Daily Walking: ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಎಷ್ಟು ಒಳ್ಳೆಯದು ಗೊತ್ತಾ?
ಪ್ರತಿದಿನ ನಿಯಮಿತವಾಗಿ ನಡೆಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿಯೂ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಧುಮೇಹ ರೋಗಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಅಭ್ಯಾಸವು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ನಡಿಗೆ ದೇಹಕ್ಕೆ ಬಹಳ ಮುಖ್ಯ. ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಕನಿಷ್ಠ 20-30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಟ್ಟುಕೊಳ್ಳಲು ನಿಯಮಿತವಾದ ವಾಕಿಂಗ್ ಬಹಳ ಒಳ್ಳೆಯದು ಎಂಬುದು ನಿಮಗೂ ತಿಳಿದಿರಬಹುದು. ಈ ಅಭ್ಯಾಸದಿಂದ ಮಧುಮೇಹ, ಸಂಧಿವಾತ, ಹೃದಯ ಮತ್ತು ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳನ್ನು ನಿವಾರಿಸಬಹುದು.
ಪ್ರತಿದಿನ ನಿಯಮಿತವಾಗಿ ನಡೆಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿಯೂ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಧುಮೇಹ ರೋಗಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಅಭ್ಯಾಸವು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಅಲ್ಲದೆ ಪ್ರತಿದಿನ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ರಕ್ತ ಪರಿಚಲನೆಯನ್ನು ಸುಧಾರಿಸಬಹುದು. ಪರಿಣಾಮವಾಗಿ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ.
ನೈಸರ್ಗಿಕ ನೋವು ನಿವಾರಕ
ಇದಲ್ಲದೆ, ಈ ರೀತಿಯ ಅಭ್ಯಾಸಗಳಿಂದ ದೇಹದ ವಿವಿಧ ಅಂಗಗಳು ಸಹ ಸಕ್ರಿಯವಾಗಿರುತ್ತದೆ. ಜೊತೆಗೆ ನೈಸರ್ಗಿಕವಾಗಿ ಪಾದದ ಮಸಾಜ್ ಆಗುತ್ತದೆ. ಪರಿಣಾಮವಾಗಿ, ಅಂಗಾಲುಗಳಲ್ಲಿ ಕಂಡು ಬರುವ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ ಮತ್ತು ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ.
ನಿದ್ರಾಹೀನತೆಯಿಂದ ಮುಕ್ತಿ ಸಿಗುತ್ತದೆ
ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ಯುವಕರಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತವರು ಪ್ರತಿದಿನ ಹುಲ್ಲಿನ ಮೇಲೆ ನಡೆಯುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ಬೆಳಿಗ್ಗೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ವಾಕಿಂಗ್ ಮಾಡುವುದರಿಂದ ನಿಮ್ಮ ಮನಸ್ಥಿತಿಯು ಸುಧಾರಿಸುತ್ತದೆ.
ಇದನ್ನೂ ಓದಿ: ಪ್ರತಿದಿನ ಪುದೀನಾ ತಿನ್ನಿ, ಈ ರೋಗಗಳಿಂದ ದೂರವಿರಿ
ಒತ್ತಡ ಕಡಿಮೆಯಾಗುತ್ತದೆ
ಈ ಅಭ್ಯಾಸದಿಂದ ಪ್ರಕೃತಿಗೆ ನೀವು ತುಂಬಾ ಹತ್ತಿರವಾಗುತ್ತೀರಿ. ಇದರಿಂದ ನಿಮ್ಮ ಒತ್ತಡ ಕಡಿಮೆ ಆಗುತ್ತದೆ. ಅದು ಅಲ್ಲದೆ ಮಧುಮೇಹಿಗಳಿಗೆ ಇದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಗರಗಳಲ್ಲಿ ಹುಲ್ಲಿನಿಂದ ಆವೃತವಾದ ಪ್ರದೇಶಗಳು ಸಿಗುವುದು ತುಂಬಾ ಕಷ್ಟ. ಆದರೆ ನಿಮಗೆ ಸಾಧ್ಯವಿದ್ದಲ್ಲಿ ಹುಲ್ಲಿನ ಮೇಲೆ ನಡೆಯುವ ಅವಕಾಶ ಕಳೆದುಕೊಳ್ಳಬೇಡಿ, ಕಷ್ಟವಾದರೂ ಅಭ್ಯಾಸ ಮಾಡಿಕೊಳ್ಳಿ.
ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಮಧುಮೇಹ ರೋಗಿಗಳು ಈ ರೀತಿ ವಾಕಿಂಗ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಇಂತವರಿಗೆ ಬಹಳ ಬೇಗ ಗಾಯಗಳಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: