AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bad Breath: ನೀವು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್​ ಪರಿಶೀಲಿಸಿ!

ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಆಹಾರಗಳಲ್ಲಿನ ಕೆಟ್ಟ ವಾಸನೆಯ ತೈಲಗಳು ಶ್ವಾಸಕೋಶವನ್ನು ತಲುಪಿದಾಗ ಬಾಯಿಯ ದುರ್ವಾಸನೆ ಉಂಟುಮಾಡಬಹುದು. 

Bad Breath: ನೀವು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್​ ಪರಿಶೀಲಿಸಿ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 21, 2022 | 7:00 AM

Share

ಅನೇಕ ಜನರು ಬಾಯಿಯ ದುರ್ವಾಸನೆ (Bad Breath) ಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯಿಂದಾಗಿ ನಮಗೆ ಕೋಪ ಬರುತ್ತಲೇ ಇರುತ್ತದೆ. ಒಟ್ಟಿನಲ್ಲಿ ನೈರ್ಮಲ್ಯದ ಕೊರತೆಯಿಂದ ಅಥವಾ ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರಿಂದ ಬಾಯಿ ದುರ್ವಾಸನೆ ಬರುತ್ತದೆ. ದೀರ್ಘಕಾಲದ ಮೌಖಿಕ ಕಾಯಿಲೆಗಳು ಕೆಟ್ಟ ಉಸಿರಾಟವನ್ನು ಉಂಟುಮಾಡಬಹುದು. ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಆಹಾರಗಳಲ್ಲಿನ ಕೆಟ್ಟ ವಾಸನೆಯ ತೈಲಗಳು ಶ್ವಾಸಕೋಶವನ್ನು ತಲುಪಿದಾಗ ಬಾಯಿಯ ದುರ್ವಾಸನೆ ಉಂಟುಮಾಡಬಹುದು. ಅದೇ ಸಮಯದಲ್ಲಿ ಕೆಟ್ಟ ಉಸಿರಾಟವನ್ನು ಉಂಟುಮಾಡದ ಆಹಾರಗಳಿವೆ. ಈ ಆಹಾರಗಳು ಕೆಟ್ಟ ಉಸಿರಾಟದ ವಿರುದ್ಧ ಹೋರಾಡುತ್ತವೆ.

ಇದನ್ನೂ ಓದಿ: Headache: ಮಾತ್ರೆಗಳು ಬೇಡ, ಸಹಜವಾಗಿಯೇ ತಲೆನೋವನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಗ್ರೀನ್ ಟೀ: 

ಗ್ರೀನ್​ ಟೀನಲ್ಲಿ ಕ್ಯಾಟೆಚಿನ್ ಎಂಬ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ದುರ್ವಾಸನೆ ಉಂಟುಮಾಡುವ ಸಲ್ಫರ್ ಸಂಯುಕ್ತಗಳನ್ನು ಕಡಿಮೆ ಮಾಡುವ ಮೂಲಕ ಬ್ಯಾಕ್ಟೀರಿಯಾವನ್ನು ಪ್ರತಿಬಂಧಿಸುತ್ತದೆ.

ಹಣ್ಣುಗಳು:

ನಿಂಬೆಹಣ್ಣು, ದಾಳಿಂಬೆ, ಸೇಬು, ಬಟಾಣಿ, ಕಿತ್ತಳೆಗಳಲ್ಲಿ ವಿಟಮಿನ್ ಸಿ ಅಂಶಗಳಿಂದ ಸಮೃದ್ಧವಾಗಿದೆ. ಇದು ಬ್ಯಾಕ್ಟೀರಿಯಾವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ವಸಡು ಕಾಯಿಲೆ ಮತ್ತು ಜಿಂಗೈವಿಟಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮೊಸರು:

ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇವು ಕೆಟ್ಟ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಅವುಗಳಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Black Water Benefits: ಕಪ್ಪು ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು?

ತುಳಸಿ:

ತುಳಸಿಯಲ್ಲಿರುವ ಪಾಲಿಫಿನಾಲ್ ಎಂಬ ನೈಸರ್ಗಿಕ ಅಣುಗಳು ಬಾಯಿಯ ದುರ್ವಾಸನೆಗೆ ತುಂಬಾ ಪರಿಣಾಮಕಾರಿಯಾಗಿದೆ. ತುಳಸಿಯನ್ನು ಹೇಗೆ ಸೇವಿಸಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.

ಶುಂಠಿ:

ಶುಂಠಿಯಲ್ಲಿರುವ 6-ಜಿಂಜರಾಲ್ ಬಾಯಿಯಲ್ಲಿರುವ ಸಲ್ಫರ್ ಸಂಯುಕ್ತಗಳನ್ನು ಒಡೆಯಲು ಸಹಾಯ ಮಾಡುವ ಲಾಲಾರಸದ ಕಿಣ್ವವನ್ನು ನೀಡುತ್ತದೆ. ಶುಂಠಿ ಅಥವಾ ಶುಂಠಿಯಿಂದ ತಯಾರಿಸಿದ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಬಾಯಿಯ ದುರ್ವಾಸನೆ ನಿಯಂತ್ರಿಸಬಹುದು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ