AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies: ನೆನಪಿನಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳು ಯಾವುದು ಗೊತ್ತಾ?

ನಾವು ಹೆಚ್ಚು ಹೆಚ್ಚು ನಮ್ಮ ಪೂರ್ವಜರ ಆಹಾರ ಪದ್ದತಿಗಳನ್ನು ಅನುಕರಣೆ ಮಾಡಲು ಆರಂಭಿಸಿದ್ದೇವೆ. ಆರೋಗ್ಯ ಕಾಪಾಡಿಕೊಳ್ಳಲು ಹಿಂದಿನವರು ಬಳಸುತ್ತಿದ್ದ ಗಿಡಮೂಲಿಕೆಗಳನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಇವು, ಮೈ ಕೈ ನೋವಿನಿಂದ ಹಿಡಿದು, ಜ್ವರ, ಶೀತ, ನೆನಪಿನ ಶಕ್ತಿಯ ಜೊತೆಗೆ ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಯಾವ ಗಿಡ ಮೂಲಿಕೆ ಯಾವ ಸಮಸ್ಯೆಗೆ ಒಳ್ಳೆಯದು? ನೆನಪಿನ ಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳು ಯಾವುದು? ಇಲ್ಲಿದೆ ಮಾಹಿತಿ.

Home Remedies: ನೆನಪಿನಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳು ಯಾವುದು ಗೊತ್ತಾ?
ಅಶ್ವಗಂಧ, ​ಶಂಕಪುಷ್ಪ, ಬ್ರಾಹ್ಮಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 24, 2024 | 9:54 AM

Share

ಇತ್ತೀಚಿನ ವರ್ಷಗಳಲ್ಲಿ ನಾವು ಹೆಚ್ಚು ಹೆಚ್ಚು ನಮ್ಮ ಪೂರ್ವಜರ ಆಹಾರ ಪದ್ದತಿಗಳನ್ನು ಅನುಕರಣೆ ಮಾಡಲು ಆರಂಭಿಸಿದ್ದೇವೆ. ಆರೋಗ್ಯ ಕಾಪಾಡಿಕೊಳ್ಳಲು ಹಿಂದಿನವರು ಬಳಸುತ್ತಿದ್ದ ಗಿಡಮೂಲಿಕೆಗಳನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಇವು, ಮೈ ಕೈ ನೋವಿನಿಂದ ಹಿಡಿದು, ಜ್ವರ, ಶೀತ, ನೆನಪಿನ ಶಕ್ತಿಯ ಜೊತೆಗೆ ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಯಾವ ಗಿಡ ಮೂಲಿಕೆ ಯಾವ ಸಮಸ್ಯೆಗೆ ಒಳ್ಳೆಯದು? ನೆನಪಿನ ಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳು ಯಾವುದು? ಇಲ್ಲಿದೆ ಮಾಹಿತಿ.

ಅಶ್ವಗಂಧ

ಗಿಡಮೂಲಿಕೆಗಳಲ್ಲಿ ಅಶ್ವಗಂಧ ಬಹಳಷ್ಟು ಪ್ರಸಿದ್ಧಿ ಪಡೆದಿದೆ ಎಂದು ಹೇಳಬಹುದು. ಏಕೆಂದರೆ ಇದು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ಪುರುಷರ ಫಲವತ್ತತೆಯ ಜೊತೆಗೆ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

​ಶಂಕಪುಷ್ಪ

ಶಂಕಪುಷ್ಪ ಅಥವಾ ಶಂಕಪುಷ್ಪಿ ಸೇವನೆಯಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ನರಮಂಡಲವನ್ನು ಶಾಂತವಾಗಿಸುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಸಹ ಶಂಕಪುಷ್ಪವನ್ನು ಸೇವನೆ ಮಾಡಬಹುದು. ಅಲ್ಲದೆ ಇದು ಅಸ್ತಮಾ, ಶೀತ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳಿಗೆ ರಾಮಬಾಣವಾಗಿದೆ. ಜೊತೆಗೆ ಇದು ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಬ್ರಾಹ್ಮಿ

ಆರೋಗ್ಯಕರವಾದ ಜೀವನ ಶೈಲಿಗೆ ಬ್ರಾಹ್ಮಿ ಗಿಡಮೂಲಿಕೆ ತುಂಬಾ ಒಳ್ಳೆಯದು. ಇದು ಅತ್ಯಧಿಕ ಆಂಟಿ – ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿದೆ. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ 45 ದಿನ ಖಾಲಿ ಹೊಟ್ಟೆಯಲ್ಲಿ ತಪ್ಪದೆ ಬ್ರಾಹ್ಮಿ ಎಲೆಯನ್ನು ಸೇವನೆ ಮಾಡಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ ಜೊತೆಗೆ ಮಕ್ಕಳ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಪುರುಷರಲ್ಲಿ ಲೈಂಗಿಕ ಅಸಮರ್ಥತೆಗೆ ಕಾರಣವೇನು? ವೀರ್ಯದ ಸಂಖ್ಯೆ ಹೆಚ್ಚಿಸಲು ಏನು ತಿನ್ನಬಹುದು?

ಅರಿಶಿನ

ಪ್ರತಿ ದಿನದ ಆಹಾರ ತಯಾರಿಯಲ್ಲಿ ಬಳಕೆಯಾಗುವ ಒಂದು ಮಸಾಲೆ ಪದಾರ್ಥ ಎಂದರೆ ಅದು ಅರಿಶಿನ. ಇದು ನಮ್ಮ ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ಅತೀ ಹೆಚ್ಚು ಬಳಕೆಯಾಗುತ್ತದೆ ಎಂದರೆ ತಪ್ಪಾಗಲಾರದು. ಇದರಲ್ಲಿರುವ ಅಪಾರವಾದ ಆರೋಗ್ಯ ಪ್ರಯೋಜನಗಳು ಕಾಯಿಲೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ. ಅರಿಶಿನವು ಹೃದಯಘಾತ ಸಮಸ್ಯೆಯಿಂದ ಕಾಪಾಡುವುದಲ್ಲದೆ ಕ್ಯಾನ್ಸರ್ ಮತ್ತು ಮಧುಮೇಹಿ ರೋಗಿಗಳಿಗೂ ತುಂಬಾ ಸಹಕಾರಿ ಇದನ್ನು ವಿವಿಧ ರೀತಿಯ ಆಹಾರಗಳ ಮೂಲಕ ಮಕ್ಕಳಿಗೆ ನೀಡುವುದು ಕೂಡ ತುಂಬಾ ಒಳ್ಳೆಯದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ