Health Tips: ರಾತ್ರಿಯಿಡೀ ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ ಈ ಎಲ್ಲ ಆರೋಗ್ಯ ಪ್ರಯೋಜನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2024 | 4:31 PM

ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಪ್ರತಿನಿತ್ಯದ ಕೆಲಸಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಇವುಗಳ ಜೊತೆಗೆ, ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳು ಸಹ ಹೈರಾಣ ಮಾಡಿಬಿಡುತ್ತದೆ. ಆದರೆ ಇಂತಹ ಸಮಸ್ಯೆಗಳಿಗೆ ಸರಳ ಪರಿಹಾರವಿದೆ. ನಾವು ರಾತ್ರಿಯಲ್ಲಿ ಮಲಗುವ ಭಂಗಿಯೂ ಕೂಡ ನಮ್ಮ ಒತ್ತಡ ಮತ್ತು ಇತರ ಸಮಸ್ಯೆಗಳಿಂದ ಮುಕ್ತಿ ನೀಡಬಹುದು. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಕೆಲವೊಮ್ಮೆ ಮಲಗುವ ಭಂಗಿಯೂ ಕೂಡ ನಿಮ್ಮ ದುಗುಡವನ್ನು ನಿವಾರಿಸಬಹುದು. ಹಾಗಾದರೆ ಯಾವ ಭಂಗಿ ಒಳ್ಳೆಯದು? ಇದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Health Tips: ರಾತ್ರಿಯಿಡೀ ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ ಈ ಎಲ್ಲ ಆರೋಗ್ಯ ಪ್ರಯೋಜನ
ಸಾಂದರ್ಭಿಕ ಚಿತ್ರ
Follow us on

ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ಕೆಲಸಗಳು ಕೂಡ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಪ್ರತಿನಿತ್ಯದ ಕೆಲಸಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಇವುಗಳ ಜೊತೆಗೆ, ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳು ಸಹ ಹೈರಾಣ ಮಾಡಿಬಿಡುತ್ತದೆ. ಆದರೆ ಇಂತಹ ಸಮಸ್ಯೆಗಳಿಗೆ ಸರಳ ಪರಿಹಾರವಿದೆ. ನಾವು ರಾತ್ರಿಯಲ್ಲಿ ಮಲಗುವ ಭಂಗಿಯೂ ಕೂಡ ನಮ್ಮ ಒತ್ತಡ ಮತ್ತು ಇತರ ಸಮಸ್ಯೆಗಳಿಂದ ಮುಕ್ತಿ ನೀಡಬಹುದು. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಕೆಲವೊಮ್ಮೆ ಮಲಗುವ ಭಂಗಿಯೂ ಕೂಡ ನಿಮ್ಮ ದುಗುಡವನ್ನು ನಿವಾರಿಸಬಹುದು. ಹಾಗಾದರೆ ಯಾವ ಭಂಗಿ ಒಳ್ಳೆಯದು? ಇದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ತಜ್ಞರು ಹೇಳುವ ಪ್ರಕಾರ ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ರೀತಿ ಮಲಗುವುದರಿಂದ, ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದಾಗಿ ಗಂಡ, ಹೆಂಡತಿ ಆರೋಗ್ಯವಾಗಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ, ರಾತ್ರಿ ಪೂರ್ತಿ ಒಳ್ಳೆಯ ನಿದ್ದೆ ಮಾಡಬಹುದಾಗಿದೆ. ಜೊತೆಗೆ ಇದು ಮನಸ್ಸನ್ನು ನಿರಾಳಗೊಳಿಸುತ್ತದೆ. ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ.

ಇದನ್ನೂ ಓದಿ: ನೆನಪಿನಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳು ಯಾವುದು ಗೊತ್ತಾ?

ಅಪ್ಪುಗೆಯು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ

ತಬ್ಬಿಕೊಂಡು ಮಲಗುವುದರಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಅಲ್ಲದೆ, ಬೆಳಿಗ್ಗೆ ಏಳುವಾಗಲು ನಿಮ್ಮ ಮನಸ್ಸು ಖುಷಿಯಾಗಿರುತ್ತದೆ. ಈ ರೀತಿ ಮಲಗುವುದರಿಂದ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸಿಕೊಳ್ಳಬಹುದು. ಅಪ್ಪುಗೆಯು, ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಅದಲ್ಲದೆ ಇದು ಪ್ರೀತಿಯನ್ನು ವ್ಯಕ್ತಪಡಿಸುವ ಉತ್ತಮ ಮಾರ್ಗವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ