AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Warm Lemon Water: ಬೆಳಗ್ಗೆ ನಿಂಬೆ ರಸವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅದ್ಭುತ ಪ್ರಯೋಜನಗಳಿವೆ

ನಿಂಬೆ ರಸವು ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಒಂದು ನಿಂಬೆ ರಸಯುಕ್ತ ಒಂದು ಲೋಟ ನೀರನ್ನು ಕುಡಿಯುವುದರಿಂದ ಆಯಾಸದಿಂದ ತ್ವರಿತ ಶಕ್ತಿ ಬರುತ್ತದೆ.

Warm Lemon Water: ಬೆಳಗ್ಗೆ ನಿಂಬೆ ರಸವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅದ್ಭುತ ಪ್ರಯೋಜನಗಳಿವೆ
Lemon Water
Follow us
TV9 Web
| Updated By: ನಯನಾ ರಾಜೀವ್

Updated on:Aug 29, 2022 | 9:46 AM

ನಿಂಬೆ ರಸವು ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ನಿತ್ಯ ಒಂದು ಲೋಟ ನಿಂಬೆ ರಸಯುಕ್ತ ಬೆಚ್ಚನೆಯ ನೀರು  ಕುಡಿಯುವುದರಿಂದ ಆಯಾಸದಿಂದ ತ್ವರಿತ ಶಕ್ತಿ ಬರುತ್ತದೆ. ಸಾಮಾನ್ಯವಾಗಿ, ನಿಂಬೆ ಪಾನಕವನ್ನು ತಯಾರಿಸುವಾಗ ಸಾಮಾನ್ಯ ನೀರು / ತಣ್ಣೀರು ಸೇರಿಸಲಾಗುತ್ತದೆ. ಅನೇಕ ಜನರು ಈ ರೀತಿ ಕುಡಿಯಲು ಬಯಸುತ್ತಾರೆ. ಆದರೆ ನೀವು ಎಂದಾದರೂ ಬೆಚ್ಚಗಿನ ನೀರನ್ನು ನಿಂಬೆ ರಸದೊಂದಿಗೆ ಕುಡಿದಿದ್ದೀರಾ?

ನೀವು ಇನ್ನೂ ಅದನ್ನು ಕುಡಿದಿಲ್ಲವೆಂದರೆ ಈಗಲೇ ಟ್ರೈ ಮಾಡಿ, ತಂಪಾದ ನೀರಿನಿಂದ ತಯಾರಿಸಿದ ನಿಂಬೆ ರಸಕ್ಕಿಂತ ಬಿಸಿನೀರಿನ ನಿಂಬೆ ರಸವು ಹೆಚ್ಚು ಪ್ರಯೋಜನಕಾರಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಿಟ್ರಸ್ ಹಣ್ಣುಗಳನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ.

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ವಿಟಮಿನ್ ಬಿ -6, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂನಂತಹ ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಬಿಸಿನೀರಿನ ನಿಂಬೆ ರಸ ಮಾಡುವ ವಿಧಾನ ಒಂದು ಬೌಲ್​ನಲ್ಲಿ ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಅರ್ಧ ಹೋಳು ನಿಂಬೆಹಣ್ಣನ್ನು ಹಾಕಿ ಎರಡು ಮೂರು ನಿಮಿಷ ಕುದಿಯಲು ಬಿಡಿ.

ನಂತರ ನಿಂಬೆಯನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಇದರಿಂದ ನಿಂಬೆಯು ನೀರಿನೊಂದಿಗೆ ಬೆರೆಯುತ್ತದೆ. ರುಚಿಗೆ ಸ್ವಲ್ಪ ಜೇನುತುಪ್ಪವನ್ನು ಕೂಡ ಸೇರಿಸಬಹುದು. ನೀರನ್ನು ಸ್ವಲ್ಪ ತಣಿಸಿ ಕುಡಿಯುವುದು ಒಳ್ಳೆಯದು. ಬೆಚ್ಚಗಿನ ನಿಂಬೆ ರಸವನ್ನು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.

-ನಿಂಬೆಯಲ್ಲಿ ವಿಟಮಿನ್ ಸಿ, ಬಿ ಮತ್ತು ರಂಜಕವೂ ಇದೆ. ಇದು ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ತಡೆಯುತ್ತದೆ.

-ಇದನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗುತ್ತದೆ. ನಿಂಬೆಯಲ್ಲಿರುವ ಪೊಟ್ಯಾಸಿಯಮ್

-ರಕ್ತನಾಳಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಇದು ದೇಹದಲ್ಲಿ ಹೊಸ ರಕ್ತ ಕಣಗಳ ರಚನೆಗೂ ಸಹಾಯ ಮಾಡುತ್ತದೆ.

-ಒಂದು ಹೋಳು ನಿಂಬೆಹಣ್ಣನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ತ್ವಚೆಯು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿರುತ್ತದೆ.

-ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಿಸಿ ನಿಂಬೆ ರಸ ತುಂಬಾ ಉಪಯುಕ್ತವಾಗಿದೆ.

-ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 am, Mon, 29 August 22