Cauliflower Side Effects: ಹೂಕೋಸಿನಿಂದ ತಯಾರಿಸಿದ ಬಗೆ ಬಗೆಯ ಖಾದ್ಯಗಳ ಚಪ್ಪಿರಿಸುವ ಮುನ್ನ ಈ ವಿಷಯಗಳು ಗಮನದಲ್ಲಿರಲಿ
ಹೂಕೋಸಿನಿಂದ ಮಾಡಿದ ಅಡುಗೆಯನ್ನು ಚಪ್ಪರಿಸುವ ಮುನ್ನ ಒಮ್ಮೆ ಆಲೋಚನೆ ಮಾಡಲೇಬೇಕು. ಕಡಿಮೆ ವೆಚ್ಚದಲ್ಲಿ ಉತ್ತಮ ಪೋಷಕಾಂಶಯುಕ್ತ ಆಹಾರ ಸಿಗುತ್ತದೆ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.
ಹೂಕೋಸಿನಿಂದ ಮಾಡಿದ ಅಡುಗೆಯನ್ನು ಚಪ್ಪರಿಸುವ ಮುನ್ನ ಒಮ್ಮೆ ಆಲೋಚನೆ ಮಾಡಲೇಬೇಕು. ಕಡಿಮೆ ವೆಚ್ಚದಲ್ಲಿ ಉತ್ತಮ ಪೋಷಕಾಂಶಯುಕ್ತ ಆಹಾರ ಸಿಗುತ್ತದೆ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಆದರೆ ಹೂಕೋಸು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಕೆಲವರಿಗೆ ತೊಂದರೆ ಕೊಡುವುದಂತೂ ಸತ್ಯ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಖಂಡಿತವಾಗಿಯೂ ಹೂಕೋಸು ತ್ಯಜಿಸಬೇಕು ಎಂದು ತಜ್ಞರು ಹೇಳುತ್ತಾರೆ. ಯಾವುದೇ ಸಮಸ್ಯೆಗಳಿಂದ ಬಳಲುತ್ತಿರುವವರು ಹೂಕೋಸುಗಳಿಂದ ದೂರವಿರಬೇಕು.
* ಬಿಪಿ ಅಥವಾ ರಕ್ತ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಹೂಕೋಸು ಸೇವಿಸುವುದನ್ನು ತಪ್ಪಿಸಬೇಕು ಎನ್ನುತ್ತಾರೆ ತಜ್ಞರು. ಹೂಕೋಸು ತಿನ್ನುವುದರಿಂದ ರಕ್ತ ದಪ್ಪವಾಗುತ್ತದೆ. ಆದ್ದರಿಂದ ಅವರು ಹೂಕೋಸುಗಳಿಂದ ದೂರವಿರುವುದು ಉತ್ತಮ.
* ಕೀಲು ನೋವು, ಉರಿ, ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಹೂಕೋಸು ಸೇವಿಸಬಾರದು. ಇದರಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
* ಹಾಲುಣಿಸುವ ತಾಯಂದಿರು ಯಾವುದೇ ಸಂದರ್ಭದಲ್ಲಿ ಹೂಕೋಸು ತೆಗೆದುಕೊಳ್ಳಬಾರದು. ಇದರಿಂದ ಹಾಲು ಕುಡಿದ ಮಕ್ಕಳಿಗೆ ಹೊಟ್ಟೆನೋವು ಬರಬಹುದು ಎನ್ನುತ್ತಾರೆ ತಜ್ಞರು.
* ಗ್ಯಾಸ್, ಉಬ್ಬುವುದು, ಅಸಿಡಿಟಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ಹೂಕೋಸು ಸೇವಿಸಬಾರದು. ಇವುಗಳಲ್ಲಿರುವ ಕಾರ್ಬೋಹೈಡ್ರೇಟ್ ಸುಲಭವಾಗಿ ಜೀರ್ಣವಾಗುವುದಿಲ್ಲ ಹೀಗಾಗಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು.
* ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಹೂಕೋಸುಗಳನ್ನು ಸಹ ತ್ಯಜಿಸಬೇಕು. ಇದು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ ಮತ್ತು ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.
* ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಹೂಕೋಸು ತಿನ್ನಬಾರದು. ಹೂಕೋಸು T3 ಮತ್ತು T4 ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಸಮಸ್ಯೆ ಹೆಚ್ಚಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ