Bedwetting: ಮಲಗಿದ್ದಲೇ ನಿಮಗೆ ಗೊತ್ತಿಲ್ಲದೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇದ್ಯಾ? ಈ ಸಮಸ್ಯೆಯಾಗಿರಬಹುದು

ನಿದ್ರೆ ಮಾಡುವ ಸಮಯದಲ್ಲಿ ನಮಗೆ ಅರಿವಿಲ್ಲದಂತೆ, ಆಕಸ್ಮಿಕವಾಗಿ ಮೂತ್ರ ಹೋಗುತ್ತದೆ ಇದು ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರಲ್ಲಿಯೂ ಕಂಡು ಬರಬಹುದಾದ ಸಾಮಾನ್ಯ ಸ್ಥಿತಿಯಾಗಿದ್ದರೂ ಕೂಡ 7 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸತತವಾಗಿ ಮೂರು ತಿಂಗಳವರೆಗೆ, ವಾರಕ್ಕೆ ಕನಿಷ್ಠ ಎರಡು ಬಾರಿ ಈ ರೀತಿಯಾದರೆ ಇದು ಕಳವಳಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅನೇಕ ರೀತಿಯ ಕಾರಣಗಳಿದ್ದು ಚಿಕಿತ್ಸೆ ನೀಡಬಹುದಾಗಿದೆ. ಇದು ಗಂಭೀರ ಸ್ಥಿತಿಯಲ್ಲದಿದ್ದರೂ, ಮಕ್ಕಳಿಗಾಗಲಿ ಅಥವಾ ದೊಡ್ಡವರಿಗಾಗಲಿ ಒತ್ತಡವನ್ನು ಉಂಟುಮಾಡುತ್ತದೆ. ಹಾಸಿಗೆ ಒದ್ದೆಯಾಗುವುದರಿಂದ ನಾಚಿಕೆ ಅಥವಾ ಮುಜುಗರ ಉಂಟಾಗಬಹುದು. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Bedwetting: ಮಲಗಿದ್ದಲೇ ನಿಮಗೆ ಗೊತ್ತಿಲ್ಲದೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇದ್ಯಾ? ಈ ಸಮಸ್ಯೆಯಾಗಿರಬಹುದು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 27, 2024 | 11:42 AM

ರಾತ್ರಿ ಮಲಗಿರುವಾಗ ನಿಮಗೆ ಗೊತ್ತಿಲ್ಲದೆ ಮೂತ್ರ ವಿಸರ್ಜನೆಯಾಗುತ್ತಿದೆಯೇ? ಪದೇ ಪದೇ ಈ ರೀತಿಯ ಸಮಸ್ಯೆ ಕಂಡುಬರುತ್ತಿದೆಯೇ? ಹಾಗಾದರೆ ನೀವು ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ನಿದ್ರೆ ಮಾಡುವ ಸಮಯದಲ್ಲಿ ನಮಗೆ ಅರಿವಿಲ್ಲದಂತೆ, ಆಕಸ್ಮಿಕವಾಗಿ ಮೂತ್ರ ಹೋಗುತ್ತದೆ ಇದು ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರಲ್ಲಿಯೂ ಕಂಡು ಬರಬಹುದಾದ ಸಾಮಾನ್ಯ ಸ್ಥಿತಿಯಾಗಿದ್ದರೂ ಕೂಡ 7 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸತತವಾಗಿ ಮೂರು ತಿಂಗಳವರೆಗೆ, ವಾರಕ್ಕೆ ಕನಿಷ್ಠ ಎರಡು ಬಾರಿ ಈ ರೀತಿಯಾದರೆ ಇದು ಕಳವಳಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅನೇಕ ರೀತಿಯ ಕಾರಣಗಳಿದ್ದು ಚಿಕಿತ್ಸೆ ನೀಡಬಹುದಾಗಿದೆ. ಇದು ಗಂಭೀರ ಸ್ಥಿತಿಯಲ್ಲದಿದ್ದರೂ, ಮಕ್ಕಳಿಗಾಗಲಿ ಅಥವಾ ದೊಡ್ಡವರಿಗಾಗಲಿ ಒತ್ತಡವನ್ನು ಉಂಟುಮಾಡುತ್ತದೆ. ಹಾಸಿಗೆ ಒದ್ದೆಯಾಗುವುದರಿಂದ ನಾಚಿಕೆ ಅಥವಾ ಮುಜುಗರ ಉಂಟಾಗಬಹುದು. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಮಲಗಿದ್ದಲೇ ಮೂತ್ರ ವಿಸರ್ಜನೆಯಾಗಲು ಕಾರಣವೇನು?

*ಹಗಲಿನಲ್ಲಿ ನೀವು ಯಾವ ಸಮಯದಲ್ಲಿ ಮತ್ತು ಎಷ್ಟು ಮೂತ್ರ ವಿಸರ್ಜನೆ ಮಾಡುತ್ತೀರಿ ಎಂಬುದು ಕೂಡ ಕಾರಣವಾಗಬಹುದು.

*ಮೂತ್ರ ಮಾಡುವಾಗ ನೋವು ಬರುವುದು.

*ಮೂತ್ರ ಹೆಚ್ಚಾಗಿ ಹೋಗದಿರುವುದು.

*ಮೂತ್ರ ಬಣ್ಣ ಬದಲಾಗುವುದು

*ಮನಸ್ಥಿತಿ ಬದಲಾವಣೆ.

(ವಯಸ್ಸಿಗೆ ಅನುಗುಣವಾಗಿ ಇದು ಬದಲಾಗಬಹುದು.)

ಕೆಲವು ಸಂದರ್ಭಗಳಲ್ಲಿ, ಆಗಾಗ ಅಥವಾ ಪುನರಾವರ್ತಿತವಾಗಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರೆ ಇದು ವೈದ್ಯಕೀಯ ಸ್ಥಿತಿಯ ಸಂಕೇತವಾಗಿರಬಹುದು, ಉದಾಹರಣೆಗೆ:

ಮೂತ್ರನಾಳದ ಸೋಂಕು

ಮಲಬದ್ಧತೆ

ನರ ಸಮಸ್ಯೆಗಳು

ಮಧುಮೇಹ

ಕಿರಿದಾದ ಮೂತ್ರನಾಳ

ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ನಿದ್ರಾಹೀನತೆ)

ಎಡಿಎಚ್ಡಿ

ಇದನ್ನೂ ಓದಿ: ಪಾದ, ಹಿಮ್ಮಡಿ ನೋವಿಗೆ ಎಲೆಕೋಸಿನಿಂದ ಮುಕ್ತಿ

ವಯಸ್ಕರಲ್ಲಿ ಈ ರೀತಿ ಸಮಸ್ಯೆ ಕಂಡು ಬರಲು ಕಾರಣಗಳು;

18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ರೀತಿಯ ಸಮಸ್ಯೆ ಕಂಡುಬರಲು ಸಂಭಾವ್ಯ ಕಾರಣಗಳಿವೆ.

ಆನುವಂಶಿಕತೆ: ಹಿಂದೆ ಅವರ ಕುಂಟುಂಬದಲ್ಲಿ ಇಂತಹ ಸಮಸ್ಯೆ ಇದ್ದರೆ ಅವರ ಮಕ್ಕಳಿಗೂ ಈ ಸಮಸ್ಯೆ ಕಂಡು ಬರುತ್ತದೆ.

ಮಲಬದ್ಧತೆ: ಹೆಚ್ಚುವರಿ ಮಲದಿಂದ ಒತ್ತಡ ಉಂಟಾಗಿ, ನಿಮ್ಮ ಮೂತ್ರಕೋಶವು ಮೆದುಳಿಗೆ ಕಳುಹಿಸುವ ನರ ಸಂಕೇತಗಳಿಗೆ ಅಡ್ಡಿಯಾಗಬಹುದು.

ಹಾರ್ಮೋನುಗಳು: ವ್ಯಾಸೊಪ್ರೆಸಿನ್ ಎಂಬ ಹಾರ್ಮೋನ್ ರಾತ್ರಿಯಲ್ಲಿ ನಿಮ್ಮ ದೇಹವು ಉತ್ಪಾದಿಸುವ ಮೂತ್ರದ ಪ್ರಮಾಣವನ್ನು ಮಿತಿಗೊಳಿಸುತ್ತದೆ. ಇದರಲ್ಲಿ ವ್ಯತ್ಯಾಸವಾದಾಗ ಹಾಸಿಗೆ ಗೊತ್ತಿಲ್ಲದೇ ಒದ್ದೆಯಾಗಬಹುದು.

ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆ: ಆಘಾತಕಾರಿ ಘಟನೆಗಳು ಅಥವಾ ನಿಮ್ಮ ಸಾಮಾನ್ಯ ದಿನಚರಿಯಲ್ಲಿನ ಅಡೆತಡೆಗಳಿಂದ ಉಂಟಾಗುವ ಭಾವನಾತ್ಮಕ ಒತ್ತಡವು ಹಾಸಿಗೆ ಒದ್ದೆಯಾಗಲು ಕಾರಣವಾಗಬಹುದು. ಉದಾಹರಣೆಗೆ, ಹೊಸ ಮನೆಗೆ ಹೋಗುವುದು, ಹೊಸ ಶಾಲೆಗೆ ಸೇರುವುದು, ಪ್ರೀತಿಪಾತ್ರರ ಸಾವು ಅಥವಾ ಲೈಂಗಿಕ ದೌರ್ಜನ್ಯ. ಇವು ಕಾಲಾನಂತರದಲ್ಲಿ ಕಡಿಮೆಯಾಗಬಹುದು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಮಧ್ಯರಾತ್ರಿಯಲ್ಲಿ ಮೂತ್ರಕೋಶ ತುಂಬಿದಾಗ ಎಚ್ಚರಿಕೆಯಾಗುತ್ತದೆ. ಆದರೆ ಕೆಲವು ಬಾರಿ ಇದರಲ್ಲಿ ವಿಫಲರಾದಾಗ ಈ ರೀತಿ ಸಮಸ್ಯೆ ಉಂಟಾಗಬಹುದು. ಇನ್ನು ಕೆಲವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿದ್ದು ಅಂತವರು ಕೂಡ ಈ ರೀತಿಯ ಸಮಸ್ಯೆಗೆ ಒಳಗಾಗಬಹುದು.ಇದು ಪದೇ ಪದೇ ಕಂಡು ಬರುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೆಯೇ ಆರೋಗ್ಯ ತಜ್ಞರನ್ನು ಸಂಪರ್ಕಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ