Headache: ಮಾತ್ರೆಗಳು ಬೇಡ, ಸಹಜವಾಗಿಯೇ ತಲೆನೋವನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ

ತಲೆನೋವು ಸಾಮಾನ್ಯವಾಗಿ ಎಲ್ಲರನ್ನು ಒಂದಲ್ಲಾ ಒಂದು ಬಾರಿ ಕಾಡಿಯೇ ಕಾಡುತ್ತದೆ. ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದಿದ್ದಾಗ, ಗ್ಯಾಸ್ಟ್ರಿಕ್ ಸಮಸ್ಯೆಯುಂಟಾಗಿ ತಲೆನೋವು ಕಾಡುತ್ತದೆ.

Headache: ಮಾತ್ರೆಗಳು ಬೇಡ, ಸಹಜವಾಗಿಯೇ ತಲೆನೋವನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ
Headache
Follow us
TV9 Web
| Updated By: ನಯನಾ ರಾಜೀವ್

Updated on: Aug 20, 2022 | 2:32 PM

ತಲೆನೋವು ಸಾಮಾನ್ಯವಾಗಿ ಎಲ್ಲರನ್ನು ಒಂದಲ್ಲಾ ಒಂದು ಬಾರಿ ಕಾಡಿಯೇ ಕಾಡುತ್ತದೆ. ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದಿದ್ದಾಗ, ಗ್ಯಾಸ್ಟ್ರಿಕ್ ಸಮಸ್ಯೆಯುಂಟಾಗಿ ತಲೆನೋವು ಕಾಡುತ್ತದೆ. ತುಂಬಾ ಬಿಸಿಲಿನಲ್ಲಿ ನಡೆದಾಗ, ನಿದ್ರೆ ಸರಿಯಾಗಿ ಮಾಡದಿದ್ದರೆ, ತೀವ್ರ ಒತ್ತಡಕ್ಕೆ ನೀವು ಒಳಗಾಗಿದ್ದರೆ ತಲೆನೋವು ಕಾಣಿಸಿಕೊಳ್ಳುತ್ತದೆ.

ಅವೆಲ್ಲವನ್ನು ಹೊರತುಪಡಿಸಿ, ಮೈಗ್ರೇನ್ ಸಮಸ್ಯೆಯಿದ್ದರೆ ಅಥವಾ ಮೆದುಳಿಗೆ ಸಂಬಂಧಿಸಿದ ಏನೇ ಸಮಸ್ಯೆಯಿದ್ದರೂ ತಲೆ ನೋವು ಆಗಾಗ ಬರುತ್ತದೆ.

ಆದರೆ ಸಹಜವಾಗಿ ಕಾಣಿಸಿಕೊಳ್ಳುವ ತಲೆನೋವನ್ನು ಮಾತ್ರಯಿಲ್ಲದೆ ಕಡಿಮೆ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಐಸ್‌ ಪ್ಯಾಕ್‌ ಐಸ್ ಕ್ಯೂಬ್​ಗಳನ್ನು ಬಟ್ಟೆಯಲ್ಲಿ ಸುತ್ತಿ ಮತ್ತು ಹಣೆಯ ಮೇಲೆ ನಿಧಾನವಾಗಿ ಒತ್ತಿರಿ. ಇದು ನಿಮಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಸ್ವಲ್ಪ ಸಮಯದ ನಂತರ ನೀವು ಐಸ್ ಪ್ಯಾಕ್ ಅನ್ನು ಹಣೆಯ ಮೇಲೆ ಇಟ್ಟುಕೊಂಡು ಮಸಾಜ್‌ ರೀತಿ ಮಾಡಬಹುದು. ತಲೆನೋವನ್ನು ಗುಣಪಡಿಸಲು ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

ನೆತ್ತಿಗೆ ಮಸಾಜ್ ಮಾಡಿ ನಿಮಗೆ ತಲೆನೋವು ಇದ್ದರೆ, ನೀವು ಯಾವುದೇ ಎಣ್ಣೆಯಿಂದ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿಕೊಳ್ಳಬಹುದು. ಇದು ನಿಮ್ಮ ನರಗಳಿಗೆ ಸಾಕಷ್ಟು ವಿಶ್ರಾಂತಿಯನ್ನು ನೀಡುತ್ತದೆ ಮತ್ತು ತಲೆನೋವಿನಿಂದ ಪರಿಹಾರ ಒದಗಿಸುತ್ತದೆ.

ಬಿಸಿ ಅಕ್ಕಿಯ ಶಾಖವನ್ನು ನೀಡಬಹುದು ಅಕ್ಕಿಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಒಂದು ಬಟ್ಟೆಯ ಚೀಲ ಅಥವಾ ಕಾಟನ್ ಬಟ್ಟೆಗೆ ಹಾಕಿ ಗಂಟು ಕಟ್ಟಿ, ಬಳಿಕ ಹಣೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.

ಉಸಿರಾಟದ ವ್ಯಾಯಾಮಗಳು ನೀವು ನಿತ್ಯ 15 ನಿಮಿಷಗಳ ಕಾಲ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವನ್ನು ಮಾಡಿ. ಈ ವ್ಯಾಯಾಮ ಮಾಡುವುದರಿಂದ ಉಸಿರಾಟ ಸರಾಗವಾಗುತ್ತದೆ. ನರಗಳಿಗೆಬ ವಿಶ್ರಾಂತಿ ಸಿಗುತ್ತದೆ.

ಲ್ಯಾವೆಂಡರ್ ಎಣ್ಣೆ ಈ ಲ್ಯಾವೆಂಡರ್ ಎಣ್ಣೆಯನ್ನು ಬೆಚ್ಚಗೆ ಮಾಡಿ ನಿಮ್ಮ ಹಣೆಗೆ ಹಚ್ಚಿ ಕೆಲ ಸಮಯಗಳ ಕಾಲ ಮಸಾಜ್ ಮಾಡಿ.

ನೀರಿನ ಕೊರತೆ ದೇಹಕ್ಕೆ ನೀರಿನ ಕೊರತೆಯುಂಟಾದಾಗಲೂ ತಲೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ತಲೆ ನೋವು ಬಂದಾಗ ಮೊದಲು ತಣ್ಣನೆಯ ನೀರು ಕುಡಿದು ನೋಡಿ.

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ