Coconut Water for Hair Care: ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ದರೆ ತೆಂಗಿನಕಾಯಿ ನೀರನ್ನು ಬಳಸಿ
ತೆಂಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ, ಅಲೋವೆರಾ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಬಹುದು. ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಒಣ ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಕೂದಲಿಗೆ ಇದನ್ನು ಹೇಗೆ ಬಳಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತೆಂಗಿನ ನೀರು ನಿಮ್ಮ ಆರೋಗ್ಯಕ್ಕೆ( Health) ತುಂಬಾ ಪ್ರಯೋಜನಕಾರಿ. ಇದೊಂದು ಪೌಷ್ಟಿಕ ಪಾನೀಯವಾಗಿದೆ. ಒಂದು ಲೋಟ ತಾಜಾ ತೆಂಗಿನ ನೀರನ್ನು(Coconut water) ಕುಡಿಯುವುದು ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ. ಇದು ನಮ್ಮ ಕೂದಲು ಮತ್ತು ಚರ್ಮಕ್ಕೂ(Skin) ತುಂಬಾ ಪ್ರಯೋಜನಕಾರಿ. ನೀವು ತೆಂಗಿನ ನೀರನ್ನು ಕೂದಲಿಗೆ ಹಲವಾರು ರೀತಿಯಲ್ಲಿ ಬಳಸಬಹುದು. ತೆಂಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ, ಅಲೋವೆರಾ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಬಹುದು. ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ () ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಒಣ ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಕೂದಲಿಗೆ ಇದನ್ನು ಹೇಗೆ ಬಳಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತೆಂಗಿನ ನೀರಿನ ಸ್ಪ್ರೇ
ಕೂದಲನ್ನು ಹೈಡ್ರೇಟ್ ಮಾಡಲು ನೀವು ತೆಂಗಿನ ನೀರಿನ ಸ್ಪ್ರೇ ಅನ್ನು ಬಳಸಬಹುದು. ಕಾಲು ಕಪ್ ತಾಜಾ ತೆಂಗಿನ ನೀರನ್ನು ತೆಗೆದುಕೊಳ್ಳಿ. ಇದನ್ನು ಒಂದು ಕಪ್ ಸಾಮಾನ್ಯ ನೀರಿನಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ಸುರಿಯಿರಿ. ಬಳಿಕ ನಿಮ್ಮ ಕೂದಲಿಗೆ ಸ್ಪ್ರೇ ಆಗಿ ಬಳಸಬಹುದು. ಒದ್ದೆಯಾದ ಕೂದಲು ಮತ್ತು ನೆತ್ತಿಯ ಮೇಲೆ ಸಿಂಪಡಿಸಿ.
ತೆಂಗಿನ ನೀರು ಮತ್ತು ನಿಂಬೆ ರಸ
ಅರ್ಧ ಕಪ್ ತಾಜಾ ತೆಂಗಿನ ನೀರನ್ನು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ತಾಜಾ ನಿಂಬೆ ರಸವನ್ನು ಸೇರಿಸಿ. ಬಳಿಕ ಇದನ್ನು ನಿಮ್ಮ ಕೂದಲಿಗೆ ಅನ್ವಯಿಸಿ. 20-30 ನಿಮಿಷಗಳ ಕಾಲ ಅದನ್ನು ಇರಿಸಿ. ಅದರ ನಂತರ ಅದನ್ನು ನೀರಿನಿಂದ ತೊಳೆಯಿರಿ. ಕೂದಲಿನ ಆರೈಕೆಗಾಗಿ ನೀವು ವಾರಕ್ಕೆ ಎರಡು ಬಾರಿ ಈ ವಿಧಾನ ಬಳಸಬಹುದು.
ತೆಂಗಿನ ನೀರು ಮತ್ತು ಜೇನುತುಪ್ಪ
ಒಂದು ಕಪ್ ತಾಜಾ ತೆಂಗಿನ ನೀರನ್ನು ತೆಗೆದುಕೊಂಡು ಅದಕ್ಕೆ 4 ಚಮಚ ಜೇನುತುಪ್ಪವನ್ನು ಸೇರಿಸಿ. ಅವುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ ಮತ್ತು 10 ನಿಮಿಷಗಳ ಕಾಲ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಇದರ ಬಳಿಕ, ನಿಮ್ಮ ತಲೆಯನ್ನು ಕಟ್ಟಲು ಒದ್ದೆಯಾದ ಬೆಚ್ಚಗಿನ ನೀರಿನ ಟವೆಲ್ ತೆಗೆದುಕೊಳ್ಳಿ. ಶಾಂಪೂವಿನಿಂದ ತೊಳೆಯುವ ಮೊದಲು ಅದನ್ನು 30 ನಿಮಿಷಗಳ ಕಾಲ ನಿಮ್ಮ ಕೂದಲಿನ ಮೇಲೆ ಬಿಡಿ. ಕೂದಲಿನ ಆರೈಕೆಗಾಗಿ ವಾರಕ್ಕೊಮ್ಮೆ ಈ ಚಿಕಿತ್ಸೆಯನ್ನು ಪುನರಾವರ್ತಿಸಿ. ಇದರಿಂದ ಕೂದಲು ಡ್ಯಾಂಡ್ರಫ್ ಮುಕ್ತವಾಗುತ್ತದೆ.
ತೆಂಗಿನ ನೀರು ಮತ್ತು ಅಲೋ ವೆರಾ
ಎರಡು ಟೀ ಚಮಚ ಅಲೋವೆರಾ ಜೆಲ್ ಅನ್ನು ಅರ್ಧ ಕಪ್ ತಾಜಾ ತೆಂಗಿನ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ. ವಾರಕ್ಕೆ ಕನಿಷ್ಠ ಮೂರು ಬಾರಿ ಇದನ್ನು ಬಳಸಿ.
ತೆಂಗಿನ ನೀರು ಮತ್ತು ಆಪಲ್ ಸೈಡರ್ ವಿನೆಗರ್
ಒಂದು ಕಪ್ ತಾಜಾ ತೆಂಗಿನಕಾಯಿ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ. ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಪರಿಣಾಮವಾಗಿ ಮಿಶ್ರಣವನ್ನು ನಿಮ್ಮ ಕೂದಲಿಗೆ ಅನ್ವಯಿಸಿ. 10 ನಿಮಿಷಗಳಿಗಿಂತ ಕಡಿಮೆ ಕಾಲ ಇದನ್ನು ಬಿಡಿ. ನಂತರ ಶಾಂಪೂವಿನಿಂದ ಇದನ್ನು ತೊಳೆಯಿರಿ. ಆರೋಗ್ಯಕರ ಕೂದಲಿಗೆ ನೀವು ವಾರದಲ್ಲಿ 1 ಅಥವಾ 2 ಬಾರಿ ಬಳಸಬಹುದು.
ಇದನ್ನೂ ಓದಿ:
Women Health: ಹೆರಿಗೆಯ ನಂತರ ತಲೆ ಕೂದಲು ಉದುರುವ ಸಮಸ್ಯೆ ಎದುರಾಗಿದೆಯೇ; ಇಲ್ಲಿದೆ ಸೂಕ್ತ ಪರಿಹಾರ
ಬ್ಲೂಬೆರಿ ಹಣ್ಣುಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯಯುತ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ