ನಿಮ್ಮ ದೇಹದಲ್ಲಿ ಕೊಬ್ಬು(Cholesterol)ಹೆಚ್ಚಾಗಿದ್ದರೆ ನಿಮ್ಮ ಮುಖ, ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕೆಲವು ಲಕ್ಷಣಗಳು ಗೋಚರಿಸಲಿವೆ. ಈ ಲಕ್ಷಣಗಳನ್ನು ಎಂದೂ ನೆಗ್ಲೆಕ್ಟ್ ಮಾಡಬೇಡಿ. ಅತಿಯಾದ ಕೊಲೆಸ್ಟ್ರಾಲ್ ಸಾವಿಗೂ ಕಾರಣವಾಗಲಿದೆ, ಪಾರ್ಶ್ವವಾಯು, ರಕ್ತದೊತ್ತಡ, ಹೃದಯಾಘಾತ ಸಮಸ್ಯೆಯನ್ನು ತಂದೊಡ್ಡಲಿದೆ.
ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳ ಸೇವನೆ ಮಾಡುವುದು, ನಿರಂತರ ವ್ಯಾಯಾಮ ಮಾಡದೇ ಇರುವುದರಿಂದ ನಿಮ್ಮ ರಕ್ತದಲ್ಲಿ ಕೊಬ್ಬಿನಾಂಶ ಶೇಖರಣೆಯಾಗುತ್ತದೆ. ಇದರಿಂದ ಮಧುಮೇಹ ಸಮಸ್ಯೆಯೂ ನಿಮ್ಮನ್ನು ಕಾಡಬಹುದು.
ಕೊಬ್ಬಿನಾಂಶವು ದೇಹದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ, ರಕ್ತ ಪರೀಕ್ಷೆ ಮಾಡಿ ತಿಳಿದುಕೊಳ್ಳಬಹುದು.
ಮುಖ ನೀಲಿಗಟ್ಟುವುದು: ಚಳಿ ವಾತಾವರಣದಲ್ಲಿ ಮುಖವು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದೆ ಎಂದರ್ಥ, ಇದು ಕ್ರಮೇಣವಾಗಿ ನಿಮ್ಮ ರಕ್ತನಾಳದ ಬ್ಲಾಕೇಜ್ಗೆ ಕಾರಣವಾಗುತ್ತದೆ.
ಕ್ಸಾಂಥೆಲಾಸ್ಮಾ: ಕಣ್ಣಿನ ಬುಡದಲ್ಲಿ ಹಳದಿ ಹಾಗೂ ಕೇಸರಿಯುಕ್ತ ಗೆರೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಈ ರೀತಿಯಾಗುತ್ತದೆ.
ಕ್ಸಾಂಥೋಮಾ: ಇದು ಕ್ಸಾಂಥೆಲಾಸ್ಮಾದಂತೆಯೇ ಇರಲಿದೆ, ಆದರೆ ಇದು ಕಾಲು ಹಾಗೂ ಪಾದದಲ್ಲಿ ಕಾಣಿಸಿಕೊಳ್ಳುತ್ತದೆ.
ಸೋರಿಯಾಸಿಸ್: ಕೊಲೆಸ್ಟ್ರಾಲ್ ಹಾಗೂ ಸೋರಿಯಾಸಿಸ್ಗೆ ಹತ್ತಿರದ ಸಂಬಂಧವಿದೆ. ಇದಕ್ಕೆ ಹೈಪರ್ಲಿಪಿಡೇಮಿಯಾ ಎಂದು ಕರೆಯಲಾಗುತ್ತದೆ.
ಚರ್ಮದ ಬಣ್ಣ ಬದಲಾಗಿ, ಒಣಗಿದ ಅನುಭವ: ಚರ್ಮದ ಬಣ್ಣ ಬದಲಾಗುವುದರ ಜತೆ ಒಣಗಿದ ಅನುಭವ ಉಂಟಾಗಲಿದೆ.
ಕಾಲಿನ ಸೆಳೆತ: ಪಾದದ ಹೊರತಾಗಿ, ತೋರುಬೆರಳು, ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿಯೂ ಸೆಳೆತವಿದ್ದರೆ, ಅದು ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವಾಗ ಹಲವು ರೀತಿಯಲ್ಲಿ ಕಾಲು ನೋವು ಇರುವ ಸಾಧ್ಯತೆ ಇರುತ್ತದೆ, ಇದು ಅಧಿಕ ಕೊಲೆಸ್ಟ್ರಾಲ್‌ನ ಒಂದು ಸಾಮಾನ್ಯ ಲಕ್ಷಣವಾಗಿದೆ.
ಪಾದದ ಚರ್ಮದ ಬಣ್ಣ ಬದಲಾವಣೆ: ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಕಾರಣ, ಪಾದಗಳ ರಕ್ತ ಪೂರೈಕೆಯ ಮೇಲೆ ಪರಿಣಾಮವೂ ಉಂಟಾಗುತ್ತದೆ, ಈ ಪರಿಣಾಮವನ್ನು ನೀವು ಪಾದಗಳ ಮೇಲೆ ಸ್ಪಷ್ಟವಾಗಿ ಕಾಣಬಹುದು. ರಕ್ತದ ಕೊರತೆಯಿಂದಾಗಿ, ರಕ್ತದ ಮೂಲಕ ತಲುಪುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ ಚರ್ಮದ ಮತ್ತು ಕಾಲುಗಳ ಉಗುರುಗಳ ಬಣ್ಣವು ಬದಲಾಗಬಹುದು.