೈಬರ್ ಅಂಶವನ್ನು ಹೆಚ್ಚು ಪಡೆಯುವುದಿಲ್ಲ. ಅದು ದ್ರವವಾಗಿರುವುದರಿಂದ ನೇರವಾಗಿ ಹೊಟ್ಟೆಯನ್ನು ತಲುಪುತ್ತದೆ. ಆದರೆ ಹಣ್ಣುಗಳನ್ನು ನೀವು ಜಗಿಯುವುದರಿಂದ ಫೈಬರ್ ಅಂಶ ಸಿಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೆ ಸಹಾಯವಾಗುತ್ತದೆ.

ಊಟ ಮಾಡುವುದು – ಊಟ ಬಿಡುವುದು ಮಧ್ಯಾಹ್ನ 10ರ ನಂತರ ಮತ್ತು 2 ಗಂಟೆಯ ಒಳಗೆ ಎಂದಿಗೂ ಊಟವನ್ನು ಬಿಡಬೇಡಿ. ಆ ಸಮಯದಲ್ಲಿ ಚಯಾಪಚಯವು ಉತ್ತಮವಾಗಿರುವುದರಿಂದ ನಿಮ್ಮ ಆರೋಗ್ಯ ಸುಧಾರಣೆಗೆ ಮತ್ತು ಪೌಷ್ಟಿಕಾಂಶಗಳನ್ನು ಪಡೆಯಲು ಸಹಾಯಕ.

ಬೇಗನೆ ಊಟ – ತಡವಾದ ಊಟ ಸೂರ್ಯಾಸ್ತದ ನಂತರ ಚಯಾಪಚಯವು ಕಡಿಮೆಯಾಗುತ್ತದೆ. ಹಾಗಾಗಿ ಊಟವನ್ನು ಬೇಗ ಮಾಡಬೇಕು. (ರಾತ್ರಿ 8 ಗಂಟೆಯ ಮೊದಲು)

ಹೆಚ್ಚಿನ ನಿದ್ರೆ- ಕಡಿಮೆ ನಿದ್ರೆ ಉತ್ತಮ ನಿದ್ರೆಯನ್ನು ನಿರ್ಲಕ್ಷಿಸುವುದರಿಂದ ತೂಕ ನಷ್ಟ ವಿಳಂಬವಾಗುತ್ತದೆ. ತೂಕ ನಷ್ಟದಲ್ಲಿ ತ್ವರಿತ ಫಲಿತಾಂಶವನ್ನು ನೋಡಬೇಕು ನೀವು ಬಯಸುವುದಾದರೆ ರಾತ್ರಿ 10 ಗಂಟೆಗೆ ಮೊದಲು ಮಲಗುವ ಅಭ್ಯಾಸ ಮಾಡಿ.

ದೈನಂದಿನ ವ್ಯಾಯಾಮ ಮಾಡುವುದು ಸರಿಯಾದ ನಿದ್ರೆ, ಒತ್ತಡವನ್ನು ನಿರ್ವಹಿಸುವುದು ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ತೂಕ ನಷ್ಟದಲ್ಲಿ ವ್ಯಾಯಾಮವು ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ವ್ಯಾಯಾಮದಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು; ಯೋಗ, ನಡಿಗೆ, ಸೈಕ್ಲಿಂಗ್, ಜಿಮ್, ಸ್ವಿಮ್ಮಿಂಗ್ ಇತ್ಯಾದಿ.

ಇದನ್ನೂ ಓದಿ:

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

Child Health: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ನಿರ್ಲಕ್ಷ್ಯಿಸಬೇಡಿ; ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು ಎಚ್ಚರ!

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್