Oral Health: ಬಾಯಿಯೊಳಗೆ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ
ಪ್ರತಿನಿತ್ಯ ನೀವು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬ್ರಷ್ ಮಾಡ್ತೀರ, ಒಂದೊಮ್ಮೆ ಸಿಹಿ ತಿನಿಸುಗಳನ್ನು ತಿಂದಾಗ ಅಥವಾ ಯಾವುದೇ ಆಹಾರವನ್ನು ಸೇವಿಸಿದ ಬಳಿಕವೂ ನೀಟಾಗಿ ಬಾಯಿಯನ್ನು ಸ್ವಚ್ಛಗೊಳಿಸುತ್ತೀರಿ.
ಪ್ರತಿನಿತ್ಯ ನೀವು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬ್ರಷ್ ಮಾಡ್ತೀರ, ಒಂದೊಮ್ಮೆ ಸಿಹಿ ತಿನಿಸುಗಳನ್ನು ತಿಂದಾಗ ಅಥವಾ ಯಾವುದೇ ಆಹಾರವನ್ನು ಸೇವಿಸಿದ ಬಳಿಕವೂ ನೀಟಾಗಿ ಬಾಯಿಯನ್ನು ಸ್ವಚ್ಛಗೊಳಿಸುತ್ತೀರಿ. ಆದಾಗ್ಯೂ, ಕೆಲವರಿಗೆ ಬಾಯಿಯ ದುರ್ವಾಸನೆ ಕಡಿಮೆ ಆಗುವುದೇ ಇಲ್ಲ.
ಇನ್ನೂ ಕೆಲವರಿಗೆ ಹುಳುಕಿಲ್ಲದಿದ್ದರೂ ಆಗಾ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.
ಆದರೆ ಇವೆಲ್ಲವೂ ಮನೆಮದ್ದುಗಳನ್ನು ಮಾಡಿ ಕಡಿಮೆ ಮಾಡಿಕೊಳ್ಳುವಂತಹ ಸಮಸ್ಯೆಗಳು ಆಗಿರುವುದಿಲ್ಲ, ಅವು ಗಂಭೀರ ಸಮಸ್ಯೆಗಳಾಗಿದ್ದು, ವೈದ್ಯರ ಸಲಹೆ ಪಡೆಯಲೇಬೇಕು.
ದುರ್ಬಲ ಹಲ್ಲುಗಳಂತಹ ಸಮಸ್ಯೆಗಳು ತುಂಬಾ ಮಾರಣಾಂತಿಕ ಕಾಯಿಲೆಗಳನ್ನು ಸೂಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಇವುಗಳಿಗೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ಅವು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಅಗ್ರ ನಾಲಿಗೆ
ನಾಲಿಗೆಯ ಬಿಳಿಯಾಗುವುದು ಗಂಭೀರ ಕಾಯಿಲೆಗಳ ಸಂಕೇತವಾಗಿದೆ. ನಾಲಿಗೆ ಸ್ವಲ್ಪ ಬಿಳಿಯಾಗಿ ಕಾಣಿಸಿಕೊಳ್ಳುವುದು ಸಹಜ, ಆದರೆ ಅದರ ಮೇಲೆ ದಪ್ಪವಾದ ಬಿಳಿ ಲೇಪನವು ಸೋಂಕಿನ ಚಿಹ್ನೆ ಅಥವಾ ಕ್ಯಾನ್ಸರ್ನಂತಹ ಕಾಯಿಲೆಯ ಸಂಕೇತವಾಗಿರಬಹುದು.
ಬಾಯಿ ಹುಣ್ಣು: ಸಾಮಾನ್ಯವಾಗಿ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಹುಣ್ಣು ಕಾಣಿಸಿಕೊಳ್ಳುತ್ತದೆ. ಉಷ್ಣ ಆದರೆ ಕೆಲವೊಮ್ಮೆ ಇದು ಮನೆಮದ್ದುಗಳಲ್ಲಿ ಗುಣಪಡಿಸಬಹುದಾದಂತಹ ಸಾಮಾನ್ಯ ಗುಳ್ಳೆಗಳು ಆಗಿರುವುದಿಲ್ಲ. ಬಿ ಜೀವಸತ್ವಗಳು, ಸತು ಮತ್ತು ಕಬ್ಬಿಣದ ಕೊರತೆಯನ್ನು ಸೂಚಿಸುತ್ತವೆ.
ಒಸಡಿನ ಸಮಸ್ಯೆಗಳು: ಒಸಡುಗಳು ಹಳದಿ ಬಣ್ಣಕ್ಕೆ ತಿರುಗಿದರೆ ಹಲ್ಲುಜ್ಜುವಾಗ ರಕ್ತ ಬರುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ. ಇದು ಗಂಭೀರ ಅನಾರೋಗ್ಯದ ಸಂಕೇತವಾಗಿರಬಹುದು. ಅಂತಹ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಬಾಯಿಯ ದುರ್ವಾಸನೆ: ನಿರಂತರವಾಗಿ ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಇದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಸರಿಯಾಗಿ ಬ್ರಶ್ ಮಾಡಿಲ್ಲ ಎಂದು ಕೊಳ್ಳುತ್ತೇವೆ. ಆದರೆ ಅದು ಸತ್ಯವಲ್ಲ ನೀವು ಗಂಭೀರ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದರ್ಥ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ