AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bird Flu: ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ. ಹಾಗಾದರೆ ಹಕ್ಕಿ ಜ್ವರ ಸೋಂಕಿತ ಪಕ್ಷಿಯನ್ನು ಸೇವಿಸುವುದು ಸುರಕ್ಷಿತವೇ? ಎಂಬ ಅನುಮಾನ ಜನರಲ್ಲಿ ಮೂಡಿತ್ತು. ಈ ಬಗ್ಗೆ ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಪಂಕಜ್ ಚೌಧರಿ ಅವರು ಕೆಲವು ಮಾಹಿತಿಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Bird Flu: ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jun 15, 2024 | 5:45 PM

Share

ಭಾರತದಲ್ಲಿ ಐದು ವರ್ಷಗಳ ಬಳಿಕ ವ್ಯಕ್ತಿಯೊಬ್ಬರಲ್ಲಿ ಹಕ್ಕಿಜ್ವರ(Bird Flu) ಪತ್ತೆಯಾಗಿದ್ದು ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮಂಗಳವಾರ ದೃಢಪಡಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿಗೆ ಹಕ್ಕಿ ಜ್ವರ ತಗುಲಿದ್ದು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈರಸ್‌ನಿಂದ ಬಳಲುತ್ತಿರುವ ಮಗು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕೋಳಿಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. H9N2 ವೈರಸ್‌ನಿಂದ ಉಂಟಾಗುವ ಹಕ್ಕಿ ಜ್ವರದಿಂದ ಮಾನವ ಸೋಂಕಿನ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ. ಹಾಗಾದರೆ ಹಕ್ಕಿ ಜ್ವರ ಸೋಂಕಿತ ಪಕ್ಷಿಯನ್ನು ಸೇವಿಸುವುದು ಸುರಕ್ಷಿತವೇ? ಎಂಬ ಅನುಮಾನ ಜನರಲ್ಲಿ ಮೂಡಿತ್ತು. ಈ ಬಗ್ಗೆ ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಪಂಕಜ್ ಚೌಧರಿ ಅವರು ಕೆಲವು ಮಾಹಿತಿಗಳನ್ನು ತಿಳಿಸಿದ್ದು, “ಹಕ್ಕಿ ಜ್ವರದ ಸೋಂಕಿಗೆ ಒಳಗಾದ ಪಕ್ಷಿಗಳನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು, ಆದರೂ ಪಕ್ಷಿಗಳನ್ನು ಬೇಯಿಸಿ, ಹೆಚ್ಚಿನ ಕಾಳಜಿ ವಹಿಸಿ ಸೇವನೆ ಮಾಡಬಹುದು. ಇದನ್ನು ಚೆನ್ನಾಗಿ ಬೇಯಿಸದಿದ್ದರೆ ವೈರಸ್ ಬರುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸಿ ಕೋಳಿಯನ್ನು ಸ್ವಚ್ಛಗೊಳಿಸಿದ ಮೇಲೆ ಕೈಗಳು, ಪಾತ್ರೆಗಳನ್ನು ಸ್ವಚ್ಛ ಮಾಡಬೇಕು. ಮೊಟ್ಟೆ ಬಳಸುವಾಗಲೂ ಕೂಡ ಈ ಕ್ರಮಗಳನ್ನು ಪಾಲನೆ ಮಾಡಬೇಕು” ಎಂದಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯರು ಈ ವಿಷಯಗಳನ್ನು ಪಾಲಿಸಿ, ಗರ್ಭಪಾತವನ್ನು ತಪ್ಪಿಸಿ

ರೋಗಲಕ್ಷಣಗಳೇನು?

ಹಕ್ಕಿ ಜ್ವರದಿಂದ, ಜನರಿಗೆ ಸೌಮ್ಯದಿಂದ ತೀವ್ರವಾದ ರೋಗಲಕ್ಷಣಗಳು ಕಂಡುಬರಬಹುದು, ಇದು ಸಾಮಾನ್ಯವಾಗಿ 2 ರಿಂದ 8 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ. ಶೀತ ಅಥವಾ ಮೂಗು ಕಟ್ಟುವಿಕೆ, ಗಂಟಲು ನೋವು ಮತ್ತು ಕೆಮ್ಮಿನಂತಹ ಉಸಿರಾಟದ ರೋಗಲಕ್ಷಣಗಳ ಬಗ್ಗೆ ಗಮನವಿರಲಿ. ಕೆಲವರಲ್ಲಿ ತಲೆನೋವು, ಜ್ವರ, ಸುಸ್ತು ಮತ್ತು ಸ್ನಾಯು ನೋವು, ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಜೀರ್ಣಕಾರಿ ರೋಗಲಕ್ಷಣಗಳು ಸಹ ಕಂಡುಬರಬಹುದು. ಸೋಂಕು ತೀವ್ರವಾದಾಗ, ಅದು ಅಂಗಾಂಗ ವೈಫಲ್ಯ, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಯಂತಹ ಪ್ರಮುಖ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.

*ಹಕ್ಕಿ ಜ್ವರವನ್ನು ತಡೆಗಟ್ಟಲು ಕೋಳಿ ಮತ್ತು ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ.

*ಅಡುಗೆ ಮಾಡುವಾಗ ಸ್ವಚ್ಛತೆ ಕಾಪಾಡಿಕೊಳ್ಳಲು ನಿಮ್ಮ ಕೈಗಳು, ಪಾತ್ರೆಗಳನ್ನು ಆಗಾಗ ಬಿಸಿ ನೀರಿನಿಂದ ತೊಳೆಯಿರಿ.

*ಅನಾರೋಗ್ಯ ಪೀಡಿತ ಪಕ್ಷಿಗಳು ಅಥವಾ ಕೋಳಿಗಳನ್ನು ಮುಟ್ಟಬೇಡಿ. ಆದಷ್ಟು ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:20 pm, Sat, 15 June 24