ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಿಂಪಲ್ ಮನೆಮದ್ದು.. ಒಂದು ವಾರದಲ್ಲಿ ಗ್ಯಾರಂಟಿ ಫಲಿತಾಂಶ!

ಮೆಂತ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಆ ನೀರನ್ನು ಮುಂಜಾನೆಯೇ ಕುಡಿಯಿರಿ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಿಂಪಲ್ ಮನೆಮದ್ದು.. ಒಂದು ವಾರದಲ್ಲಿ ಗ್ಯಾರಂಟಿ ಫಲಿತಾಂಶ!
ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಿಂಪಲ್ ಮನೆಮದ್ದು
Follow us
ಸಾಧು ಶ್ರೀನಾಥ್​
|

Updated on: Jul 08, 2023 | 2:30 PM

ಈಗಿನದು ಗ್ಯಾರಂಟಿಗಳ ಜಮಾನಾ, ಆದರೆ ಯಾವುದೂ ಗ್ಯಾರಂಟಿ ಇಲ್ಲ ಅನ್ನುವುದೊಂದೇ ಗ್ಯಾರಂಟಿ. ಇನ್ನು ಆರೋಗ್ಯಕ್ಕೆ ಈ ಗ್ಯಾರಂಟಿಯನ್ನು ವಿಸ್ತರಿಸಿದಾಗ… ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಿಂಪಲ್ ಮನೆಮದ್ದುಗಳು ಇಲ್ಲಿವೆ.. ಒಂದು ವಾರದಲ್ಲಿ ಗ್ಯಾರಂಟಿ ಫಲಿತಾಂಶ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ! ಕೊನೆಗೆ ಅದು ಅವರವರ ದೇಹ ಪ್ರಕೃತಿಗೆ ಬಿಟ್ಟಿದ್ದು ಎಂದು ಹೇಳುತ್ತಾ… ಮನೆಮದ್ದುಗಳ ಬಗ್ಗೆ ನೋಡೋಣಾ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಮಾನ್ಯವಾಗಿದೆ. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ನಮ್ಮ ನಮ್ಮ ಮನೆಯಲ್ಲಿ ಹಲವು ವಿಧಾನಗಳು ಮತ್ತು ಸರಳೋಪಾಯಗಳು ಇಲ್ಲಿವೆ. ಇದರಲ್ಲಿ ವಿಶೇಷವಾಗಿ ಹಾಗಲಕಾಯಿ ಮಧುಮೇಹಕ್ಕೆ ತುಂಬಾ ಒಳ್ಳೆಯದು. ಹಾಗಲಕಾಯಿಯಲ್ಲಿ ಕ್ಯಾರೋಟಿನ್ ಮತ್ತು ಮೊಮೊರೆಸಿನ್ ಇರುತ್ತದೆ. ಈ ಎರಡೂ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಹಾಗಲಕಾಯಿ ರಸವನ್ನು ಸೇವಿಸುವುದು ಒಳ್ಳೆಯದು.

ಮಧುಮೇಹ ಪೀಡಿತರಿಗೆ ಏಪ್ರಿಕಾಟ್ ಮತ್ತೊಂದು ಅದ್ಭುತ. ಇದು ಋತುಮಾನದ ಹಣ್ಣು. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಸಕ್ಕರೆ ಪೀಡಿತರಿಗೆ ಏಪ್ರಿಕಾಟ್ ಬೀಜದ ಪುಡಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಅಲ್ಲದೆ, ಶುಂಠಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ದೇಹವನ್ನು ಸಮತೋಲನಗೊಳಿಸುತ್ತದೆ. ಹಾಗಾಗಿ ಪ್ರತಿದಿನ ಶುಂಠಿ ಹಾಕಿ ಕುದಿಸಿದ ನೀರನ್ನು ಕುಡಿಯುವುದು ಉತ್ತಮ ಅಭ್ಯಾಸ.

ಮೆಂತ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಆ ನೀರನ್ನು ಮುಂಜಾನೆಯೇ ಕುಡಿಯಿರಿ. ನೀವು ಇದನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ನೀವು ಗಮನಿಸಬಹುದು. ಅಲ್ಲದೆ, ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಹೆಚ್ಚು ಸೇರಿಸುವುದು ಸಹ ಪ್ರಯೋಜನಕಾರಿಯಾಗಿದೆ. ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಇದು ಅಧಿಕ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇವುಗಳಲ್ಲದೆ, ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳು ಸಹ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರಾಣಾಯಾಮವು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.