ಬ್ಲ್ಯಾಕ್ ಕಾಫಿಯಿಂದ ಆರೋಗ್ಯ ಪ್ರಯೋಜನಗಳೇನು? ಇದನ್ನು ಯಾವಾಗ ಸೇವಿಸಿದರೆ ಉತ್ತಮ?

| Updated By: Digi Tech Desk

Updated on: Aug 30, 2023 | 6:06 PM

ದಿನಕ್ಕೆ 2- 3 ಕಪ್​​​ಗಿಂತ ಹೆಚ್ಚು ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು ಮತ್ತು ನಿದ್ರೆಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಇದರಲ್ಲಿ ಕೆಫೀನ್ ಸಮೃದ್ಧವಾಗಿರುವುದರಿಂದ, ಬ್ಲ್ಯಾಕ್ ಕಾಫಿ ಸೇವನೆಯು ಆಮ್ಲೀಯತೆ, ಮಲಬದ್ಧತೆ ಮತ್ತು ನಿದ್ರೆಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಆದ್ದರಿಂದ ದಿನಕ್ಕೆ 2- 3 ಕಪ್ ಬ್ಲ್ಯಾಕ್ ಕಾಫಿಗಿಂತ ಹೆಚ್ಚು ಸೇವನೆ ಮಾಡದಿರುವುದೇ ಉತ್ತಮ.

ಬ್ಲ್ಯಾಕ್ ಕಾಫಿಯಿಂದ ಆರೋಗ್ಯ ಪ್ರಯೋಜನಗಳೇನು? ಇದನ್ನು ಯಾವಾಗ ಸೇವಿಸಿದರೆ ಉತ್ತಮ?
ಸಾಂದರ್ಭಿಕ ಚಿತ್ರ
Follow us on

ಪ್ರತಿದಿನ ಬೆಳಿಗ್ಗೆ ಸರಳ ಬ್ಲ್ಯಾಕ್ ಕಾಫಿ ( black coffee) ಕುಡಿಯುವುದು ನಿಮ್ಮ ರೂಢಿಯಾ? ಹಾಗಾದರೆ ಇದರಿಂದ ಸಿಗುವ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಇದು ಕಾಫಿ ಪ್ರಿಯರಿಗೆ ಸಿಹಿ ಸುದ್ದಿ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಪಾನೀಯವು ಆರೋಗ್ಯ ಪ್ರಯೋಜನಗಳಿಂದ ತುಂಬಿದೆ ಎಂದು ತಜ್ಞರು ತಿಳಿಸಿದ್ದಾರೆ. ಬ್ಲ್ಯಾಕ್ ಕಾಫಿ ಒಂದು ಸರಳ ಕಾಫಿಯಾಗಿದ್ದು, ಇದರಲ್ಲಿ ಕೆನೆ, ಹಾಲು ಮತ್ತು ಸಿಹಿಕಾರಕವಿಲ್ಲ. ಆದ್ದರಿಂದ, ಕ್ಯಾಲೊರಿಗಳು, ಕೊಬ್ಬು ಮತ್ತು ಸಕ್ಕರೆಯನ್ನು ಸೇರಿಸದೆ ನೀವು ಕಾಫಿಯ ಪ್ರಯೋಜನಗಳನ್ನು ಪಡೆಯುತ್ತೀರಿ.

ಬ್ಲ್ಯಾಕ್ ಕಾಫಿಯ ಪ್ರಯೋಜನಗಳು ಅಷ್ಟಿಲ್ಲವಾದರೂ, ಇದು ನಿಮಗೆ ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗೆಗಿನ ಮಾಹಿತಿ ಇಲ್ಲಿದೆ.

ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಸಿಗುವ ಆರೋಗ್ಯ ಲಾಭಗಳೇನು?

ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ. ಬ್ಲ್ಯಾಕ್ ಕಾಫಿಯ ಪ್ರಯೋಜನಗಳನ್ನು ದೃಢೀಕರಿಸಲು ನಮಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಕೆಲವು ವಿಜ್ಞಾನ ಮತ್ತು ತಜ್ಞರ ಬೆಂಬಲವಿದೆ. ಗುರುಗ್ರಾಮದ ಮರೆಂಗೊ ಏಷ್ಯಾ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯಟೆಟಿಕ್ಸ್ನ ಹಿರಿಯ ಸಲಹೆಗಾರ ಡಾ. ನೀತಿ ಶರ್ಮಾ, ಕಾಫಿಯಲ್ಲಿ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಸಹಾಯ ಮಾಡುವ ಪೋಷಕಾಂಶಗಳಿವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1. ಬ್ಲ್ಯಾಕ್ ಕಾಫಿ ಹೆಚ್ಚು ಪೌಷ್ಟಿಕವಾಗಿದೆ

ಬ್ಲ್ಯಾಕ್ ಕಾಫಿಯಲ್ಲಿ ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ 2, ವಿಟಮಿನ್ ಬಿ 3, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಸಮೃದ್ಧವಾಗಿದೆ. ಇದು ಕ್ಯಾಲೊರಿ ಮುಕ್ತ ಪಾನೀಯವಾಗಿದ್ದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಉತ್ತೇಜಿಸುತ್ತದೆ.

2. ಅಲ್ಝೈಮರ್ ಕಾಯಿಲೆಗೆ ಬ್ಲ್ಯಾಕ್ ಕಾಫಿ

ಅಲ್ಝೈಮರ್ ಕಾಯಿಲೆಯು ಮೆದುಳಿನ ಸಮಸ್ಯೆಯಾಗಿದ್ದು, ಇದು ನೆನಪು ಮತ್ತು ಆಲೋಚನಾ ಕೌಶಲಗಳನ್ನು ನಾಶಪಡಿಸುತ್ತದೆ, ಇದರಿಂದಾಗಿ ಅತ್ಯಂತ ಸರಳ ಕಾರ್ಯಗಳನ್ನು ಸಹ ನಿರ್ವಹಿಸಲು ಕಷ್ಟವಾಗುತ್ತದೆ. ಕಾಫಿ ಕುಡಿಯುವುದರಿಂದ ಅಲ್ಝೈಮರ್ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ. ಜರ್ನಲ್ ಆಫ್ ಅಲ್ಝೈಮರ್ಸ್ ಡಿಸೀಸ್ನಲ್ಲಿ ಪ್ರಕಟವಾದ ಅಧ್ಯಯನವು 2- 3 ಕಪ್ ಕಾಫಿ ಕುಡಿಯುವುದರಿಂದ ಬುದ್ಧಿಮಾಂದ್ಯತೆ ಮತ್ತು ಅಲ್ಝೈಮರ್ನ ಅಪಾಯವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಎರಡು ಕಪ್ ಕುಡಿಯುವುದರಿಂದ ಕಾಲಾನಂತರದಲ್ಲಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ. ಶರ್ಮಾ ಕೂಡ ಅದೇ ಮಾತನ್ನು ಹೇಳುತ್ತಾರೆ.

3. ತೂಕ ಇಳಿಸಿಕೊಳ್ಳಲು ಬ್ಲ್ಯಾಕ್ ಕಾಫಿ

ನಿಯಮಿತವಾಗಿ ಬ್ಲ್ಯಾಕ್ ಕಾಫಿಯನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹಾರ್ವರ್ಡ್ ಟಿ .ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಧ್ಯಯನವು ತೂಕ ನಷ್ಟದ ಮೇಲೆ ಬ್ಲ್ಯಾಕ್ ಕಾಫಿ ಸೇವನೆಯಿಂದ ಸಕಾರಾತ್ಮಕ ಪರಿಣಾಮಗಳಿವೆ ಎಂದು ಕಂಡು ಹಿಡಿದಿದೆ. ಇದು ಕ್ಲೋರೊಜೆನಿಕ್ ಆಮ್ಲಗಳನ್ನು ಹೊಂದಿರುತ್ತದೆ, ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಗ್ಲೂಕೋಸ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ, ಹೊಸ ಕೊಬ್ಬಿನ ಕೋಶ ರಚನೆಯನ್ನು ಕಡಿಮೆ ಮಾಡುತ್ತದೆ ಆದ್ದರಿಂದ ತೂಕ ನಷ್ಟಕ್ಕೆ ಇದು ಮುಖ್ಯವಾಗಿದೆ ಎಂದು ತಜ್ಞರು ವಿವರಿಸುತ್ತಾರೆ. ಜೊತೆಗೆ, ನೀವು ಯಾವುದೇ ಸಕ್ಕರೆಯನ್ನು ಸೇರಿಸದಿದ್ದರೆ ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.

4. ವ್ಯಾಯಾಮಕ್ಕೆ ಮೊದಲು ಬ್ಲ್ಯಾಕ್ ಕಾಫಿ ಕುಡಿಯುವುದು ಉತ್ತಮ

ಜಿಮ್ ಗೆ ಹೋಗುವ ಮೊದಲು ಬ್ಲ್ಯಾಕ್ ಕಾಫಿ ಕುಡಿಯುವುದು ನಿಮ್ಮ ವ್ಯಾಯಾಮದ ಪರಿಣಾಮಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೇಗೆ ಎನ್ನುತ್ತೀರಾ? ವ್ಯಾಯಾಮಕ್ಕೆ ಮೊದಲು ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಶಕ್ತಿಯ ಮಟ್ಟ ಹೇಗೆ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ವ್ಯಾಯಾಮಕ್ಕೆ ಮೊದಲು ಬ್ಲ್ಯಾಕ್ ಕಾಫಿ ಆಯಾಸವನ್ನು ಕಡಿಮೆ ಮಾಡುವ ಮೂಲಕ ಏಕಾಗ್ರತೆಯ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಪುರಾವೆಗಳ ಮೂಲಕ ತಿಳಿಸಿದ್ದಾರೆ. ಇದು ವ್ಯಾಯಾಮದ ಸಮಯದಲ್ಲಿ ನಿಮ್ಮ ಜಾಗರೂಕತೆಯ ಮಟ್ಟವನ್ನು ಹೆಚ್ಚಿಸುತ್ತದೆ ಆದ್ದರಿಂದ ವ್ಯಾಯಾಮಕ್ಕೆ ಮೊದಲು ಇದನ್ನು ಸೇವಿಸುವುದು ಒಳ್ಳೆಯದು.

5. ಮಧುಮೇಹಕ್ಕೆ ಬ್ಲ್ಯಾಕ್ ಕಾಫಿ

ಡಯಾಬೆಟೊಲೊಜಿಯಾ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ನಿಮ್ಮ ಕಾಫಿ ಸೇವನೆಯನ್ನು ಒಂದು ಕಪ್ ಗಿಂತ ಹೆಚ್ಚಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಶರ್ಮಾ ಹೇಳುತ್ತಾರೆ.

6. ಮಾನಸಿಕ ಜಾಗರೂಕತೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ

ಒಂದು ಕಪ್ ಬ್ಲ್ಯಾಕ್ ಕಾಫಿ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಒಂದು ಕಪ್ ಬ್ಲ್ಯಾಕ್ ಕಾಫಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಾನಸಿಕ ಜಾಗರೂಕತೆಯನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಮುಂದಿನ ಬಾರಿ ನಿಮ್ಮ ಮೂಡ ಆಫ್ ಆಗಿದ್ದಾಗ ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿಯಲು ಪ್ರಯತ್ನಿಸಿ.

ಇದನ್ನೂ ಓದಿ:ನೀವು ಬ್ಲ್ಯಾಕ್ ಕಾಫಿ ಕೇಳಿರಬಹುದು, ಇದೇನಿದು ಗ್ರೀನ್ ಕಾಫಿ, ಇದು ಆರೋಗ್ಯಕ್ಕೆ ಉತ್ತಮವೇ? ಹಾನಿಕರವೇ?

ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು?

ದಿನಕ್ಕೆ 2- 3 ಕಪ್ ಗಿಂತ ಹೆಚ್ಚು ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು ಮತ್ತು ನಿದ್ರೆಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಇದರಲ್ಲಿ ಕೆಫೀನ್ ಸಮೃದ್ಧವಾಗಿರುವುದರಿಂದ, ಬ್ಲ್ಯಾಕ್ ಕಾಫಿ ಸೇವನೆಯು ಆಮ್ಲೀಯತೆ, ಮಲಬದ್ಧತೆ ಮತ್ತು ನಿದ್ರೆಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಆದ್ದರಿಂದ ದಿನಕ್ಕೆ 2- 3 ಕಪ್ ಬ್ಲ್ಯಾಕ್ ಕಾಫಿಗಿಂತ ಹೆಚ್ಚು ಸೇವನೆ ಮಾಡದಿರುವುದೇ ಉತ್ತಮ.

ನೀವು ಯಾವಾಗ ಕಾಫಿ ಕುಡಿಯಬೇಕು?

ತಜ್ಞರು ಬೆಳಿಗ್ಗೆ ಅಥವಾ ಹಗಲಿನಲ್ಲಿ ಬ್ಲ್ಯಾಕ್ ಕಾಫಿ ಕುಡಿಯಲು ಶಿಫಾರಸು ಮಾಡುತ್ತಾರೆ. ನಿಮ್ಮ ವ್ಯಾಯಾಮಕ್ಕೆ ಸ್ವಲ್ಪ ಮೊದಲು ನೀವು ಬ್ಲ್ಯಾಕ್ ಕಾಫಿಯನ್ನು ಸಹ ಕುಡಿಯಬಹುದು. ಆದರೆ ರಾತ್ರಿ ಮಲಗುವ ಮೊದಲು ನೀವು ಬ್ಲ್ಯಾಕ್ ಕಾಫಿ ಕುಡಿಯುವುದನ್ನು ತಪ್ಪಿಸಬೇಕು ಏಕೆಂದರೆ ಅದು ನಿಮಗೆ ಹಾನಿಕಾರಕವೆಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 30 August 23