Weight Loss: ದೇಹದ ತೂಕ ಕಡಿಮೆಯಾದರು ತೊಡೆಯ ಭಾಗ ಇನ್ನೂ ದಪ್ಪಗೆ ಕಾಣುತ್ತಿದೆಯೇ? ಈ ವ್ಯಾಯಾಮ ಮಾಡಿ

ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲವೊಮ್ಮೆ ದೇಹದ ತೂಕ ನಷ್ಟವಾದರೂ ತೊಡೆಯ ಭಾಗ ದಪ್ಪನಾಗಿಯೇ ಕಾಣಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಚಿಂತಿಸುವ ಅಗತ್ಯವಿಲ್ಲ. ಈ ಕೆಳಗಿನ ವ್ಯಾಯಮ ಮಾಡಿ.

Weight Loss: ದೇಹದ ತೂಕ ಕಡಿಮೆಯಾದರು ತೊಡೆಯ ಭಾಗ ಇನ್ನೂ ದಪ್ಪಗೆ ಕಾಣುತ್ತಿದೆಯೇ? ಈ ವ್ಯಾಯಾಮ ಮಾಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 14, 2021 | 7:24 AM

ಹೆಚ್ಚುವರಿ ತೂಕದಿಂದ ಫಿಟ್ ಆಗಿಲ್ಲ ಎಂಬುವುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ. ಹೀಗಿರುವಾಗ ಒಂದಲ್ಲಾ ಒಂದು ರೀತಿಯಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲವೊಮ್ಮೆ ದೇಹದ ತೂಕ ನಷ್ಟವಾದರೂ ತೊಡೆಯ ಭಾಗ ದಪ್ಪನಾಗಿಯೇ ಕಾಣಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಚಿಂತಿಸುವ ಅಗತ್ಯವಿಲ್ಲ. ಈ ಕೆಳಗಿನ ವ್ಯಾಯಮ ಮಾಡಿ.

1. ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮಗಳು ನಿಮ್ಮ ತೊಡೆಯ ಊತವನ್ನು ನೀವು ಕಡಿಮೆ ಮಾಡಲು ವ್ಯಾಯಾಮದ ಮೊರೆ ಹೋಗಿ. ದಪ್ಪವಾದ ತೊಡೆಯಿರುವ ಪುರುಷರು ಮತ್ತು ಮಹಿಳೆಯರು, ಮೊದಲು ನಿಮಗೆ ಸೀಮಿತವಾಗಿರುವ ಸಮಯದಲ್ಲಿ ಯಾವ ವ್ಯಾಯಾಮ ಮಾಡಬಹುದು ಎಂಬುವುದನ್ನು ತಿಳಿಯಿರಿ. ಚರ್ಮ ಬಿಗಿಗೊಳಿಸುವ ವ್ಯಾಯಾಮ ಮಾಡುವುದು ಉತ್ತಮ.

2. ಸೀಸರ್ ಲೆಗ್ಸ್ ಪ್ಲ್ಯಾಂಕ್ (Caesar Legs Plank) ಈ ವ್ಯಾಯಾಮವನ್ನು ಮಾಡಲು ಮೊದಲು ನೀವು ನಿಮ್ಮ ಪಾದಗಳನ್ನು ನೇರವಾಗಿಸಿ. ಬಳಿಕ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಕಾಲುಗಳನ್ನು ಅಗಲವಾಗಿಸಿ. ನಂತರ ಮುಂದಕ್ಕೆ ನೋಡುತ್ತ ಒಂದು ಕಾಲನ್ನು ಎತ್ತಿ. ಹೀಗೆ ನಿರಂತರವಾಗಿ ದಿನಕ್ಕೆ 5 ನಿಮಿಷ ಮಾಡುವುದರಿಂದ ತೊಡೆ ಭಾಗದ ತೂಕ ಕಡಿಮೆಯಾಗುತ್ತದೆ.

3. ಸ್ಕ್ವೀಝ್ ಮತ್ತು ಲಿಫ್ಟ್ ( Squeeze and lift) ನಿಮ್ಮ ಕಾಲುಗಳ ನಡುವೆ ಚೆಂಡನ್ನು ಇರಿಸಿ ಮತ್ತು ನೇರವಾಗಿ ನೆಲದ ಮೇಲೆ ಮಲಗಿ. ಬಳಿಕ ನಿಧಾನವಾಗಿ ಕಾಲನ್ನು ಮೇಲಕ್ಕೆ ಎತ್ತುತ್ತ ಒಂದು ಬದಿಗೆ ಒರೆಯಾಗಿಸಿ. ತೊಡೆಯ ಭಾಗಕ್ಕೆ ಹೆಚ್ಚು ಬಲವನ್ನು ಬಿಡಿ. ಇದು ನಿಮ್ಮ ದೇಹಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ.

4. ಬಾರ್ಬೆಲ್ ಸ್ಕ್ವಾಟ್ (Barbell squat) ಈ ವ್ಯಾಯಾಮವು ನಿಮ್ಮ ತೊಡೆಗಳನ್ನು ಗುರಿಯಾಗಿಸುವ ಜತೆಗೆ ಸ್ನಾಯುಗಳ ಮೇಲೆಯೂ ಪರಿಣಾಮ ಬೀರುತ್ತದೆ. ನಿಮ್ಮ ಭುಜದ ಮೇಲೆ ಬಾರ್ಬೆಲ್ ಅನ್ನು ಹಿಡಿದುಕೊಳ್ಳಿ. ಬಳಿಕ ನಿಧಾನವಾಗಿ ಕುಳಿತಲ್ಲಿಂದ ಮೇಲಕ್ಕೆ ಏಳಿ. ಹೀಗೆ ಸ್ವಲ್ಪ ಸಮಯದವರೆಗೆ ಮಾಡುವುದರಿಂದ ತೊಡೆಯ ತೂಕ ಕಡಿಮೆಯಾಗುತ್ತದೆ.

5. ಲಂಗ್ಸ್ (Lunges) ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಇದು ಒಂದು ಶ್ರೇಷ್ಠ ಹಂತವಾಗಿದೆ. ಕಾಲನ್ನು ಅಗಲವಾಗಿಸಿ. ನಂತರ ಸೊಂಟದ ಮೇಲೆ ಕೈಗಳನ್ನು ಇರಿಸಿ. ಹೆಜ್ಜೆಯನ್ನು ಮುಂದಕ್ಕೆ ಚಾಚಿ. ಹೀಗೆ ನಿರಂತರವಾಗಿ ಮಾಡುವುದರಿಂದ ತೂಕ ಆದಷ್ಟು ಬೇಗ ಕಡಿಮೆಯಾಗುತ್ತದೆ.

ಇದನ್ನೂ ಓದಿ:

Dance Benefits: ನೃತ್ಯ ಮಾಡುವುದು ಕೇವಲ ಮನರಂಜನೆಗಲ್ಲ; ಆರೋಗ್ಯಕರ ಬದಲಾವಣೆಯಲ್ಲೂ ಇದರ ಪಾತ್ರವಿದೆ ಗಮನಿಸಿ

Weight Loss: ಗಟ್ಟಿ ಆಹಾರದ ಬದಲು ಜ್ಯೂಸ್​ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ