ಇತ್ತೀಚಿನ ವರ್ಷಗಳಲ್ಲಿ ನಮ್ಮ ದೈನಂದಿನ ಜೀವನಶೈಲಿ ಅನೇಕ ರೀತಿಯಲ್ಲಿ ಬದಲಾವಣೆಗಳನ್ನು ಕಂಡಿದೆ. ಕೆಲವರು ಆರೋಗ್ಯಕರವಾಗಿ ತೂಕ ಇಳಿಸಿಕೊಂಡು ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಲವರು ತಮಗಿಷ್ಟವಾದ ಆಹಾರಗಳನ್ನು ಸೇವನೆ ಮಾಡುತ್ತಾ ಜೀವನ ಕಳೆಯುತ್ತಿದ್ದಾರೆ. ಇದು ಸಾಮಾನ್ಯ ಎನಿಸಿದರೂ ಕೂಡ ಈಗೀಗ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದನ್ನು ಕೂಡ ನಾವು ಮರೆಯುವಂತಿಲ್ಲ. ಅಧಿಕ ತೂಕ ಅದರಲ್ಲಿಯೂ ಹೊಟ್ಟೆಯ ಸುತ್ತ ಬೊಜ್ಜು ಬರುವ ಸಮಸ್ಯೆ ಹೆಚ್ಚಾಗುತ್ತಿದೆ. ಸರಿಯಾದ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ದತಿಯನ್ನು ಅನುಸರಿಸಿದರೆ ಇದರಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಇದು ದೇಹದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಬದಲಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಪ್ರಕೃತಿಯಲ್ಲಿಯೇ ಪರಿಹಾರ ಅಡಗಿರುತ್ತದೆ. ಆದರೆ ಅದರ ಬಗ್ಗೆ ಗಮನ ಹರಿಸುವ ಜಾಣ್ಮೆ ನಮ್ಮದಾಗಿರಬೇಕು. ಪ್ರಕೃತಿಯಲ್ಲಿ ಸಿಗುವ ಹಲವಾರು ಗಿಡಮೂಲಿಕೆಗಳು ಮತ್ತು ಮಸಾಲೆಗಳಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಅಡಕವಾಗಿದೆ. ಅದಲ್ಲದೆ ಇದರ ನಿಯಮಿತ ಸೇವನೆ ಮಾಡುವುದರಿಂದ ದೇಹ ಆಯಾಸಗೊಳ್ಳದೆಯೇ ಹೆಚ್ಚುವರಿ ಪ್ರಮಾಣದ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ನೀವು ವಿಭಿನ್ನ ರೀತಿಯ ಆಹಾರ ಕ್ರಮಗಳನ್ನು ಪ್ರಯತ್ನಿಸಿ ಆಯಾಸಗೊಂಡಿದ್ದರೆ ಅಥವಾ ವ್ಯಾಯಾಮ ನಿಮಗೆ ಅಪೇಕ್ಷಣೀಯ ಫಲಿತಾಂಶ ತರದಿದ್ದರೆ, ಬೇರೆ ರೀತಿಯಲ್ಲಿ ಪರಿಹಾರ ಪಡೆದುಕೊಳ್ಳುವುದು ಉತ್ತಮ. ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಕರಗಿಸಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ, ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಹಾರ್ಮೋನುಗಳ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಗಿಡಮೂಲಿಕೆಗಳು ಮತ್ತು ಮಸಾಲೆಗಳಿವೆ. ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನವೇನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಈ ಮಸಾಲೆಯ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಜ್ಞರು ಹೇಳುವ ಪ್ರಕಾರ, ಈ ಕರಿಮೆಣಸು ಪೈಪರಿನ್ ಎಂಬ ಶಕ್ತಿಯುತ ಸಂಯುಕ್ತವನ್ನು ಹೊಂದಿರುತ್ತದೆ, ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೇಯೆನ್ ಪೆಪ್ಪರ್ ಎಂದು ಕರೆಯಲ್ಪಡುವ ಒಂದು ರೀತಿಯ ಮೆಣಸಿನಕಾಯಿಯನ್ನು ಅನೇಕ ಭಕ್ಷ್ಯಗಳಿಗೆ ಬಳಸಲಾಗುತ್ತದೆ. ಇದು ಕ್ಯಾಪ್ಸೈಸಿನ್ ಎಂಬ ಸಂಯುಕ್ತವನ್ನು ಹೊಂದಿದ್ದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಕ್ಯಾಲೊರಿಗಳನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಪುದೀನಾ, ತುಳಸಿ, ಥೈಮ್, ರೋಸ್ಮರಿಯಂತೆ ಒಂದೇ ಸಸ್ಯ ಕುಟುಂಬಕ್ಕೆ ಸೇರಿದ ಗಿಡಮೂಲಿಕೆಯಾದ ಒರೆಗ್ಯಾನೋ ಬಗ್ಗೆ ಕೇಳಿರಬಹುದು. ಇದು ತೂಕ ನಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದರ ಪರಿಮಳ ಮತ್ತು ಬಣ್ಣದ ಜೊತೆಗೆ ಔಷಧೀಯ ಗುಣಗಳಿಗೆ ಹೆಸರುವಾಸಿಯಾದ ಅರಿಶಿನದಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಉರಿಯೂತದಿಂದ ಹಿಡಿದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ತೂಕ ನಷ್ಟವನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ, ಪದೇ ಪದೇ ಬೇಡದ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡುತ್ತದೆ.
ಪಾರ್ಸ್ಲಿ ಕುಟುಂಬಕ್ಕೆ ಸೇರಿದ ಜೀರಿಗೆಯು, ಮಸಾಲೆಗಳಲ್ಲಿ ತನ್ನ ವಿಶಿಷ್ಟವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಜೊತೆಗೆ ತೂಕ ನಷ್ಟ ಮತ್ತು ಅನಾರೋಗ್ಯಕರ ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಸೇರಿದಂತೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.
ಅತ್ಯಂತ ದುಬಾರಿಯಾಗಿರುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಯೂ ಒಂದು. ಇದು ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೀರ್ಣಶಕ್ತಿ ಹೆಚ್ಚಿಸುವುದರಲ್ಲಿ ಶುಂಠಿಗಿಂತ ಮಿಗಿಲಾದ ಮಸಾಲೆ ಪದಾರ್ಥವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ತೇಜಿಸುತ್ತದೆ, ಹೊಟ್ಟೆಯನ್ನು ಖಾಲಿ ಮಾಡುವುದನ್ನು ವೇಗಗೊಳಿಸಿ, ಹಸಿವಾಗುವ ಭಾವನೆಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ಸೊಂಟ ತೆಳ್ಳಗಿರಬೇಕು ಎಂದು ಬಯಸುವವರು ಇದನ್ನು ಸೇವನೆ ಮಾಡಲೇಬೇಕು.
ಇದು ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸೇರಿದಂತೆ ಆರೋಗ್ಯಕರ ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.
ಈ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇವಿಸುವುದರ ಹೊರತಾಗಿ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನೀವು ವಾಕಿಂಗ್, ರನ್ನಿಂಗ್, ಈಜು ಅಥವಾ ನೃತ್ಯದಂತಹ ಏರೋಬಿಕ್ ವ್ಯಾಯಾಮವನ್ನು ಪ್ರಯತ್ನಿಸಬಹುದು. ಪಿಲೇಟ್ಸ್ ಅಥವಾ ಯೋಗವನ್ನು ಸಹ ಪ್ರಯತ್ನಿಸಬಹುದು. ನೀವು ದಿನದ ಹೆಚ್ಚಿನ ಸಮಯ ಕೆಲಸಕ್ಕಾಗಿ ಕುಳಿತರೆ, ಇನ್ನುಳಿದ ಸಮಯದಲ್ಲಿ ಸಾಧ್ಯವಾದಷ್ಟು ತಿರುಗಾಡಿ. ಅಂದರೆ ನಡೆಯುವುದು, ಮೆಟ್ಟಿಲುಗಳನ್ನು ಹತ್ತುವುದು, ಸ್ಟ್ರೆಚಿಂಗ್ ವ್ಯಾಯಾಮ ಈ ರೀತಿ ದೇಹಕ್ಕೆ ಸ್ವಲ್ಪ ಕೆಲಸ ಕೊಡಿ, ಬಳಿಕ ವಿರಾಮ ತೆಗೆದುಕೊಳ್ಳಬಹುದು. ಚುರುಕಾದ ವಾಕಿಂಗ್, ಜಾಗಿಂಗ್, ಓಟ, ಬೈಕಿಂಗ್, ಈಜು ಮತ್ತು ಕ್ರೀಡೆ, ಏರೋಬಿಕ್ ವ್ಯಾಯಾಮ ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಅದಲ್ಲದೆ ನೀವು ಆಹಾರದ ಬಗ್ಗೆಯೂ ಜಾಗರೂಕರಾಗಿರಬೇಕು. ಬೆಳಗಿನ ಉಪಾಹಾರಕ್ಕಾಗಿ ನೀವು ಏನು ತಿನ್ನುತ್ತೀರೋ ಅದು ನಿಮ್ಮ ಇಡೀ ದಿನಕ್ಕೆ ಬಹಳ ಮುಖ್ಯವಾಗಿರುತ್ತದೆ . ಮಧ್ಯಾಹ್ನದ ಊಟದವರೆಗೂ ನೀವು ಹೊಟ್ಟೆ ತುಂಬಿದ ತೃಪ್ತಿಯನ್ನು ಅನುಭವಿಸುತ್ತೀರಾ ಅಥವಾ ಆ ಮೊದಲೇ ಬೇಡದ ಆಹಾರಗಳನ್ನು ಸೇವನೆ ಮಾಡುತ್ತೀರಾ? ಎನ್ನುವುದು ನಿಮ್ಮ ಮೇಲೆ ನಿರ್ಧರಿತವಾಗಿರುತ್ತದೆ. ಹೆಚ್ಚಿನ ಪ್ರೋಟೀನ್ ಹೊಂದಿರುವ ಉಪಾಹಾರ ಸೇವಿಸುವುದು ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು? ಕಡಿಮೆ ನೀರು ಕುಡಿಯುವ ಅಭ್ಯಾಸ ಇದ್ರೆ ಈ ಸಮಸ್ಯೆಗಳು ಬರುವುದು ಖಂಡಿತ
ಆದರೆ ಅತಿಯಾದ ಮಸಾಲೆಗಳ ಸೇವನೆಯು ನ್ಯೂನತೆಗಳನ್ನು ಉಂಟುಮಾಡಬಹುದು. ಮಸಾಲೆಯುಕ್ತ ಆಹಾರಗಳ ಅತಿಯಾದ ಬಳಕೆಯು ಜೀರ್ಣಾಂಗ ವ್ಯವಸ್ಥೆಗೆ ಕಿರಿಕಿರಿ ಉಂಟುಮಾಡುತ್ತದೆ, ಇದು ಎದೆಯುರಿ, ಆಸಿಡ್ ರಿಫ್ಲಕ್ಸ್ ಅಥವಾ ಹೊಟ್ಟೆ ಹುಣ್ಣುಗಳಿಗೆ ಕಾರಣವಾಗಬಹುದು. ಮೆಣಸಿನಕಾಯಿಯಂತಹ ಕೆಲವು ಮಸಾಲೆಗಳು ಕೆಲವರಿಗೆ ಚರ್ಮದ ಕಿರಿಕಿರಿ ಅಥವಾ ಅಲರ್ಜಿಗೆ ಕಾರಣವಾಗಬಹುದು. ಕೆಲವು ಮಸಾಲೆಗಳ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು. ಹೀಗಾಗಿ ಮಿತವ್ಯಯ ಮುಖ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ