ಭಾರತದಲ್ಲಿ ಕೊರೊನಾವೈರಸ್‌ BF.7 ರೂಪಾಂತರಿಯ ತೀವ್ರತೆ ಗಂಭೀರವಾಗಿರಲ್ಲ: ಸಿಸಿಎಂಬಿ ನಿರ್ದೇಶಕ

| Updated By: ರಶ್ಮಿ ಕಲ್ಲಕಟ್ಟ

Updated on: Dec 25, 2022 | 4:51 PM

ಭಾರತದಲ್ಲಿ ಕೊರೊನಾವೈರಸ್ ನ BF.7 ರೂಪಾಂತರದ ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ನಾವು ಭಾರತದಲ್ಲಿ ದೊಡ್ಡದಾದ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ನಂತರ ನಾವು ಲಸಿಕೆ ಪಡೆದೆವು. ಆಮೇಲೆ ಒಮಿಕ್ರಾನ್ ಅಲೆ ಬಂದಿತು ಮತ್ತು ನಾವು ಬೂಸ್ಟರ್ ಡೋಸ್​​ಗಳನ್ನು ಮುಂದುವರಿಸಿದ್ದೇವೆ.

ಭಾರತದಲ್ಲಿ ಕೊರೊನಾವೈರಸ್‌ BF.7 ರೂಪಾಂತರಿಯ ತೀವ್ರತೆ ಗಂಭೀರವಾಗಿರಲ್ಲ: ಸಿಸಿಎಂಬಿ ನಿರ್ದೇಶಕ
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಕೊರೊನಾವೈರಸ್‌ನ (Coronavirus) BF.7 ರೂಪಾಂತರದ ತೀವ್ರತೆಯು ಪ್ರಸ್ತುತ ಚೀನಾದಲ್ಲಿ ಚಾಲ್ತಿಯಲ್ಲಿರುವಷ್ಟು ಗಂಭೀರವಾಗಿರಲ್ಲ ಯಾಕೆಂದರೆ ಭಾರತೀಯರು ಈಗಾಗಲೇ  ಹಿಂಡಿನ ರೋಗನಿರೋಧಕ ಶಕ್ತಿ (herd immunity) ಹೊಂದಿದ್ದಾರೆ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB) ಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಅಗತ್ಯವನ್ನು ಒತ್ತಿಹೇಳಿದ ಸಿಸಿಎಂಬಿ ನಿರ್ದೇಶಕ ವಿನಯ್ ಕೆ ನಂದಿಕೂರಿ, ಈ ಎಲ್ಲಾ ರೂಪಾಂತರಗಳು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿವೆ. ಲಸಿಕೆ ಹಾಕಿದ ಮತ್ತು ಕೆಲವೊಮ್ಮೆ ಒಮಿಕ್ರಾನ್‌ನ ಹಿಂದಿನ ರೂಪಾಂತರಗಳಿಂದ ಸೋಂಕಿಗೆ ಒಳಗಾಗುವ ಜನರಿಗೆ ಸೋಂಕು ತಗಲಬಹುದು ಎಂಬ ಆತಂಕ ಯಾವಾಗಲೂ ಇರುತ್ತದೆ ಎಂದು ಹೇಳಿದರು. ಸೋಂಕಿನ ತೀವ್ರತೆ ಡೆಲ್ಟಾದಲ್ಲಿ ಇದ್ದಷ್ಟು ಅಲ್ಲ. ನಾವು ಒಂದು ಮಟ್ಟಿಗೆ ಹಿಂಡಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಇದಕ್ಕೆ ಕಾರಣ. ವಾಸ್ತವವಾಗಿ ನಾವು ಹಿಂಡಿನ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದೇವೆ ಏಕೆಂದರೆ ನಾವು ಇತರ ವೈರಸ್‌ಗಳಿಗೆ ಒಡ್ಡಿಕೊಂಡಿದ್ದೇವೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಭಾರತದಲ್ಲಿ ಕೊರೊನಾವೈರಸ್ ನ BF.7 ರೂಪಾಂತರದ ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ನಾವು ಭಾರತದಲ್ಲಿ ದೊಡ್ಡದಾದ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ನಂತರ ನಾವು ಲಸಿಕೆ ಪಡೆದೆವು. ಆಮೇಲೆ ಒಮಿಕ್ರಾನ್ ಅಲೆ ಬಂದಿತು ಮತ್ತು ನಾವು ಬೂಸ್ಟರ್ ಡೋಸ್​​ಗಳನ್ನು ಮುಂದುವರಿಸಿದ್ದೇವೆ. ನಾವು ಹಲವು ರೀತಿಯಲ್ಲಿ ಭಿನ್ನರಾಗಿದ್ದೇವೆ. ಚೀನಾದಲ್ಲಿ ಈಗ ಏನಾಗುತ್ತಿದೆಯೋ ಅದು ಭಾರತದಲ್ಲಿ ಆಗಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ 201 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,397 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಚೀನಾ ಅನುಸರಿಸುತ್ತಿರುವ “ಶೂನ್ಯ ಕೋವಿಡ್ ನೀತಿ” ಆ ದೇಶದಲ್ಲಿ ಸೋಂಕು ಹರಡಲು ಒಂದು ಕಾರಣ. ಅದೇ ವೇಳೆ ಕಡಿಮೆ ವ್ಯಾಕ್ಸಿನೇಷನ್ ಮಟ್ಟಗಳು ತೀವ್ರತೆಗೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:Corona in India: BF.7 ಕೊರೊನಾ ತಳಿ ನಿಮ್ಮ ಬಳಿ ಸುಳಿಯದಿರಲು ವೈದ್ಯರ ಈ ಸಲಹೆ ಪಾಲಿಸಿ

ಚೀನಾ ಅನುಸರಿಸುವ ಶೂನ್ಯ ಕೋವಿಡ್ ನೀತಿ ಮತ್ತು ಭಾರತದಲ್ಲಿ ಸಂಭವಿಸಿದಂತೆ ಹೆಚ್ಚಿನ ಜನರಿಗೆ ಅಲ್ಲಿ ಲಸಿಕೆ ಹಾಕಲಿಲ್ಲ. ಎಲ್ಲಾ ಹಿರಿಯರಿಗೆ ಲಸಿಕೆ ನೀಡಲಾಗುತ್ತದೆ. ಕೆಲವೊಮ್ಮೆ ಬೂಸ್ಟರ್ ಡೋಸ್ ಅನ್ನು ಸಹ ನೀಡಲಾಗುತ್ತದೆಎಂದು ಅವರು ಹೇಳಿದರು. ಈ ಹಂತದಲ್ಲಿ ಭಾರತದಲ್ಲಿ ಅಲೆ ಇರಬಹುದು ಅಥವಾ ಇಲ್ಲದಿರಬಹುದು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನಂದಿಕೂರಿ, ಈಗಿನಿಂದಲೇ ಅಲೆ ಬರುತ್ತಿರುವುದು ಆತಂಕಕಾರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದರು.

ಪ್ರಸ್ತುತ ಭಾರತದಲ್ಲಿ ಕೋವಿಡ್ ಪರೀಕ್ಷೆಗಳು ಮತ್ತು ಚಿಕಿತ್ಸೆ, ಲಸಿಕೆ ಎರಡಕ್ಕೂ ಸಾಕಷ್ಟು ಸಾಮರ್ಥ್ಯವಿದೆ ಎಂದು ಅವರು ಹೇಳಿದರು.

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ