Breast Feeding Awareness Week: ಸ್ತನ್ಯಪಾನದ ಬಗ್ಗೆ ತಾಯಂದಿರು ತಿಳಿಯಬೇಕಾದ ಪ್ರಮುಖ ಅಂಶಗಳು

ಹೊಸ ತಾಯಂದಿರಿಗೆ ಆಗಾಗ್ಗೆ ಬಹಳಷ್ಟು ಜವಾಬ್ದಾರಿಗಳು ಬರುತ್ತವೆ. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ಕೆಲವೊಮ್ಮೆ ಅನುಭವಗಳು ಬೇಕಾಗುತ್ತವೆ.

Breast Feeding Awareness Week:  ಸ್ತನ್ಯಪಾನದ ಬಗ್ಗೆ ತಾಯಂದಿರು ತಿಳಿಯಬೇಕಾದ ಪ್ರಮುಖ ಅಂಶಗಳು
Dr Krishna Prasad
Follow us
TV9 Web
| Updated By: ನಯನಾ ರಾಜೀವ್

Updated on: Aug 04, 2022 | 11:22 AM

ಹೊಸ ತಾಯಂದಿರಿಗೆ ಆಗಾಗ್ಗೆ ಬಹಳಷ್ಟು ಜವಾಬ್ದಾರಿಗಳು ಬರುತ್ತವೆ. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ಕೆಲವೊಮ್ಮೆ ಅನುಭವಗಳು ಬೇಕಾಗುತ್ತವೆ. ವಿಶೇಷವಾಗಿ ಸ್ತನ್ಯಪಾನ ಸೇರಿದಂತೆ ನೀವು ಹೊಸದಾಗಿ ಮಾಡುತ್ತಿರುವ ವಿಷಯಗಳ ಬಗ್ಗೆ ಅನುಭವ ಬೇಕಾಗುತ್ತದೆ.

ಸ್ತನ್ಯಪಾನವು ಮಗು ಮತ್ತು ತಾಯಿ ಇಬ್ಬರಿಗೂ ಅತ್ಯಂತ ಪ್ರಯೋಜನಾಕಾರಿಯಾಗಿರುತ್ತದೆ. ಎದೆಹಾಲು ಮಗುವನ್ನು ವಿವಿಧ ಅಲರ್ಜಿಗಳು ಮತ್ತು ರೋಗಗಳಿಂದ ರಕ್ಷಣೆ ನೀಡುವುದರ ಜೊತೆಗೆ ಮಗುವಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀಡುತ್ತದೆ.

ಇದರಲ್ಲಿ ವಿಟಮಿನ್ ಗಳು, ಪ್ರೊಟೀನ್ ಮತ್ತು ಕೊಬ್ಬಿನ ಅಂಶಗಳ ಸಮ್ಮಿಳಿತವಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ನೆರವಾಗುತ್ತದೆ. ಇದರಲ್ಲಿ ಇರುವ ಆಂಟಿಬಾಡೀಸ್ ವೈರಸ್ ಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಂತಹ ರೋಗನಿರೋಧಕ ಶಕ್ತಿಯನ್ನು ಉತ್ಪತ್ತಿ ಮಾಡುವ ಗುಣವನ್ನು ಹೊಂದಿವೆ.

ವಿಶ್ವ ಆರೋಗ್ಯ ಸಂಸ್ಥೆ- WHO ಪ್ರಕಾರ ತಾಯಿಯು ತನ್ನ ನವಜಾತ ಶಿಶುವಿಗೆ ಕನಿಷ್ಠ 6 ತಿಂಗಳವರೆಗೆ ಸ್ತನ್ಯಪಾನ ಮಾಡಿಸಬೇಕು. ನಂತರದ ದಿನಗಳಲ್ಲಿ ಕ್ರಮೇಣವಾಗಿ ಘನ ಆಹಾರವನ್ನು ನೀಡಬೇಕು. ಸ್ತನ್ಯಪಾನವನ್ನು 2 ವರ್ಷಗಳವರೆಗೆ ಮುಂದುವರಿಸಬಹುದಾಗಿದೆ.

ಅವಧಿಗೆ ಮುನ್ನ ಜನಿಸಿದ ಮಗುವಿಗೆ ಸ್ತನ್ಯಪಾನ

ಅವಧಿಗೆ ಮುನ್ನ ಜನಿಸಿದ ಮಕ್ಕಳು ರೋಗಗಳು ಮತ್ತು ಅಲರ್ಜಿಗಳಿಂದ ಹೆಚ್ಚು ತುತ್ತಾಗುತ್ತವೆ ಮತ್ತು ಇಂತಹ ಆರೋಗ್ಯ ಸಂಕೀರ್ಣತೆಗಳಿಂದ ಎದೆಹಾಲು ರಕ್ಷಣೆ ನೀಡುತ್ತದೆ. ಆದರೆ, ಇಂತಹ ಮಕ್ಕಳು ತುಂಬಾ ಎಳೆಯವರಾಗಿದ್ದು, ತಮ್ಮ ಸ್ವಂತ ಶಕ್ತಿಯಿಂದ ಎದೆ ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಮಗುವಿಗೆ ಹಾಲುಣಿಸಲು ನೀವು ನಿಮ್ಮ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ನೆರವನ್ನು ಪಡೆಯಿರಿ. ಅವರು ಮಗುವಿಗೆ ಇಂಟ್ರಾವೆನ್ಯುವಸ್ಲಿ ಅಥವಾ ಕೊಳವೆ(ಟ್ಯೂಬ್) ಮೂಲಕ ಅಥವಾ ನೇರವಾಗಿ ಬಾಯಿಯ ಮೂಲಕ ಹಾಲುಣಿಸುವರು. ಮಗುವು ಯಾವ ಸಂಕೀರ್ಣತೆಯಲ್ಲಿದೆ ಎಂಬುದರ ಆಧಾರದಲ್ಲಿ ಈ ಹಾಲುಣಿಸುವ ಮಾದರಿಗಳು ಅವಲಂಬಿತವಾಗಿರುತ್ತವೆ.

ಹಾಲುಣಿಸುವ ತಜ್ಞರೊಂದಿಗೆ ಸಮಾಲೋಚನೆ

ಸ್ತನ್ಯಪಾನದ ಬಗ್ಗೆ ವಿವಿಧ ದೃಷ್ಟಿಕೋನಗಳಿಂದ ಸರಿಯಾದ ಮಾರ್ಗದರ್ಶನ ಪಡೆಯುವುದು ಅತ್ಯಗತ್ಯವಾಗಿದೆ. ಸ್ತನ್ಯಪಾನದ ಬಗ್ಗೆ ಹೊಸ ತಾಯಂದಿರಿಗೆ ಅನೇಕ ಅನುಮಾನಗಳು ಇರುತ್ತವೆ. ಅವರ ಎಲ್ಲಾ ಪ್ರಶ್ನೆಗಳಿಗೆ ಹಾಲುಣಿಸುವ ತಜ್ಞರು ಉತ್ತರ ನೀಡಲಿದ್ದಾರೆ.

ಹಾಲುಣಿಸುವ ಕನ್ಸಲ್ಟೆಂಟ್ ಒಬ್ಬ ಆರೋಗ್ಯ ವೃತ್ತಿಪರರಾಗಿದ್ದು, ಅವರು ಸ್ತನ್ಯಪಾನದ ಬಗ್ಗೆ ಪರಿಣತಿಯನ್ನು ಹೊಂದಿರುತ್ತಾರೆ. ಹಾಲುಣಿಸುವ ಪರಿಣತರು ಹಾಲುಣಿಸಲು ಆಯ್ಕೆ ಮಾಡಿಕೊಳ್ಳುವ ತಾಯಂದಿರಿಗೆ ಸೂಕ್ತ ಸಲಹೆ, ಬೆಂಬಲ ಮತ್ತು ಮಾರ್ಗದರ್ಶನ ನೀಡುತ್ತಾರೆ. ಮಕ್ಕಳು ಜನಿಸಿದ ಕೆಲವು ವಾರಗಳವರೆಗೆ ತಮ್ಮ ಸಾಮರ್ಥ್ಯದಿಂದ ನಿಮ್ಮ ಸ್ತನದಿಂದ ಹಾಲು ಕುಡಿಯುವುದನ್ನು ಕಲಿಯಬೇಕಿರುತ್ತದೆ.

ಈ ಸಂದರ್ಭದಲ್ಲಿ ಹಾಲುಣಿಸುವ ತಜ್ಞರು ನಿಮಗೆ ನೆರವಾಗುತ್ತಾರೆ. ಈ ಹಿನ್ನೆಲೆಯಲ್ಲಿ ನೀವು ಗರ್ಭಾವಸ್ಥೆಯಲ್ಲಿ ಹಾಲುಣಿಸುವ ಸಲಹೆಗಾರರನ್ನು ಭೇಟಿ ಮಾಡಬಹುದು ಅಥವಾ ಸಮಾಲೋಚನೆ ನಡೆಸಬಹುದು.

ಮಗುವಿಗೆ ಜನ್ಮ ನೀಡಿದ ನಂತರ ಸ್ತನ್ಯಪಾನದ ಹಲವು ವಾರಗಳ ನಂತರ ಅಥವಾ ಸ್ತನ್ಯಪಾನದ ಹಲವಾರು ತಿಂಗಳ ನಂತರವೂ ನೀವು ತಜ್ಞರು ಭೇಟಿ ಮಾಡಿ ಅವರ ಮಾರ್ಗದರ್ಶನ ಪಡೆಯಬಹುದು.

ಹಾಲು ಪೂರೈಕೆ, ನೋಯುತ್ತಿರುವ ಮೊಲೆ ತೊಟ್ಟುಗಳು ಮತ್ತು ಸ್ತನ್ಯಪಾನದ ಸ್ಥಾನಗಳು ಸೇರಿದಂತೆ ಇನ್ನಿತರೆ ಹಾಲುಣಿಸುವ ಸಮಸ್ಯೆಗಳಿಗೆ ಹಾಲುಣಿಸುವ ಸಲಹೆಗಾರರು ನಿಮಗೆ ಸಹಾಯ ಮಾಡಬಹುದು.

ನಿರ್ಣಯ: ಸ್ತನ್ಯಪಾನವು ನಿಮ್ಮ ಪುಟ್ಟ ಮಗು ಪಡೆಯಬಹುದಾದ ಅತ್ಯುತ್ತಮ ಪೋಷಣೆಯಾಗಿದೆ. ಅದರ ಪ್ರಯೋಜನಗಳ ಬಗ್ಗೆ ಅಮ್ಮಂದಿರುವ ತಿಳಿದಿರುವುದು ಮುಖ್ಯವಾಗಿರುತ್ತದೆ. ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಸರಿಯಾದ ಮಾರ್ಗದರ್ಶನವನ್ನು ಪಡೆಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಲೇಖಕರು: ಡಾ.ಕೃಷ್ಣಪ್ರಸಾದ್ ಜೆ.ಆರ್, ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್, ಮದರ್ ಹುಡ್ ಹಾಸ್ಪಿಟಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ