
ಪ್ರತಿಯೊಬ್ಬ ಮನುಷ್ಯನ ದೇಹದ ಪ್ರತಿಯೊಂದು ಅಂಗದ ಆರೋಗ್ಯವೂ ಮುಖ್ಯವಾಗಿರುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಆರೋಗ್ಯದಲ್ಲಿ ಬದಲಾವಣೆಗಳು ಆಗುವುದು ಹೆಚ್ಚು. ಇನ್ನು ಪುರುಷರ ಆರೋಗ್ಯದಲ್ಲಿ ಹೆಚ್ಚಿನ ಬದಲಾವಣೆ ಆಗುತ್ತದೆ. ಪುರುಷರು ನಿಮಿರುವಿಕೆ ಸಮಸ್ಯೆಯಿಂದ (erectile dysfunction) ಹೆಚ್ಚಾಗಿ ಬಳಲುತ್ತಿರುತ್ತಾರೆ. ಇದರಿಂದ ಅವರ ವೈಯಕ್ತಿಕ ಆರೋಗ್ಯಕ್ಕೆ ತುಂಬಾ ತೊಂದರೆ ಇದೆ. ಇದು ಸಂತಾನಕ್ಕೆ ಹೆಚ್ಚಿನ ಪೆಟ್ಟು ನೀಡುತ್ತದೆ. ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಈಗಿನ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ವಯಸ್ಸು ಅಥವಾ ಕಾರ್ಯಕ್ಷಮತೆಯಿಂದ ಬರುವುದಲ್ಲ, ಆದರೆ ಇದು ಹೃದ್ರೋಗದ (heart attack) ಆರಂಭಿಕ ಸೂಚಕ. ಆರೋಗ್ಯ ತಜ್ಞ ಪ್ರಶಾಂತ್ ದೇಸಾಯಿ ಅವರ ಇನ್ಸ್ಟಾದಲ್ಲಿ ನಿಮಿರುವಿಕೆಗಳು ನಿಮ್ಮ ಹೃದಯಾಘಾತದ ಅಪಾಯವನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ. ಪದೇ ಪದೇ ನಿಮಿರುವಿಕೆ ಕಂಡರೆ ಅದು ರಕ್ತನಾಳ ತೊಂದರೆಗೆ ಒಳಗಾಗಿವೆ ಎಂದರ್ಥ. ಒಟ್ಟಿನಲ್ಲಿ ನಿಮಿರುವಿಕೆ ಒಂದಕ್ಕೊಂದು ಅನಾರೋಗ್ಯದ ಸಂಪರ್ಕವನ್ನು ಸಾಧಿಸುತ್ತದೆ. ರಕ್ತದ ಹರಿವು = ಹೃದಯದ ಆರೋಗ್ಯ = ಹಾಸಿಗೆ ಸಾಮರ್ಥ್ಯ ಹೀಗೆ ಸಂಪರ್ಕವನ್ನು ಉಂಟು ಮಾಡುತ್ತದೆ. ಈ ಬಗ್ಗೆ indianexpress ವರದಿ ಮಾಡಿದೆ
ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಮತ್ತು ಹೃದಯ ಸಮಸ್ಯೆಗೂ ಒಂದಕ್ಕೊಂದು ಸಂಬಂಧ ಇದೆ. ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಮೊದಲ ಬರುವ ಸಮಸ್ಯೆ ಹೃದಯರಕ್ತನಾಳದ ಕಾಯಿಲೆ. ಯಾಕೆಂದರೆ ಶಿಶ್ನದಲ್ಲಿನ ಅಪಧಮನಿಗಳು ಹೃದಯದಲ್ಲಿರುವ ಅಪಧಮನಿಗಳಿಗಿಂತ ಚಿಕ್ಕದಾಗಿರುತ್ತವೆ. ಆದ್ದರಿಂದ ಪ್ಲೇಕ್ ನಿರ್ಮಾಣ ಅಥವಾ ಅಪಧಮನಿ ಹಾನಿಯಿಂದಾಗಿ ರಕ್ತದ ಹರಿವು ಕಡಿಮೆಯಾಗುವುದು. ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಅನುಭವಿಸುವ ಪುರುಷರು ಮುಂದಿನ 3 ರಿಂದ 5 ವರ್ಷಗಳಲ್ಲಿ ಹೃದ್ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆ ಕಾರಣದಿಂದ ಈಗಾಲೇ ಈ ಬಗ್ಗೆ ಎಚ್ಚರ ವಹಿಸಿ. ಭವಿಷ್ಯದಲ್ಲಿ ಹೃದಯಾಘಾತ ಅಥವಾ ಇತರ ಹೃದಯರಕ್ತನಾಳದ ಸಮಸ್ಯೆಗಳು ಬರಬಹುದು.
ಆರೋಗ್ಯ ತಜ್ಞ ಡಾ. ಚೌಧರಿ ಅವರ ಪ್ರಕಾರ, ಶಾರೀರಿಕ ಸಂಪರ್ಕವು ರಕ್ತನಾಳಗಳು ಮತ್ತು ಎಂಡೋಥೀಲಿಯಂ ಅಂದರೆ ರಕ್ತನಾಳಗಳ ಒಳ ಪದರದ ಆರೋಗ್ಯ ಬಗ್ಗೆ ತಿಳಿಸುತ್ತದೆ. ನಿಮಿರುವಿಕೆಯು ಶಿಶ್ನಕ್ಕೆ ಉತ್ತಮ ರಕ್ತದ ಹರಿವನ್ನು ಅವಲಂಬಿಸಿರುತ್ತದೆ. ಇದಕ್ಕೆ ಆರೋಗ್ಯಕರ, ಹೊಂದಿಕೊಳ್ಳುವ ಅಪಧಮನಿಗಳು ಬೇಕಾಗುತ್ತವೆ. ಎಂಡೋಥೀಲಿಯಲ್ ಕೋಶಗಳ ಒಳ ಪದರವು ನೈಟ್ರಿಕ್ ಆಕ್ಸೈಡ್‌ನ ಅಣುಗಳನ್ನು ಸೃಷ್ಟಿ ಮಾಡುತ್ತದೆ. ಈ ಅಣುವು ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗುತ್ತದೆ. ರಕ್ತನಾಳಗಳ ಈ ಹಿಗ್ಗುವಿಕೆ ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಕಾರಣವಾಗುತ್ತದೆ.
ಈ ವೇಳೆ ಕೆಲವೊಮ್ಮೆ ಈ ಎಂಡೋಥೀಲಿಯಲ್ ಕೋಶಗಳು ಅಸಮರ್ಥವಾಗುತ್ತವೆ. ನೈಟ್ರಿಕ್ ಆಕ್ಸೈಡ್ ಲಭ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ಅಪಧಮನಿ ಹೃದಯರಕ್ತನಾಳದ ಸಮಸ್ಯೆ ಉಂಟಾಗುತ್ತದೆ. ಆಗ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಮತ್ತು ಶಿಶ್ನ ಎರಡರ ಮೇಲೂ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಅಥವಾ ಮಧುಮೇಹದಂತಹ ಪರಿಸ್ಥಿತಿಗಳಿಂದಾಗಿ ರಕ್ತನಾಳಗಳು ಹಾನಿಗೊಳಗಾಗಿದ್ದರೆ ಅಥವಾ ಉಬ್ಬಿಕೊಂಡರೆ, ಅದು ಶಿಶ್ನ ಸೇರಿದಂತೆ ಒಟ್ಟಾರೆ ರಕ್ತಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಮಕ್ಕಳನ್ನು ಚುರುಕಾಗಿಸುತ್ತದೆ
ಒಬ್ಬ ಪುರುಷನು ನಿರಂತರ ನಿಮಿರುವಿಕೆಯ ಅಸಾಮಾನ್ಯ ಕ್ರಿಯೆಯನ್ನು ಅನುಭವಿಸಿದರೆ, ವಿಶೇಷವಾಗಿ ಅವನಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಅಥವಾ ಧೂಮಪಾನದಂತಹ ಸಮಸ್ಯೆಗಳು ಸೃಷ್ಟಿಯಾದಾಗ ಹೃದ್ರೋಗ ತಜ್ಞರನ್ನು ಭೇಟಿ ಮಾಡುವುದು ಉತ್ತಮ.
ಆರೋಗ್ಯ ಸಮಸ್ಯೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Fri, 2 May 25