AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women health: ಪ್ರತಿಯೊಬ್ಬ ಮಹಿಳೆಯು ಈ 5 ತಪಾಸಣೆಗಳನ್ನು ಮಾಡಿಕೊಳ್ಳಲೇಬೇಕು: ವೈದ್ಯರ ಸಲಹೆ ಏನು ನೋಡಿ

ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ವಹಿಸಬೇಕು ಮತ್ತು ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಯಾವ ಐದು ವೈದ್ಯಕೀಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಡಾ. ಸಮೀರ್ ಭಾಟಿ ಮಾಹಿತಿ ನೀಡಿದ್ದಾರೆ.

Women health: ಪ್ರತಿಯೊಬ್ಬ ಮಹಿಳೆಯು ಈ 5 ತಪಾಸಣೆಗಳನ್ನು ಮಾಡಿಕೊಳ್ಳಲೇಬೇಕು: ವೈದ್ಯರ ಸಲಹೆ ಏನು ನೋಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 16, 2022 | 7:37 AM

Share

ಮಹಿಳೆಯರ ಆರೋಗ್ಯ ಸಮಸ್ಯೆಗೆ ಯಾವಾಗಲೂ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಆದರೆ ಕುಟುಂಬದ ಬೆನ್ನೆಲುಬಾಗಿರುವ ಮಹಿಳೆಯರು(Women) ತಮ್ಮ ಬಗ್ಗೆ ಕಾಳಜಿ ವಹಿಸದೆ ಇಡೀ ದಿನ ಮನೆ, ಕುಟುಂಬ(Family) ಮತ್ತು ಕಚೇರಿಯಲ್ಲಿಯೇ ಸಮಯ ಕಳೆಯುತ್ತಾರೆ. ನಾನಾ ಬಗೆಯ ಕೆಲಸಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಮಹಿಳೆ ತನ್ನ ಆರೋಗ್ಯದ(Health) ಕಡೆ ಕಡಿಮೆ ಗಮನ ಹರಿಸುತ್ತಾಳೆ ಅಥವಾ ಈ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾಳೆ. ಆದರೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ವಹಿಸಬೇಕು ಮತ್ತು ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಯಾವ ಐದು ವೈದ್ಯಕೀಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಡಾ. ಸಮೀರ್ ಭಾಟಿ ಮಾಹಿತಿ ನೀಡಿದ್ದಾರೆ.

ರಕ್ತ ಪರೀಕ್ಷೆ

ಮಹಿಳೆಯರು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ನಿಯಮಿತವಾಗಿ ರಕ್ತ ತಪಾಸಣೆ ಮಾಡಿಸಿಕೊಂಡರೆ ಯಾವುದೇ ಸಮಸ್ಯೆಗಳು ಉದ್ಭವಿಸುವ ಮುನ್ನವೇ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸಾಮಾನ್ಯ ರಕ್ತ ಪರೀಕ್ಷೆಯು ಒಟ್ಟಾರೆ ದೈಹಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯಕವಾಗಿದೆ. ರಕ್ತ ಪರೀಕ್ಷೆಯಿಂದ ಕಾಲಕಾಲಕ್ಕೆ ಮಹಿಳೆಯರ ದೇಹದಲ್ಲಿ ಸಂಭವಿಸುವ ಬದಲಾವಣೆಗಳ ಬಗ್ಗೆ ನೀವು ಮಾಹಿತಿ ಪಡೆಯಬಹುದು. ರಕ್ತ ಪರೀಕ್ಷೆಯು ರಕ್ತಹೀನತೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಕಾಸ್ಟ್ರೋಲ್ ತಪಾಸಣೆ, ರಕ್ತದ ಗ್ಲೂಕೋಸ್ ಪರೀಕ್ಷೆ, ವಿಟಮಿನ್ ಡಿ ಇತ್ಯಾದಿಗಳನ್ನು ಒಳಗೊಂಡಿರಬಹುದು. ರಕ್ತ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಮಾಡಬೇಕು.

ಮೆಮೊಗ್ರಾಮ್

ಮೆಮೊಗ್ರಾಮ್ ಸ್ತನದ ಎಕ್ಸ್-ರೇ ಆಗಿದೆ. ಸ್ತನ ಕ್ಯಾನ್ಸರ್​ ಚಿಹ್ನೆಗಳನ್ನು ಪತ್ತೆಹಚ್ಚಲು ಮೆಮೊಗ್ರಾಮ್​ಗಳನ್ನು ಬಳಸಲಾಗುತ್ತದೆ. ಮಹಿಳೆಯರ ಸಾವಿನಲ್ಲಿ ಸ್ತನ ಕ್ಯಾನ್ಸರ್ ಎರಡನೇ ಕ್ಯಾನ್ಸರ್ ಸಂಬಂಧಿತ ಅಂಶವೆಂದು ಪರಿಗಣಿಸಲಾಗಿದೆ. ಮಹಿಳೆಯರು ಸಾಮಾನ್ಯವಾಗಿ 40 ನೇ ವಯಸ್ಸಿನಲ್ಲಿ ಮೆಮೊಗ್ರಾಮ್‌ ಮಾಡಿಕೊಳ್ಳುವುದು ಉತ್ತಮ. ಪ್ರತಿ 1 ಅಥವಾ 2 ವರ್ಷಗಳಿಗೊಮ್ಮೆ ಮಹಿಳೆಯರು ಮೆಮೊಗ್ರಾಮ್‌ ಪರೀಕ್ಷೆ ಮಾಡಬೇಕು. ಆದಾಗ್ಯೂ ಕೆಲವು ವೈದ್ಯರು ಮಹಿಳೆಯರು 50 ನೇ ವಯಸ್ಸಿನಲ್ಲಿ ಈ ಪರೀಕ್ಷೆಗಳನ್ನು ಮಾಡಲು ಪ್ರಾರಂಭಿಸಬೇಕು ಎಂದು ಸಲಹೆ ನೀಡುತ್ತಾರೆ. ಸ್ತನ ಕ್ಯಾನ್ಸರ್‌ನಲ್ಲಿ ಸ್ತನ ನೋವು, ಗಡ್ಡೆ, ಚರ್ಮದ ಬಣ್ಣ ಬದಲಾವಣೆ ಮುಂತಾದ ಹಲವು ರೀತಿಯ ಬದಲಾವಣೆಗಳು ಕಂಡುಬರುತ್ತವೆ.

ಪೆಲ್ವಿಕ್ ಪ್ರೋಬ್

ಹೆಚ್ಚಿನ ಮಹಿಳೆಯರಿಗೆ ಪೆಲ್ವಿಕ್ ಪ್ರೋಬ್ ಪರೀಕ್ಷೆಯ ಬಗ್ಗೆ ತಿಳಿದಿಲ್ಲ. ಆದರೆ ಪೆಲ್ವಿಕ್ ಪ್ರೋಬ್ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳನ್ನು ಪರೀಕ್ಷಿಸುತ್ತದೆ. ಇದು ಸೋಂಕು, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳ ಬಗ್ಗೆ ಪತ್ತೆ ಮಾಡುತ್ತದೆ. ಈ ​​ಪರೀಕ್ಷೆಗಳು ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತದೆ. ಗರ್ಭಕಂಠದ ಕೋಶಗಳಲ್ಲಿನ ಬದಲಾವಣೆಗಳನ್ನು ಪ್ಯಾಪ್ ಸ್ಮೀಯರ್ ಮೂಲಕ ಕಂಡುಹಿಡಿಯಬಹುದು. ಭವಿಷ್ಯದಲ್ಲಿ ಕ್ಯಾನ್ಸರ್​ ಅಪಾಯದ ಬಗ್ಗೆ ಮಹಿಳೆಯರಿಗೆ ಈ ತಪಾಸಣೆ ತಿಳಿಸುತ್ತದೆ. 21 ನೇ ವಯಸ್ಸಿನಲ್ಲಿ ಪ್ರಾರಂಭಿಸಿ ವರ್ಷಕ್ಕೊಮ್ಮೆ ಪೆಲ್ವಿಕ್ ಪ್ರೋಬ್ ಪರೀಕ್ಷೆಯನ್ನು ಮಾಡಬಹುದು.

ಬೋನ್ ಡೆನ್ಸಿಟಿ ಟೆಸ್ಟ್ (BMD)

ಮೂಳೆ ಸಾಂದ್ರತೆ ಪರೀಕ್ಷೆಯು ಮಹಿಳೆಯರ ದೇಹದ ಮುಖ್ಯ ಭಾಗಗಳಲ್ಲಿ ಮೂಳೆಗಳ ರೋಗಗಳನ್ನು ಪತ್ತೆ ಮಾಡುತ್ತದೆ. ಇದು ಸೊಂಟ ಮತ್ತು ಹಿಮ್ಮಡಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆಗಳು ದುರ್ಬಲಗೊಳ್ಳುವ ಸ್ಥಿತಿಯಾಗಿದೆ ಮತ್ತು ಮೂಳೆ ಮುರಿಯುವ ಅಪಾಯ ಹೆಚ್ಚಾಗುತ್ತದೆ. ಇದು ಮೂಳೆಯ ದೌರ್ಬಲ್ಯದ ಬಗ್ಗೆ ತಿಳಿಸುತ್ತದೆ. ಮೂಳೆ ಸಾಂದ್ರತೆಯ ಪರೀಕ್ಷೆಯನ್ನು ವಿವಿಧ ಯಂತ್ರಗಳನ್ನು ಬಳಸಿ ನಡೆಸಲಾಗುತ್ತದೆ. ಆದರೆ ಸಾಮಾನ್ಯ ತಂತ್ರವೆಂದರೆ ಡ್ಯುಯಲ್-ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೊಮೆಟ್ರಿ (DEXA) ಸ್ಕ್ಯಾನ್. ಈ ಪರೀಕ್ಷೆಯು ಮೂಳೆ ಮುರಿಯುವ ಅಪಾಯದ ಬಗ್ಗೆ ತಿಳಿಸುತ್ತದೆ.

ಸ್ತ್ರೀ ಹಾರ್ಮೋನ್ ಪ್ರೊಫೈಲ್

ಮಹಿಳೆಯರ ಹಾರ್ಮೋನ್ ಅಸಮತೋಲನ, ಜೀವನಶೈಲಿಯ ಬದಲಾವಣೆಯಿಂದಾಗಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಹಾರ್ಮೋನ್ ರಕ್ತ ಪರೀಕ್ಷೆಯು ಮಹಿಳೆಯ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಈ ಪರೀಕ್ಷೆಯ ಮೂಲಕ, ಇದು ಪಿಸಿಓಡಿ ಅಥವಾ ಪಿಸಿಓಎಸ್, ಥೈರಾಯ್ಡ್ ಕಾಯಿಲೆ ಅಥವಾ ಮಧುಮೇಹವನ್ನು ಪತ್ತೆಹಚ್ಚುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತದೆ. ಹಾರ್ಮೋನ್ ಪ್ರೊಫೈಲ್ ಪರೀಕ್ಷೆಗಳು ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಕೋಶಕ-ಉತ್ತೇಜಿಸುವ ಹಾರ್ಮೋನ್ (FSH), ಟೆಸ್ಟೋಸ್ಟೆರಾನ್/DHEA, ಥೈರಾಯ್ಡ್ ಹಾರ್ಮೋನುಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಬ್ಲೂಬೆರಿ ಹಣ್ಣುಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯಯುತ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅರಿಶಿಣ ಮತ್ತು ಕಹಿಬೇವು ನಿಮ್ಮ ಮನೆಯಲ್ಲಿ ಇದೆಯೇ? ಅನೇಕ ಆರೋಗ್ಯ ಸಮಸ್ಯೆಗೆ ಇದರಲ್ಲಿದೆ ಪರಿಹಾರ

ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್