ತೆಂಗಿನಕಾಯಿ ವಿನೆಗರ್ ಬಳಕೆ, ಲಾಭ, ಸಿದ್ಧತೆ ಬಗ್ಗೆ ಉಪಯುಕ್ತ ಮಾಹಿತಿ

ನೀವು ಜೀರ್ಣಕ್ರಿಯೆ ಅಥವಾ ಗ್ಯಾಸ್​ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಕೋಕೊನಟ್ ವಿನೆಗರ್ ಸೇವನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಆಹಾರದ ಪಚನ ಮತ್ತು ಜೀರ್ಣಕ್ರಿಯೆ ಸರಿಪಡಿಸಲು ಸಹಾಯ ಮಾಡುತ್ತದೆ.

ತೆಂಗಿನಕಾಯಿ ವಿನೆಗರ್ ಬಳಕೆ, ಲಾಭ,  ಸಿದ್ಧತೆ ಬಗ್ಗೆ ಉಪಯುಕ್ತ ಮಾಹಿತಿ
ತೆಂಗಿನಕಾಯಿ ವಿನೆಗರ್
Follow us
TV9 Web
| Updated By: ನಯನಾ ರಾಜೀವ್

Updated on: May 06, 2022 | 4:57 PM

ತೆಂಗಿನಕಾಯಿ ವಿನೆಗರ್ (Coconut Vinegar)ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೋಕೊನಟ್ ವಿನೆಗರ್ ಅನ್ನು ಕಾಯಿ ನೀರಿನ ಮೂಲಕ ತಯಾರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಚಮಚ ತೆಂಗಿನ ವಿನೆಗರ್ ಅನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ನೀವು ಜೀರ್ಣಕ್ರಿಯೆ ಅಥವಾ ಗ್ಯಾಸ್​ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಕೋಕೊನಟ್ ವಿನೆಗರ್ ಸೇವನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಆಹಾರದ ಪಚನ ಮತ್ತು ಜೀರ್ಣಕ್ರಿಯೆ ಸರಿಪಡಿಸಲು ಸಹಾಯ ಮಾಡುತ್ತದೆ.

ತೆಂಗಿನಕಾಯಿ ವಿನೆಗರ್​ನ ಕೆಲವು ಪ್ರಯೋಜನಗಳನ್ನು ನೋಡೋಣ. ಸಂಧಿವಾತ: ನಿಮಗೆ ಕೀಲು ನೋವಿನ ಸಮಸ್ಯೆ ಇದ್ದರೆ, ಪ್ರತಿದಿನ ಒಂದು ಚಮಚ ತೆಂಗಿನ ವಿನೆಗರ್ ಅನ್ನು ಸೇವಿಸುವುದು ಸಹ ನಿಮಗೆ ಪ್ರಯೋಜನ ಸಿಗುತ್ತದೆ. ತೆಂಗಿನ ವಿನೆಗರ್‌ನಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಚರ್ಮ ಮತ್ತು ಕೂದಲು : ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ನೀವು ವಿನೆಗರ್ ಅನ್ನು ಸೇವಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

ಮಧುಮೇಹ : ತೆಂಗಿನ ವಿನೆಗರ್ ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಒಂದು ಚಮಚ ಉಗುರುಬೆಚ್ಚನೆಯ ನೀರಿನಿಂದ ಕೋಕೊನಟ್ ವಿನೆಗರ್ ತೆಗೆದುಕೊಳ್ಳಿ. ಇದು ಅಧಿಕ ರಕ್ತದಲ್ಲಿನ ಸಕ್ಕರೆಯನ್ನು (High Blood Suger) ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ರಾಮಬಾಣ: ತೂಕ ಇಳಿಸಲು ಡಯಟ್ ಮೊರೆ ಹೋದವರು ತಮ್ಮ ಪಟ್ಟಿಗೆ ಈ ವಿನೆಗರ್ ಅನ್ನು ಸೇರಿಸಿಕೊಳ್ಳಬಹುದು. ಹಸಿವನ್ನು ನಿಗ್ರಹಿಸುತ್ತದೆ ಅಂದರೆ ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಆ್ಯಸಿಟಿಕ್ ಆಮ್ಲ ಈ ಎಲ್ಲಾ ಪ್ರಕ್ರಿಯೆಗೆ ಸಹಕಾರ ನೀಡುತ್ತಿದೆ.

ರಕ್ತದೊತ್ತಡ ನಿಯಂತ್ರಣದಲ್ಲಿರಿಸಬಹುದು: ಇದರಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಳವಾಗಿದೆ. ಇದು ಹೆಚ್ಚಾಗಿ ಖನಿಜಾಂಶವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯಕಾವಗುತ್ತದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‍ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

ತೆಂಗಿನಕಾಯಿಗೆ ಅಡುಗೆ ಮನೆಯಲ್ಲಿ ಅಗ್ರಸ್ಥಾನ. ತೆಂಗಿನ ಕಾಯಿಯಿಲ್ಲದ ಖಾದ್ಯವನ್ನು ಕೊಂಚ ಊಹಿಸಲು ಕಷ್ಟ. ರುಚಿಗೆ ತಕ್ಕಷ್ಟು ಉಪ್ಪಿದ್ದಂತೆ, ಅಳತೆಗೆ ತಕ್ಕಂತೆ ತೆಂಗಿನ ಕಯಿ ಇದ್ದರೆ ಅಡುಗೆಯ ಸ್ವಾದವೇ ಬೇರೆ. ಆಗ್ನೇಯ ಏಷ್ಯನ್ನರು ತೆಂಗಿನಕಾಯಿ ಹಾಗೂ ಅವುಗಳ ಉತ್ಪನ್ನಗಳನ್ನು ಬಳಸುತ್ತಿದ್ದಾರೆ.

ಇದೀಗ ಪಾಶ್ಚಾತ್ಯರಿಗೂ ತೆಂಗಿನಕಾಯಿ ಅಚ್ಚುಮೆಚ್ಚು ಎನಿಸಿದ್ದು, ಹೆಚ್ಚಿನ ಬೇಡಿಕೆ ಇದೆಆರೋಗ್ಯದ ಕಾರಣ ತೆಂಗಿನಕಾಯಿ ಅಡುಗೆಗೆ ಉತ್ತಮ ಖಾದ್ಯ. ತೆಂಗಿನಕಾಯಿ ಹಾಲನ್ನು ಸಹ ಪಾಯಸ, ಹೋಳಿಗೆ ಹೀಗೆ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದರಂತೆ ಇನ್ನು ಒಂದು ಉತ್ಪನ್ನವಿದೆ ಅದುವೇ ತೆಂಗಿನಕಾಯಿ ವಿನೆಗರ್.

ಮನೆಯಲ್ಲೇ ತೆಂಗಿನಕಾಯಿ ವಿನೆಗರ್ ತಯಾರಿಸುವುದು ಹೇಗೆ? -ತೆಂಗಿನಕಾಯಿ ವಿನೆಗರ್ ಅನ್ನು ತೆಂಗಿನ ನೀರಿನಿಂದ ತಯಾರಿಸಲಾಗುತ್ತದೆ. -ಸ್ವಲ್ಪ ತೆಂಗಿನ ನೀರನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಫಿಲ್ಟರ್ ಮಾಡಿ. -ನೀರನ್ನು ಬಿಸಿ ಮಾಡಿ ಅದಕ್ಕೆ ಸಕ್ಕರೆ ಬೆರೆಸಿ. ಸಕ್ಕರೆ ಕರಗುವ ತನಕ ಮಿಶ್ರಣವನ್ನು ತಿರುವುತ್ತಿರಿ. -ಮಿಶ್ರಣವನ್ನು ತಣ್ಣಗಾಗಲು ಬಿಡಿ ಮತ್ತು ಸಂಪೂರ್ಣವಾಗಿ ತಂಪಾದ ನಂತರ ಅದನ್ನು ಗಾಜಿನ ಪಾತ್ರೆಯಲ್ಲಿ ಸುರಿಯಿರಿ. ಇದನ್ನು ಸುಮಾರು ಒಂದು ವಾರ ಕತ್ತಲೆಯ ಸ್ಥಳದಲ್ಲಿ ಮುಚ್ಚಿಡಿ. -ಈ ದ್ರಾವಣಕ್ಕೆ ಮದರ್ ಆಫ್ ವಿನೆಗರ್ ಮಿಶ್ರಣ ಮಾಡಿ ಮದರ್ ಆಫ್ ವಿನೆಗರ್ ಸೆಲ್ಯುಲೋಸ್ ಮತ್ತು ಅಸಿಟಿಕ್ ಆ್ಯಸಿಡ್ ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ ಒಂದು ವಸ್ತು. ಈ ಬ್ಯಾಕ್ಟೀರಿಯಾವು ಆಮ್ಲಜನಕದ ಸಹಾಯದಿಂದ ಆಲ್ಕೋಹಾಲ್ ಅನ್ನು ಅಸಿಟಿಕ್ ಆಮ್ಲವಾಗಿ ಪರಿವರ್ತಿಸಬಹುದು. -ಮದರ್ ಆಫ್ ವಿನೆಗರ್ ಸೇರಿಸಿದ ನಂತರ, ಮಿಶ್ರಣವನ್ನು 4 – 12 ವಾರಗಳವರೆಗೆ ಹಾಗೆಯೇ ಇಡಿ. ಬಳಿಕ ಅದು ವಿನೆಗರ್ ಆಗಿ ಬದಲಾಗುತ್ತದೆ.

ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ