AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ

ದೇಶದ ಹಲವು ಭಾಗಗಳಲ್ಲಿ ತಾಪಮಾನ ನಿರಂತರವಾಗಿ ಏರುತ್ತಿದ್ದು, ಇದು ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಷ್ಟೇಅಲ್ಲ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಹಾಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ಡಿಹೈಡ್ರೇಶನ್ ಆದಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ
Dehydration In Young ChildrenImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Apr 30, 2026 | 6:49 PM

Share

ದೇಶದ ಅನೇಕ ಭಾಗಗಳಲ್ಲಿ ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇದು ಎಲ್ಲರಿಗೂ ತಿಳಿದಂತಹ ವಿಚಾರ. ಈ ರೀತಿ ಉಷ್ಣತೆ ಹೆಚ್ಚುತ್ತಿರುವ ಪರಿಣಾಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಡಿಹೈಡ್ರೇಶನ್ (Dehydration) ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಪೀಡಿಯಾಟ್ರಿಕ್ ವಿಭಾಗದ ಡಾ. ವಿಪಿನ್ ಚಂದ್ರ ಉಪಾಧ್ಯಾಯ ಅವರ ಪ್ರಕಾರ, ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಬೆವರುವುದು ಸಾಮಾನ್ಯ. ಈ ವೇಳೆ ದೇಹದಿಂದ ನೀರು ವೇಗವಾಗಿ ಹೊರಹೋಗುತ್ತದೆ. ಜೊತೆಗೆ, ಸಾಕಷ್ಟು ನೀರು ಕುಡಿಯದಿರುವುದು, ಹೆಚ್ಚು ಹೊತ್ತು ಬಿಸಿಲಿನಲ್ಲಿ ಆಟವಾಡುವುದು, ಅಥವಾ ವಾಂತಿ-ಜಲದೋಷದಂತಹ ಸಮಸ್ಯೆಗಳು ಡಿಹೈಡ್ರೇಶನ್‌ಗೆ ಕಾರಣವಾಗುತ್ತವೆ. ಹಾಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ಡಿಹೈಡ್ರೇಶನ್ ಆದಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಿಹೈಡ್ರೇಶನ್ ಲಕ್ಷಣಗಳು;

ಮಕ್ಕಳಲ್ಲಿ ಡಿಹೈಡ್ರೇಶನ್ ಉಂಟಾದಾಗ ಕೆಲ ಪ್ರಮುಖ ಲಕ್ಷಣಗಳು ಕಾಣಿಸುತ್ತವೆ. ಬಾಯಾರಿಕೆ ಹೆಚ್ಚಾಗುವುದು, ತುಟಿ ಮತ್ತು ಬಾಯಿ ಒಣಗುವುದು ಪ್ರಾರಂಭಿಕ ಲಕ್ಷಣಗಳು. ಮಕ್ಕಳು ಸುಸ್ತಾಗುವುದು, ಕಿರಿಕಿರಿ ತೋರಿಸುವುದು ಮತ್ತು ಆಟದಲ್ಲಿ ಆಸಕ್ತಿ ಕಡಿಮೆ ಆಗುವುದು ಗಮನಿಸಬಹುದು. ಕೆಲವೊಮ್ಮೆ ಮೂತ್ರ ಪ್ರಮಾಣ ಕಡಿಮೆಯಾಗುವುದು ಅಥವಾ ಗಾಢ ಹಳದಿ ಬಣ್ಣದಲ್ಲಿ ಮೂತ್ರ ಹೊರಹೋಗುವುದು ಕೂಡ ಡಿಹೈಡ್ರೇಶನ್ ಸೂಚನೆಯಾಗಿರಬಹುದು. ಇದರ ಜೊತೆಗೆ, ಕಣ್ಣುಗಳು ಒಳಗೆ ಕುಸಿದಂತೆ ಕಾಣಿಸುವುದು ಮತ್ತು ಅಳುವಾಗ ಕಣ್ಣೀರು ಕಡಿಮೆಯಾಗಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ

ಡಿಹೈಡ್ರೇಶನ್ ತಡೆಗಟ್ಟಲು ಸಲಹೆಗಳು:

ಡಿಹೈಡ್ರೇಶನ್ ತಪ್ಪಿಸಲು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಸುವುದು ಅತ್ಯಂತ ಮುಖ್ಯ. ನೀರಿನ ಜೊತೆಗೆ ಎಳನೀರು, ಮಜ್ಜಿಗೆ ಮತ್ತು ಮನೆಯಲ್ಲಿ ತಯಾರಿಸಿದ ಓಆರ್‌ಎಸ್ ನೀಡುವುದು ಉತ್ತಮ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಆಟವಾಡುವುದನ್ನು ತಪ್ಪಿಸಿ, ಹೊರಗೆ ಹೋಗುವಾಗ ತಲೆಯನ್ನು ಮುಚ್ಚಿಕೊಳ್ಳುವುದು ಅಗತ್ಯ. ಹಗುರವಾದ ಮತ್ತು ಪೌಷ್ಟಿಕ ಆಹಾರ ನೀಡುವುದು ಕೂಡ ಸಹಾಯಕ. ಜೊತೆಗೆ ಸ್ವಚ್ಛತೆ ಕಾಪಾಡುವುದರಿಂದ ಸೋಂಕುಗಳನ್ನು ತಪ್ಪಿಸಬಹುದು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಮಗು ತುಂಬಾ ಸುಸ್ತಾಗಿದ್ದರೆ, ಪದೇ ಪದೇ ವಾಂತಿ ಮಾಡುತ್ತಿದ್ದರೆ ಅಥವಾ ಮೂತ್ರ ಸಂಪೂರ್ಣವಾಗಿ ಕಡಿಮೆಯಾಗುವುದು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us