AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಶಿಣ ಮತ್ತು ಕಹಿಬೇವು ನಿಮ್ಮ ಮನೆಯಲ್ಲಿ ಇದೆಯೇ? ಅನೇಕ ಆರೋಗ್ಯ ಸಮಸ್ಯೆಗೆ ಇದರಲ್ಲಿದೆ ಪರಿಹಾರ

ಆಯುರ್ವೇದದಲ್ಲಿ ಅರಿಶಿಣ ಮತ್ತು ಕಹಿಬೇವಿಗೆ ಮಹತ್ವದ ಸ್ಥಾನವಿದೆ. ಕಹಿಬೇವಿನ ಎಲೆಗಳ ರಸವನ್ನು ಒಂದು ಚಿಟಿಕೆ ಅರಿಶಿಣದೊಂದಿಗೆ ಬೆರೆಸಿ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿ.

ಅರಿಶಿಣ ಮತ್ತು ಕಹಿಬೇವು ನಿಮ್ಮ ಮನೆಯಲ್ಲಿ ಇದೆಯೇ? ಅನೇಕ ಆರೋಗ್ಯ ಸಮಸ್ಯೆಗೆ ಇದರಲ್ಲಿದೆ ಪರಿಹಾರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 15, 2022 | 7:02 AM

Share

ಪ್ರತಿನಿತ್ಯವೂ ನಾವು ಆರೋಗ್ಯದ ಕುರಿತಾಗಿಯೇ ಹೆಚ್ಚು ಯೋಚಿಸುತ್ತೇವೆ. ದೇಹದ ಆರೋಗ್ಯ ಸುಧಾರಿಸಲು ಎಷ್ಟೆಲ್ಲಾ ಮನೆ ಮದ್ದುಗಳನ್ನು ಸೇವಿಸುತ್ತೇವೆ. ಹಾಗಿರುವಾಗ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮನೆಯಲ್ಲಿ ಬಳಸುವ ಅರಿಶಿಣವನ್ನು ಸೇವಿಸುವ ಮೂಲಕ ಆರೋಗ್ಯ ಸುಧಾರಿಸುತ್ತದೆ. ಅದೆಷ್ಟೋ ಅರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹಾಗಿರುವಾಗ ಅರಿಶಿಣ(turmeric) ಮತ್ತು ಕಹಿಬೇವು ಹೇಗೆ ಸೇವಿಸಬೇಕು ಮತ್ತು ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಆಯುರ್ವೇದದಲ್ಲಿ ಅರಿಶಿಣ ಮತ್ತು ಕಹಿಬೇವಿಗೆ(Neem) ಮಹತ್ವದ ಸ್ಥಾನವಿದೆ. ಕಹಿಬೇವಿನ ಎಲೆಗಳ ರಸವನ್ನು ಒಂದು ಚಿಟಿಕೆ ಅರಿಶಿಣದೊಂದಿಗೆ ಬೆರೆಸಿ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿ. ಆರೋಗ್ಯದ(Health) ಜತೆಗೆ ಚರ್ಮದ ಆರೋಗ್ಯಕ್ಕೂ ಸಹ ಇದು ಅನೇಕ ಪ್ರಯೋಜನಗಳಿವೆ. 

ಬ್ಯಾಕ್ಟೀರಿಯಾವನ್ನು ವಿರೋಧಿ

ಅರಿಶಿಣ ಮತ್ತು ಕಹಿಬೇವಿನಲ್ಲಿ ಚಿಕಿತ್ಸಕ ಗುಣಲಕ್ಷಣಗಳಿದೆ. ಕಹಿಬೇವು ಮತ್ತು ಅರಿಶಿಣವು ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳಿಂದ ಸೋಂಕಿಗೆ ಒಳಗಾಗದಂತೆ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್ ಗುಣಗಳು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಜ್ವರದಿಂದ ಮುಕ್ತಿ

ಹವಮಾನ ಬದಲಾದಂತೆ ನೆಗಡಿ, ಕೆಮ್ಮು, ಮೂಗು ಕಟ್ಟುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ, ಕಹಿಬೇವು ಮತ್ತು ಅರಿಶಿಣ ಸೇವನೆಯು ವೈರಲ್ ಜ್ವರದ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಅರಿಶಿಣದ ಆಂಟಿವೈರಲ್ ಗುಣಲಕ್ಷಣಗಳು ವೈರಲ್ ಜ್ವರವನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಹಿಬೇವು ಮತ್ತು ಅರಿಶಿಣವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಕಹಿಬೇವು ಮತ್ತು ಅರಿಶಿಣ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ

ಕಹಿಬೇವು ಮತ್ತು ಅರಿಶಿಣ ಸೇವನೆಯಿಂದ ಚರ್ಮದ ಸತ್ತ ಜೀವಕೋಶಗಳು ಕಣ್ಮರೆಯಾಗುತ್ತವೆ. ಇದಲ್ಲದೆ, ಇವು ದೇಹವನ್ನು ಸ್ವಚ್ಛಗೊಳಿಸುತ್ತದೆ. ನಿಮ್ಮ ಆರೋಗ್ಯದ ಜೊತೆಗೆ, ನಿಮ್ಮ ಚರ್ಮವೂ ಹೊಳೆಯಲು ಪ್ರಾರಂಭಿಸುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರಲು ಸಹಾಯ ಮಾಡುತ್ತದೆ.

ಕಹಿಬೇವು ಮತ್ತು ಅರಿಶಿಣದ ಇನ್ನಿತರ ಪ್ರಯೋಜನಗಳು

ಕಹಿಬೇವು ಔಷಧೀಯ ಅಂಶಗಳಿಂದ ಸಮೃದ್ಧವಾಗಿದೆ. ಇದರ ಎಲೆಗಳು, ಕಾಂಡದಿಂದ ಬೇರಿನವರೆಗೆ ಎಲ್ಲವನ್ನು ಬಳಸಿಕೊಂಡು, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಕಹಿಬೇವು ಉರಿಯೂತ, ಪ್ರತಿಜೀವಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ.

ಅರಿಶಿಣವು ಕರ್ಕ್ಯುಮಿನ್ ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕವನ್ನು ಹೊಂದಿದೆ. ಅರಿಶಿಣವು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಅನ್ನು ಹೊಂದಿರುತ್ತದೆ. ಇದು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅರಿಶಿಣವು ಶೀತ, ಕೆಮ್ಮು, ಕೀಲು ನೋವು ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬರಿಗಾಲಿನಲ್ಲಿ ವಾಕ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ; ಇದರಿಂದಾಗುವ ಆರೋಗ್ಯಯುತ ಬದಲಾವಣೆ ಇಲ್ಲಿದೆ ನೋಡಿ

Healthy food: ಸಂಸತ್ತಿಗೆ ಸೈಕಲ್ಲಿನಲ್ಲಿ ಬರುವ ಆರೋಗ್ಯ ಸಚಿವ ತಮ್ಮ ಕ್ಯಾಂಟೀನ್​​ನಲ್ಲಿ ಇನ್ನು ಆರೋಗ್ಯಕರ ಆಹಾರವಷ್ಟೇ ಲಭ್ಯ ಎಂದರು!