ಊಟದ ನಂತರ ಏಲಕ್ಕಿ ಜಗಿಯುವುದ್ರಿಂದ ಇದೆ ಆರೋಗ್ಯ ಪ್ರಯೋಜನಗಳು
ಸಾಮಾನ್ಯವಾಗಿ ಕೆಲವರಿಗೆ ಊಟವಾದ ಬಳಿಕ ಏಲಕ್ಕಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಉದ್ದೇಶದಿಂದ ಪ್ರಾಚೀನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಅಭ್ಯಾಸಗಳಲ್ಲಿ ಒಂದು. ಆದರೆ ಇದರ ಹತ್ತಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂಬಾರ ಪದಾರ್ಥಗಳ ರಾಣಿ ಎಂದೇ ಪ್ರಸಿದ್ಧಿಯಾಗಿರುವ ಏಲಕ್ಕಿಯೂ (cardamom) ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಈ ಏಲಕ್ಕಿಯ ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿಯನ್ನು ಸಿಹಿ ತಿನಿಸುಗಳು, ಮಸಾಲೆಯುಕ್ತ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಊಟದ ನಂತರ ಏಲಕ್ಕಿಯನ್ನು ಜಗಿಯುವ ಅಭ್ಯಾಸದಿಂದ ನೀವು ಈ ಆರೋಗ್ಯ ಲಾಭಗಳನ್ನು (health benefits) ಪಡೆಯಬಹುದಾಗಿದೆ.
ಊಟದ ಬಳಿಕ ಏಲಕ್ಕಿ ಸೇವನೆಯ ಆರೋಗ್ಯ ಪ್ರಯೋಜನಗಳು
ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ: ಏಲಕ್ಕಿ ನೈಸರ್ಗಿಕ ಬಾಯಿಯ ಫ್ರೆಶ್ನರ್ ಆಗಿದ್ದು, ಏಲಕ್ಕಿಯನ್ನು ಅಗಿಯುವುದರಿಂದ ಲಾಲಾರಸವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಗುಣವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುತ್ತದೆ: ಏಲಕ್ಕಿಯ ನೈಸರ್ಗಿಕ ಸಿಹಿ ಮತ್ತು ಸ್ವಲ್ಪ ಖಾರದ ರುಚಿಯನ್ನು ಹೊಂದಿದೆ. ಊಟದ ನಂತರ ಏಲಕ್ಕಿ ಸೇವನೆಯು ಸಿಹಿತಿಂಡಿಗಳು ಅಥವಾ ಸಕ್ಕರೆ ತಿಂಡಿಗಳ ಬಯಕೆಯನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ: ಏಲಕ್ಕಿಯಲ್ಲಿ ಸಿನಿಯೋಲ್ ನಂತಹ ಸಂಯುಕ್ತಗಳಿದ್ದು, ಇವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಊಟದ ನಂತರ ಏಲಕ್ಕಿಯನ್ನು ಜಗಿಯುವುದರಿಂದ ಗ್ಯಾಸ್, ಆಮ್ಲೀಯತೆಯಂತಹ ಸೇರಿದಂತೆ ಇನ್ನಿತ್ತರ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ.
ಇದನ್ನೂ ಓದಿ:ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಈ ಒಂದು ಹಣ್ಣನ್ನು ಸೇವನೆ ಮಾಡಿ!
ನಿರ್ವಿಶಿಕರಣ: ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಊಟದ ಬಳಿಕ ಏಲಕ್ಕಿಯನ್ನು ಜಗಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಬಾಯಿಯ ನೈರ್ಮಲ್ಯ ಕಾಪಾಡಲು ಸಹಕಾರಿ: ಏಲಕ್ಕಿ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ಬಳಕೆಯು ಬಾಯಿಯ ಸೋಂಕನ್ನು ತಡೆಗಟ್ಟಲು ಹಾಗೂ ಒಸಡುಗಳ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sun, 19 October 25








