Sign In

By signing in or creating an account, you agree with Associated Broadcasting Company's Terms & Conditions and Privacy Policy.

White Pepper Benefits: ನಿಮಗಿದು ಗೊತ್ತೆ? ಬಿಳಿ ಕಾಳುಮೆಣಸಿನಿಂದ ಹಲವು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ

ಸಿಪ್ಪೆ ತೆಗೆದು ಒಣಗಿಸಿದರೆ ಬಿಳಿಮೆಣಸು. ಹೆಚ್ಚಾಗಿ ಅಡುಗೆಗಳಿಗೆ ಕರಿಮೆಣಸು ಬಳಸುತ್ತಾರೆ. ಬಿಳಿಮೆಣಸನ್ನು ಹೋಟೆಲ್​ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬಿಳಿಮೆಣಸು ಆರೋಗ್ಯಕ್ಕೆ ಹೆಚ್ಚು ಪ್ರಯೋಜಕಾರಿಯಾಗಿದೆ.

White Pepper Benefits: ನಿಮಗಿದು ಗೊತ್ತೆ? ಬಿಳಿ ಕಾಳುಮೆಣಸಿನಿಂದ ಹಲವು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ
ಬಿಳಿ ಕಾಳುಮೆಣಸು
Follow us
TV9 Web
| Updated By: Skanda

Updated on: Jul 01, 2021 | 7:22 AM

ಕಾಳು ಮೆಣಸು ಒಂದು ಸಾಂಬಾರ ಪದಾರ್ಥ. ಸಹಜವಾಗಿ ಎಲ್ಲರ ಮನೆಯಲ್ಲಿ ಕಾಳು ಮೆಣಸು ಇದ್ದೇ ಇರುತ್ತದೆ. ಕಾಳು ಮೆಣಸಿನಲ್ಲಿ ಎರಡು ವಿಧಗಳಿವೆ. ಒಂದು ಕರಿಮೆಣಸು, ಇನ್ನೊಂದು ಬಿಳಿಮೆಣಸು. ಬಿಳಿಮೆಣಸು ಮತ್ತು ಕರಿಮೆಣಸಿಗೆ ಇರುವ ವ್ಯತ್ಯಾಸವಿಷ್ಟೆ. ಕಾಳು ಮೆಣಸನ್ನು ಸಿಪ್ಪೆ ಸಮೇತ ಒಣಗಿಸಿದರೆ ಕರಿಮೆಣಸು. ಸಿಪ್ಪೆ ತೆಗೆದು ಒಣಗಿಸಿದರೆ ಬಿಳಿಮೆಣಸು. ಹೆಚ್ಚಾಗಿ ಅಡುಗೆಗಳಿಗೆ ಕರಿಮೆಣಸು ಬಳಸುತ್ತಾರೆ. ಬಿಳಿಮೆಣಸನ್ನು ಹೋಟೆಲ್​ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬಿಳಿಮೆಣಸು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ತಲೆನೋವು ಗುಣಪಡಿಸುವುದರಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆವರೆಗೆ ಇದು ಹೆಚ್ಚು ಉಪಯುಕ್ತವಾಗಿದೆ.

ಬಿಳಿ ಕಾಳುಮೆಣಸಿನಿಂದ ಹೆಚ್ಚು ಪೋಷಕಾಂಶ ಸಿಗುತ್ತದೆ. ಕಾಳು ಮೆಣಸು ಕ್ಯಾಪ್ಸೈಸಿನ್ ಗುಣವನ್ನು ಹೊಂದಿದೆ. ಇದು ನೋವು ನಿವಾರಣೆಗೊಳಿಸಲು ಹೆಚ್ಚು ಸಹಾಯಕವಾಗಿದೆ. ಇದರ ಕೆಲವು ಪ್ರಮುಖ ಪ್ರಯೋಜಗಳು ಇಂತಿವೆ.

* ಕಡಿಮೆ ತೂಕ ತೂಕ ಹೆಚ್ಚಾದಂತೆ ಕಾಯಿಲೆಗಳು ಹೆಚ್ಚಾಗುತ್ತವೆ. ಒಂದು ರೀತಿ ಮುಜುಗರದಿಂದ ಓಡಾಡುವ ಪರಿಸ್ಥಿತಿ ಎದುರಾಗುತ್ತದೆ. ತೂಕ ಕಡಿಮೆ ಮಾಡಲು ಕೆಲವರು ಸಾಕಷ್ಟು ಪರದಾಡುತ್ತಾರೆ. ಎಷ್ಟೇ ಪ್ರಯತ್ನಿಸಿದರು ತೂಕ ಮಾತ್ರ ಕಡಿಮೆಯಾಗಲ್ಲ ಅಂತ ಕೊರಗುತ್ತಾರೆ. ಆದರೆ ಬಿಳಿ ಕಾಳುಮೆಣಸಿನಿಂದ ತೂಕವನ್ನು ಇಳಿಸಬಹುದು. ಬಿಳಿ ಕಾಳುಮೆಣಸಿನಲ್ಲಿ ಕ್ಯಾಪ್ಸೈಸಿನ್ ಇರುವ ಕಾರಣ ಅದು ಕೊಬ್ಬನ್ನು ಕರಗಿಸುತ್ತದೆ.

* ಕ್ಯಾನ್ಸರ್ ವಿರುದ್ಧ ಹೋರಾಟ ಕ್ಯಾನ್ಸರ್ ಅನ್ನೋ ಮಹಾಮಾರಿ ಕಾಯಿಲೆಗೆ ಹಲವರು ತುತ್ತಾಗುತ್ತಾರೆ. ಜೀವವನ್ನು ಕಸಿದುಕೊಳ್ಳುವ ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ಬಿಳಿ ಕಾಳುಮೆಣಸಿಗಿದೆ. ಅಧ್ಯಯನದ ಪ್ರಕಾರ ಕ್ಯಾಪ್ಸೈಸಿನ್ ಕ್ಯಾನ್ಸರ್ ಕಾಯಿಲೆಯನ್ನು ಹತೋಟಿಗೆ ತರುತ್ತದೆ.

* ಕೆಮ್ಮು ಗುಣವಾಗುವುದು ಅತಿಯಾದ ಕೆಮ್ಮು ಇದ್ದರೆ, ಇದಕ್ಕೆ ಉತ್ತಮ ಮೆಡಿಸಿನ್ ಬಿಳಿ ಕಾಳುಮೆಣಸು. ಕಾಳು ಮೆಣಸು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಹೀಗಾಗಿ ಬಿಳಿ ಕಾಳುಮೆಣಸನ್ನು ಸೇವಿಸಬೇಕು. ಇದರಿಂದ ಕೆಮ್ಮು, ಶೀತದಿಂದ ಸುಲಭವಾಗಿ ಪಾರಾಗಬಹುದು.

* ರಕ್ತದೊತ್ತಡ ನಿಯಂತ್ರಣ ಕಾಳು ಮೆಣಸಿನಲ್ಲಿ ಪೈಪರೈನ್ ಮತ್ತು ಫ್ಲೇವೋನಾಯ್ಡ್ ಅಂಶ ಇರುವುದರಿಂದ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ದೈನಂದಿನ ಆಹಾರದಲ್ಲಿ ಬಿಳಿ ಕಾಳುಮೆಣಸನ್ನು ಬಳಸಬಹುದು.

* ನೋವು ಕಡಿಮೆಯಾಗುವುದು ಇತ್ತೀಚೆಗೆ 30 ವರ್ಷ ದಾಟುತ್ತಿದ್ದಂತೆ ಕಾಲು ನೋವು, ಕೈ ನೋವು, ಸೊಂಟ ನೋವು ಅಂತ ರಾಗ ಶುರುವಾಗುತ್ತೆ. ಸಂಧಿ ನೋವಿಗೆ ಸೂಕ್ತ ಪರಿಹಾರ ನಿಮ್ಮ ಮನೆಯಲ್ಲೇ ಇದೆ. ಬಿಳಿ ಕಾಳುಮೆಣಸನ್ನು ಅಡುಗೆಗೆ ಬಳಸಿದರೆ ಈ ಎಲ್ಲ ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು

Health Tips: ತುಟಿ ಕಪ್ಪಾಗಿದೆಯೇ? ಇಲ್ಲಿದೆ ಪರಿಹಾರ

(Benefits of White Pepper for good health)